ಬೆಂಗಳೂರು: ಚುನಾವಣೆಗೆ ಮುನ್ನ ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯೃಂಟಿ ಯೋಜನೆಗಳ ಕುರಿತು ವಿವಿಧ ಸಚಿವರು ವಿಭಿನ್ನ ವ್ಯಾಖ್ಯಾನ ಮಾಡುತ್ತಿರುವ ನಡುವೆಯೇ ಡಿಸಿಎಂ ಡಿ.ಕೆ. ಶಿವಕುಮಾರ್ ಸಹ ಹೊಸ ವಿಶ್ಲೇಷಣೆ ನೀಡಿದ್ದಾರೆ.
ಮನೆಮನೆಗೆ ಗ್ಯಾರಂಟಿ ಕಾರ್ಡ್ ನೀಡಿದ ರೀತಿ ಯೋಜನೆ ಜಾರಿ ಮಾಡಲು ಆಗುವುದಿಲ್ಲ ಎನ್ನುವ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಮನೆ ಯಜಮಾನಿಗೆ ಕೊಡುತ್ತೇವೆ ಎಂದು ನಾವು ಹೇಳಿದ್ದೇವೆ. ಮನೆ ಯಜಮಾನಿ ತಾಯಿನಾ ಅಥಾವ ಹೆಂಡತಿನಾ? ಯಾರು ತೀರ್ಮಾನ ಮಾಡುವವರು? ಯಾರ ಖಾತೆ ಹಣ ಹಾಕಬೇಕು? ಖಾತೆ ಇಲ್ಲ ಅಂದರೆ ಖಾತೆ ಮಾಡಿಸಬೇಕು.
ಜೂನ್ 1 ನೇ ತಾರೀಖು ಕ್ಯಾಬಿನೆಟ್ ಇದೆ. ಗೈಡ್‌ಲೈನ್ಸ್ ತನ್ನಿ ಎಂದು ಅಧಿಕಾರಿಗಳಿಗೆ ಹೇಳಿದ್ದೇವೆ. ಯಾರೂ ಆತಂಕಪಡುವುದು ಬೇಡ. 15 ಲಕ್ಷ ರೂ. ಯಾಕೆ ಬಂದಿಲ್ಲ ಅಂತ ಬಿಜೆಪಿಯವರನ್ನು, ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೇಳಿ. ಮಗು ಹುಟ್ಟಿ ಈಗ 15 ದಿನ ಕೂಡ ಆಗಿಲ್ಲ. ಬಟ್ಟೆ ಸೈಜ್ ಹುಡುಕುತ್ತಾ ಇದ್ದೇವೆ ಎಂದು ಹೇಳಿದರು.
ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬಿ.ಕೆ. ಹರಿಪ್ರಸಾದ್ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಹರಿಪ್ರಸಾದ್ ಅವರು ನಮಗಿಂತ ಸಿನಿಯರ್. ಅವರದ್ದೇ ಆದ ಕೆಲವು ನೋವು ಇರುತ್ತವೆ. ಈ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ ಎಂದರು.
ಇದನ್ನೂ ಓದಿ: congress guarantee: ಗ್ಯಾರಂಟಿಗಳ ಅನುಷ್ಠಾನವು ಸಿದ್ದರಾಮಯ್ಯ ಚೆಕ್‌ಗೆ ಸಹಿ ಹಾಕುವಷ್ಟು ಸುಲಭ ಅಲ್ಲ: ಸಚಿವ ಡಾ. ಸುಧಾಕರ್