ಆನೇಕಲ್: ಮೊನ್ನೆ ತಲೆ ಬುರುಡೆ ಇಂದು ಅಪರಿಚಿತ ಮಹಿಳೆಯ ಕೈ (Dead Body Found) ಪತ್ತೆಯಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟದ ಕಾಡಂಚಿನ ಗ್ರಾಮ ಬ್ಯಾಟರಾಯನದೊಡ್ಡಿ ಬಳಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಕೈ ಪತ್ತೆಯಾಗಿದೆ.
ಕೈಯಲ್ಲಿ ಬಳೆಗಳು ಇದ್ದ ಕಾರಣಕ್ಕೆ ಆ ಆಧಾರದ ಮೇಲೆ ಮಹಿಳೆ ಕೈ ಇದು ಎಂದು ತಿಳಿದು ಬಂದಿದೆ. ಪೊದೆಯಲ್ಲಿದ್ದ ಕೈಯನ್ನು ನಾಯಿಗಳು ಎಳೆದಾಡಿ ತಂದಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಶನಿವಾರ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯಲ್ಲಿ ತಲೆಬರುಡೆಯೊಂದು ಪತ್ತೆಯಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಪೋಡು ಗ್ರಾಮದ ಬಳಿ ಕೊಳೆತ ಸ್ಥಿತಿಯಲ್ಲಿ ತಲೆಬುರುಡೆ ಸಿಕ್ಕಿತ್ತು. ಮಹಿಳೆಯನ್ನು ಕೊಂದು ಅಂಗಾಂಗಳನ್ನು ಕತ್ತರಿಸಿ ಅನುಮಾನ ಬಾರದಿರಲಿ ಎಂದು ಬೇರೆ ಬೇರೆ ಕಡೆ ಎಸೆದಿರುವ ಶಂಕೆ ಇದೆ.
ಇದನ್ನೂ ಓದಿ: Mallinath Mutya: ಅಟ್ರಾಸಿಟಿ, ಅತ್ಯಾಚಾರ ಪ್ರಕರಣದಲ್ಲಿ ಹವಾ ಮಲ್ಲಿನಾಥ ಮುತ್ಯಾ ಜೈಲುಪಾಲು
ಉಳಿದ ಅಂಗಾಂಗಗಳಿಗಾಗಿ ಪೊಲೀಸರು ಹುಡುಕಾಟವನ್ನು ನಡೆಸಿದ್ದು, ತಲೆಬುರುಡೆ ಹಾಗೂ ಸಿಕ್ಕಿರುವ ಕೈ ಜಾಡು ಹಿಡಿದು ತನಿಖೆಯನ್ನು ಮುಂದುವರಿಸಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಡವಿಲ್ಲದ ರುಂಡ ಪತ್ತೆ
ಫೆ.17ರಂದು ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಪೋಡು ಬಳಿ ಮುಂಡವಿಲ್ಲದ ರುಂಡ ಪತ್ತೆಯಾಗಿತ್ತು. ಹಂತಕರು ಕೊಲೆ ಮಾಡಿ ರುಂಡವನ್ನು ಎಸೆದು ಹೋಗಿದ್ದರು. ಮುಂಡ ಮತ್ತು ಕೈಕಾಲುಗಳು ಪತ್ತೆಯಾಗಿರಲಿಲ್ಲ. ಪತ್ತೆಯಾದ ರುಂಡವು ಪುರುಷ ಅಥವಾ ಮಹಿಳೆಯದ್ದ ಎನ್ನುವ ಚಹರೆ ಇನ್ನೂ ಪತ್ತೆಯಾಗಿರಲಿಲ್ಲ. ಇದೀಗ ಬ್ಯಾಟರಾಯನದೊಡ್ಡಿ ಬಳಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಕೈ ಪತ್ತೆಯಾಗಿದೆ. ಹೀಗಾಗಿ ಪೋಡು ಬಳಿ ಸಿಕ್ಕಿರುವ ರುಂಡಕ್ಕೂ ಬ್ಯಾಟರಾಯನದೊಡ್ಡಿಯಲ್ಲಿ ಸಿಕ್ಕಿರುವ ಕೈಗೂ ಏನಾದರೂ ಸಂಬಂಧ ಇದ್ಯಾ ಎಂದು ಪೊಲೀಸರು ತಾಳೆ ಹಾಕುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ