Site icon Vistara News

ವಿದ್ವಾಂಸ, ಸಾಹಿತಿ ಮಲೆಯೂರು ಗುರುಸ್ವಾಮಿ ಇನ್ನಿಲ್ಲ

maleyuru guruswami

ಚಾಮರಾಜನಗರ: ಹಿರಿಯ ವಿದ್ವಾಂಸ, ಕಾದಂಬರಿಕಾರ ಪ್ರೊ. ಮಲೆಯೂರು ಗುರುಸ್ವಾಮಿ (76) ವಿಧಿವಶರಾಗಿದ್ದಾರೆ.

ಕಾದಂಬರಿಕಾರ, ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾಗಿದ್ದ ಮಲೆಯೂರು ಗುರುಸ್ವಾಮಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನಿಕಟಪೂರ್ವ ರಾಜ್ಯಾಧ್ಯಕ್ಷರಾಗಿದ್ದರು. ʼಕಪಿಲೆ ಹರಿದಳು ಕಡಲಿಗೆ’ ಎಂಬ ಅವರ ಕಾದಂಬರಿಯನ್ನು ಟಿ.ಎಸ್.ನಾಗಾಭರಣ ಅವರು ಬೆಂಗಳೂರು ನಾಗರತ್ನಮ್ಮ ಎಂದು ನಾಟಕವಾಗಿ ನಿರ್ದೇಶಿಸಿದ್ದಾರೆ. ಮಹಾಯಾತ್ರಿ, ಬಂಗಾರದೊಡ್ಡಿ ಮೊದಲಾದವು ಅವರ ಕಾದಂಬರಿಗಳು. ಜೊತೆಗೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ.

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೈಸೂರು ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೈಸೂರು ಜೆ.ಎಸ್.ಎಸ್. ಮಹಾವಿದ್ಯಾಪೀಠದ ಬಳಿ ಇಂದು ಬೆಳಿಗ್ಗೆ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಅವರ ಹುಟ್ಟೂರಾದ ಚಾಮರಾಜನಗರ ತಾಲ್ಲೂಕಿನ ಮಲೆಯೂರಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ: BKS Varma Death: ಮಹಾನ್ ಕಲಾವಿದ ಬಿ.ಕೆ.ಎಸ್. ವರ್ಮಾಗೆ ಸಮಸ್ತ ಕನ್ನಡಿಗರ ಪರವಾಗಿ ಕಸಾಪ ಶ್ರದ್ಧಾಂಜಲಿ

Exit mobile version