Site icon Vistara News

DCM Post: ಒನ್ ಮ್ಯಾನ್ ಒನ್ ಪೋಸ್ಟ್ ಕೂಗಿಗೆ ಡಿಕೆಶಿ ಡೋಂಟ್ ಕೇರ್‌; ಕೇಡರ್ ಬೇಸ್ ಪಾರ್ಟಿ ಕಟ್ಟಲು ಪಣ!

DCM Post

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ರಾಜ್ಯ ಕಾಂಗ್ರೆಸ್‌ ನಾಯಕರಿಂದಲೇ ಒತ್ತಾಯ ಕೇಳಿಬರುತ್ತಿದೆ. ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ (DCM Post) ಸ್ಥಾನವನ್ನು ಒಬ್ಬರಿಗೆ ನೀಡಿರುವುದಕ್ಕೆ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ಆದರೆ, ಒನ್ ಮ್ಯಾನ್ ಒನ್ ಪೋಸ್ಟ್ ಕೂಗಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದು, ಕೇಡರ್ ಬೇಸ್ ಪಾರ್ಟಿ ಕಟ್ಟಲು ಅವರು ಪಣತೊಟ್ಟಿದ್ದಾರೆ. ಇದಕ್ಕಾಗಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ಚುನಾವಣೆ ದೃಷ್ಟಿಯಿಂದ ಪ್ರತ್ಯೇಕ ಆ್ಯಕ್ಷನ್ ಪ್ಲ್ಯಾನ್ ಸಿದ್ಧಪಡಿಸಿ ಪದಾಧಿಕಾರಿಗಳ ಸಭೆಯಲ್ಲಿ ಮಂಡನೆ ಮಾಡಿದ್ದಾರೆ. ಇನ್ನು ಲೋಕಸಭೆ ಫಲಿತಾಂಶದ ಹಿನ್ನಡೆ ಹಿನ್ನೆಲೆಯಲ್ಲಿ ವಲಯವಾರು ಸತ್ಯ ಶೋಧನಾ ಸಮಿತಿ ರಚನೆಗೆ ನಿರ್ಧಾರ ಮಾಡಿದ್ದಾರೆ.

ಲೋಕಸಭೆಯಲ್ಲಿ ಹಿನ್ನಡೆ ಅನುಭವಿಸಿದ ವಿಧಾನಸಭಾ ಕ್ಷೇತ್ರಗಳ ಪ್ರಗತಿ ಪರಿಶೀಲನೆ, ಕಾರಣಗಳನ್ನು ಪತ್ತೆ ಹಚ್ಚುವುದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ರೂಪುರೇಷೆ ಸಿದ್ಧಪಡಿಸಲು ವಲಯವಾರು ಸಮಿತಿ ರಚನೆ ಮಾಡಲು ಹಾಗೂ ಬಿಬಿಎಂಪಿ, ಜಿಪಂ, ತಾಪಂ ಚುನಾವಣೆಗೆ ಹಾಗೂ ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ | Hosur Airport: ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಹೊಣೆ ಬಿಐಎಎಲ್‌ಗೆ! ಕರ್ನಾಟಕಕ್ಕೆ ಟಕ್ಕರ್‌ ಕೊಟ್ಟ ತಮಿಳುನಾಡು

ಪ್ರತಿ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರವಾರು ಸಂಚಾಲನ ಸಮಿತಿ ರಚನೆಗೂ ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ಮಾಜಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್ ಸದಸ್ಯರ ಪ್ರತ್ಯೇಕ ಸಭೆಯನ್ನು ಡಿಕೆಶಿ ನಡೆಸಲಿದ್ದಾರೆ. ಕೆಳಹಂತದಲ್ಲಿ ಪಕ್ಷ ಬಲವರ್ಧನೆಗೆ ಸಲಹೆ ನೀಡಲು ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹಾಗೆಯೇ ಬೂತ್ ಮಟ್ಟದ ಸಮಸ್ಯೆ ಬಗೆಹರಿಸಲು ವಾರ್ಡ್ ಸಮಿತಿ/ ಪಂಚಾಯತ್ ಸಮಿತಿಗಳ ರಚನೆಗೆ ತೀರ್ಮಾನ ಮಾಡಿದ್ದು, ಗ್ಯಾರಂಟಿ ಫಲಾನುಭವಿಗಳ ದಾಖಲೆ ಹಾಗೂ ಮೊಬೈಲ್ ಸಂಖ್ಯೆ ಸಂಗ್ರಹಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಮಟ್ಟದಲ್ಲಿ ಅಪಾರ್ಟ್ಮೆಂಟ್ ಸೆಲ್ ಹಾಗೂ ರೆಸಿಡೆಂಟ್ ವೆಲ್ಫೆರ್ ಅಸೋಸಿಯೇಷನ್‌ಗೆ ಪುನಶ್ಚೇತನ ನೀಡಲು ಯೋಜಿಸಿದ್ದು, ಉಪ ಚುನಾವಣೆಗಳಿಗೆ ಸಚಿವರು, ಶಾಸಕರನ್ನು ಹೋಬಳಿ ಮಟ್ಟದಲ್ಲಿ ನಿಯೋಜನೆಗೆ ನಿರ್ಧಾರ ಮಾಡಿದ್ದಾರೆ. ಅಲ್ಲದೇ ಸ್ಥಳೀಯ ಶಾಸಕರು, ಹಿರಿಯ ನಾಯಕರ ನೇತೃತ್ವದಲ್ಲಿ ಎಲೆಕ್ಷನ್ ಕ್ಯಾಂಪ್ ಆಫೀಸ್, ವಾರ್ ರೂಂ ಸ್ಥಾಪನೆ ಮಾಡಲು ನಿರ್ಧರಿಸಿದ್ದಾರೆ.

ಪದಾಧಿಕಾರಿಗಳ ಸಭೆಯಲ್ಲಿ ಎರಡು‌ ರೀತಿಯ ಪ್ಲ್ಯಾನ್ ಆಫ್ ಆ್ಯಕ್ಷನ್ ಮಾಡಲು ಮುಂದಾಗಿದ್ದು, ಪಕ್ಷ ಸಂಘಟನೆ ಮತ್ತು ಮುಂಬರುವ ಚುನಾವಣೆ ಕುರಿತು ಕಾರ್ಯ ಯೋಜನೆ ಮಾಡಲು ತೀರ್ಮಾನಿಸಿದ್ದಾರೆ.

ಪಕ್ಷ ಸಂಘಟನೆಯ ಕಾರ್ಯ ಯೋಜನೆ ಏನು?

1.ಉಸ್ತುವಾರಿಗಳ ಹಂಚಿಕೆ
ಜಿಲ್ಲೆಗಳು, ಅಸೆಂಬ್ಲಿ ಕ್ಷೇತ್ರಗಳಿಗೆ ನಿಯೋಜಿಸಲಾದ ಕೆಪಿಸಿಸಿ ಪದಾಧಿಕಾರಿಗಳಗೆ ಜವಾಬ್ದಾರಿ ಹಂಚುವುದು

2.ಹೊಣೆಗಾರಿಕೆ
ಎಲ್ಲಾ ಕೆಪಿಸಿಸಿ ಪದಾಧಿಕಾರಿಗಳಿಂದ ಮಾಸಿಕ ಕೆಲಸದ ವರದಿಗಳನ್ನು ಸಂಗ್ರಹಿಸುವುದು

    3.ವಿಭಾಗೀಯ ಸಭೆಗಳು
    ಕೆಪಿಸಿಸಿ ವಿಭಾಗೀಯ ಸಭೆಗಳು ಜುಲೈ 2024 ರಲ್ಲಿ ನಡೆಯಲಿವೆ
    ಆಗಸ್ಟ್ 2024 ರಲ್ಲಿ ಬ್ಲಾಕ್, ಜಿಲ್ಲೆ ಮತ್ತು ಅಸೆಂಬ್ಲಿ ಹಂತಗಳಲ್ಲಿ ಸಾಂಸ್ಥಿಕ ಕಾರ್ಯಾಗಾರಗಳನ್ನು ನಡೆಸುವುದು.

    4.ದತ್ತಾಂಶ ಪರಿಶೀಲನೆ
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಬೂತ್ ಸಮಿತಿ ಮತ್ತು BLA 2 ನೇಮಕಾತಿಗಳನ್ನು ಪರಿಶೀಲಿಸುವುದು

    5.ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು
    ಪ್ರತಿ ಜಿಲ್ಲೆ/ಬ್ಲಾಕ್/ಬೂತ್‌ನಲ್ಲಿ ಪದಾಧಿಕಾರಿಗಳನ್ನು ನೇಮಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು
    ಖಾಲಿ ಇರುವ ಹುದ್ದೆಗಳನ್ನ ಒಂದು ಅಥವಾ ಎರಡು ತಿಂಗಳಿನಲ್ಲಿ ಡಿಸಿಸಿ ಅಧ್ಯಕ್ಷರು, ಸ್ಥಳೀಯ ಸಂಸದರು/ಶಾಸಕರು ಮತ್ತು ಹಿರಿಯ ಪದಾಧಿಕಾರಿಗಳು ಅಭಿಪ್ರಾಯ ಪಡೆದು ಭರ್ತಿ ಮಾಡುವುದು

      6.ಡಿಜಿಟಲೈಸೇಶನ್
      ಬ್ಲಾಕ್, ಹಿರಿಯ ನಾಯಕರು, ಮುಂಚೂಣಿ ಘಟಕಗಳು, ಇಲಾಖೆಗಳ ಮುಖ್ಯಸ್ಥರು ಹೀಗೆ ಎಲ್ಲರ ಸಂಪರ್ಕ ವಿವರಗಳೊಂದಿಗೆ ಕೆಪಿಸಿಸಿ ಡೇಟಾ ಡಿಜಿಟಲೈಸೇಷನ್ ಮಾಡುವುದು

      7.ವೆಬ್‌ಸೈಟ್ ಮತ್ತು ಸೋಶಿಯಲ್ ಮೀಡಿಯಾ
      ಕೆಪಿಸಿಸಿ ವೆಬ್‌ಸೈಟ್‌ನಲ್ಲಿ ಪಕ್ಷದ ಕಾರ್ಯಕ್ರಮಗಳ ಕುರಿತು ಅಪ್‌ಡೇಟ್‌ ಆಗುತ್ತಿರಬೇಕು

      8.ಪ್ರಚಲಿತ ವಿದ್ಯಮಾನಗಳು
      ಕೆಪಿಸಿಸಿ ಪದಾಧಿಕಾರಿಗಳನ್ನು ಬೆಂಬಲಿಸುವಂತ, ನರೇಟಿವ್ ಸೆಟ್ ಮಾಡುವ ಕೌಂಟರ್ ಮಾಡಬೇಕು

      9.ಗ್ರೌಂಡ್ ಲೆವೆಲ್ ರೀಚ್
      ಬ್ಲಾಕ್ ಮತ್ತು ಬೂತ್ ಮಟ್ಟದ ನಡುವೆ ಮಧ್ಯವರ್ತಿಗಳಾಗಿ ಪಂಚಾಯತಿವಾರು ಸಮಿತಿಗಳು ಕೆಲಸ ಮಾಡಬೇಕು

        10.ಸಾಧನೆಗಳ ಮಾಹಿತಿ
        ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನ ಬ್ಲಾಕ್ ಮತ್ತು ಬೂತ್ ಸಮಿತಿಗಳ ಮೂಲಕ ಸ್ಥಳೀಯವಾಗಿ ಪ್ರಚಾರ ಮಾಡಬೇಕು

          11.ಬೂತ್ ಮಟ್ಟದ ಫಲಾನುಭವಿ ಕಾರ್ಯಕ್ರಮ
          ಸರ್ಕಾರವು ಕೋಟಿಗಟ್ಟಲೆ ಫಲಾನುಭವಿಗಳನ್ನು ಸೃಷ್ಟಿಸಿದೆ
          ಹೀಗಾಗಿ ರಾಜ್ಯಾದ್ಯಂತ ತಳಮಟ್ಟದ ಆಂದೋಲನವನ್ನು ರಚಿಸಲು ಫಲಾನುಭವಿ ಆಧಾರಿತ ಕಾರ್ಯಕ್ರಮವನ್ನು ಪ್ರಾರಂಭಿಸುವುದು

          12.ಡಿಜಿಟಲ್ ಯೂತ್
          ತ್ವರಿತ ಮಾಹಿತಿ ಒದಗಿಸಲು ಹಾಗೂ ಪ್ರಚಾರ ಮಾಡಲು ಪ್ರತಿ ಬೂತ್‌ನಲ್ಲಿ “ಡಿಜಿಟಲ್ ಯೂತ್” ಸ್ಥಾಪಿಸುವುದು.
          ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗ ಇದನ್ನ ನಿರ್ವಹಿಸುವುದು.

            13.ಸದಸ್ಯತ್ವ ನೋಂದಣಿ
            ಪಕ್ಷದ ಸದಸ್ಯರನ್ನು ಹೆಚ್ಚಿಸುವ ಸಲುವಾಗಿ ಮತ್ತೊಮ್ಮೆ ಸದಸ್ಯತ್ವ ನೋಂದಣಿ ಮರುಪ್ರಾರಂಭಿಸುವುದು

              14. AIPC ಮತ್ತು ವೃತ್ತಿಪರರ ಕೋಶ ಪುನರುಜ್ಜೀವನ
              ವೃತ್ತಿಪರರ ಕೋಶ ಮತ್ತು AIPC ಅನ್ನು ಪುನರುಜ್ಜೀವನಗೊಳಿಸಲಾಗುವುದು
              ನಗರ ಕಾರ್ಯನಿರತ ವೃತ್ತಿಪರರನ್ನ ಹೆಚ್ಚೆಚ್ಚು ತಲುಪುವಂತೆ ಮಾಡುವುದು ಇದರ ಉದ್ದೇಶ

              ಚುನಾವಣಾ ಸಿದ್ಧತೆಯ ಪ್ಲಾನ್ ಆಫ್ ಆ್ಯಕ್ಷನ್

              1.ವಿಭಾಗೀಯ ಸತ್ಯಶೋಧನೆ ಮತ್ತು ತಯಾರಿ ಸಮಿತಿ
              ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಸೋಲಿನ ಕಾರಣಗಳನ್ನು ತನಿಖೆ ಮಾಡಲು ಸಮಿತಿಯನ್ನು ನೇಮಿಸುವುದು.
              ಇತ್ತೀಚಿನ ಚುನಾವಣೆಯಲ್ಲಿ ನಮ್ಮ ಕಾರ್ಯಕ್ಷಮತೆಗೆ ಕಾರಣಗಳನ್ನು ಅಳೆಯಲು ವಿಭಾಗವಾರು ಸಮಿತಿಗಳು ಕೆಲಸ ಮಾಡುತ್ತವೆ.
              ಮುಂಬರುವ ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ಚುನಾವಣೆಗಳಿಗೆ ನಿಖರ ಮಾಹಿತಿ ಒದಗಿಸುವುದು.

                2.ಕ್ರಿಯಾಶೀಲ ಪಾತ್ರ
                ಮುಂಬರುವ BBMP/ZP/TP ಚುನಾವಣೆಗಳು ಮತ್ತು ಉಪಚುನಾವಣೆಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಕೆಪಿಸಿಸಿ ಕಚೇರಿ ಪೂರ್ವಭಾವಿಯಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು

                3.ಸಮನ್ವಯ ತಂಡಗಳು
                ಪ್ರತಿ ಜಿಲ್ಲೆ, ವಿಧಾನಸಭಾ ಕ್ಷೇತ್ರವು ಅಭ್ಯರ್ಥಿಗಳಿಗೆ ಸಹಾಯ ಮಾಡಲು ಮತ್ತು ಕೆಪಿಸಿಸಿಗೆ ವರದಿ ಮಾಡಲು ಹಿರಿಯ ನಾಯಕರ ನೇತೃತ್ವದಲ್ಲಿ ಕಾರ್ಯನಿರತ ತಂಡ ರಚಿಸುವುದು
                ಸಮನ್ವಯ ತಂಡಕ್ಕೆ ಆಯಾ ಚುನಾವಣೆಗೆ ನಿರ್ಣಾಯಕ ಬೂತ್‌ಗಳನ್ನು ಗುರುತಿಸುವ ಜವಾಬ್ದಾರಿ ಇರುತ್ತದೆ

                4.ವಿಭಾಗೀಯ ಸಭೆಗಳು
                ಎಲ್ಲಾ ಮಾಜಿ TP/ZP ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು/ಉಪ ನಾಯಕರ ಸಭೆಗಳನ್ನ ಮಾಡಿ ಸಲಹೆ ಸೂಚನೆ ಪಡೆಯುವುದು

                5.ಮತದಾರರ ಪಟ್ಟಿಯನ್ನು ನವೀಕರಿಸುವುದು
                ಮತದಾರರ ಪಟ್ಟಿಯಿಂದ ಮತದಾರರ ಸೇರ್ಪಡೆ ಮತ್ತು ಅಳಿಸುವಿಕೆ ಮತ್ತು ಅದರ ನಿರಂತರ ಮೇಲ್ವಿಚಾರಣೆ ಮಾಡಬೇಕು

                6.ಸಮನ್ವಯ ಸಮಿತಿಗಳು
                ಬಿ.ಬಿ.ಎಂ.ಪಿ ಮತ್ತು ಗ್ರಾಮ ಪಂಚಾಯತಿಗಾಗಿ ವಾರ್ಡ್/ಪಂಚಾಯತ್ ವಾರು ಕಮಿಟಿಗಳನ್ನು ಮಾಡುವುದು
                ಗ್ರೌಂಡ್ ಲೆವೆಲ್‌ಗೆ ತಲುಪಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ರೂಪಿಸುವುದು

                7.ಫಲಾನುಭವಿ ಡೇಟಾ
                ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಡೇಟಾವನ್ನು ಸಂಗ್ರಹಿಸುವುದು ಮತ್ತು ಪ್ರತ್ಯೇಕಿಸುವುದು
                ನಿರ್ದಿಷ್ಟ ಸಂದೇಶವನ್ನು ಕಳುಹಿಸುವ ಸಲುವಾಗಿ ಡೇಟಾ ಬಳಕೆ ಮಾಡುವುದು.

                8.ಅಪಾರ್ಟ್‌ಮೆಂಟ್ ಸೆಲ್
                ಬಿಬಿಎಂಪಿ ಚುನಾವಣೆ ಅನುಕೂಲಕ್ಕಾಗಿ ಆರ್‌ಡಬ್ಲ್ಯೂಎ ಮತ್ತು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ತಲುಪಲು ಕೆಪಿಸಿಸಿ ಅಪಾರ್ಟ್‌ಮೆಂಟ್ ಸೆಲ್ ಪುನರುಜ್ಜೀವನಗೊಳಿಸುವುದು

                9.ಉಪಚುನಾವಣೆಗಳ ಗಮನ
                ವಿಧಾನಸಭೆ ಮತ್ತು ಪರಿಷತ್ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸಲು ಪಕ್ಷದ ಹಿರಿಯ ನಾಯಕರು, ಶಾಸಕರು ಮತ್ತು ಇತರ ಪ್ರಮುಖ ನಾಯಕರನ್ನು ನಿಯೋಜಿಸುವುದು

                  10.ಚುನಾವಣಾ ಶಿಬಿರ ಕಚೇರಿಗಳು
                  ಹಿರಿಯ ಕೆಪಿಸಿಸಿ ನಾಯಕರು ಮತ್ತು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಉಪ-ಚುನಾವಣೆ ಸ್ಥಾನಗಳಲ್ಲಿ ಚುನಾವಣಾ ಶಿಬಿರ ಕಚೇರಿಗಳು/ವಾರ್ ರೂಮ್‌ಗಳನ್ನು ಸ್ಥಾಪಿಸಿ.

                  11.ಪರಿಶೀಲನಾ ಸಭೆಗಳು
                  ಮಾಜಿ TP/ZP ಅಧ್ಯಕ್ಷರು/ಉಪಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು/ಉಪ ನಾಯಕರ ಸಭೆಗಳನ್ನು ನಡೆಸಿ ಜಬಾವ್ದಾರಿ ಹಂಚುವುದು ಹಾಗೂ ಸಲಹೆ ಪಡೆಯುವುದು

                  12.ಕಾರ್ಯಕ್ಷಮತೆಯ ವಿಮರ್ಶೆ
                  ಇತ್ತೀಚಿನ ಲೋಕಸಭೆ ಚುನಾವಣೆಗಳಲ್ಲಿನ ಕಾರ್ಯಕ್ಷಮತೆಯನ್ನು ಕೂಲಂಕಷವಾಗಿ ಪರಿಶೀಲಿಸುವುದು
                  ಯಾವ ಅಸೆಂಬ್ಲಿ ಸ್ಥಾನಗಳು ಕಳಪೆ ಸಾಧನೆ ಮಾಡಿವೆ ಎಂಬುದನ್ನು ಗುರುತಿಸುವುದು ಮತ್ತು ಅದಕ್ಕೆ ಕಾರಣ ತಿಳಿದುಕೊಳ್ಳುವುದು (important)

                  13.ಸದಸ್ಯತ್ವ ಡ್ರೈವ್ ಬಳಕೆ
                  ರಾಜ್ಯದಾದ್ಯಂತ ಕೆಪಿಸಿಸಿ ಸದಸ್ಯರನ್ನು ತಲುಪಲು, ಕೆಪಿಸಿಸಿ ಸದಸ್ಯತ್ವ ಡ್ರೈವ್‌ನಿಂದ ಡೇಟಾವನ್ನು ಬಳಸಿಕೊಳ್ಳುವುದು

                    14.ವಿಷನ್ ಡಾಕ್ಯುಮೆಂಟ್
                    ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ವಿಷನ್ ಡಾಕ್ಯುಮೆಂಟ್/ಪ್ರಣಾಳಿಕೆಯನ್ನು ರಚಿಸುವುದು

                    ಇದನ್ನೂ ಓದಿ | DV Sadananda Gowda: ಬಿಜೆಪಿ ರಾಜ್ಯ ನಾಯಕರ ಮೇಲೆ ಸಿಡಿದೆದ್ದ ಸದಾನಂದ ಗೌಡ; ಪಕ್ಷವಿರೋಧಿಗಳಿಗೆ ಮಣೆ ಹಾಕಿದ್ದಕ್ಕೆ ಕಿಡಿ

                    ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಸೋಮವಾರ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ್, ಜಿ.ಸಿ. ಚಂದ್ರಶೇಖರ್, ವಿ.ಎಸ್. ಉಗ್ರಪ್ಪ, ರಮಾನಾಥ್ ರೈ ಸೇರಿದಂತೆ ಕೆಪಿಸಿಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

                    Exit mobile version