ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ದೀಪಾವಳಿ (Deepawali 2022) ಅಂಗವಾಗಿ ಹಾಲರವೆ ಉತ್ಸವಕ್ಕೆ ವಿಜೃಂಭಣೆಯ ಚಾಲನೆ ಸಿಕ್ಕಿದ್ದು, ಬೇಡಗಂಪಣ ಸಮುದಾಯದ 101 ಹೆಣ್ಣು ಮಕ್ಕಳು ವಿಶೇಷ ಆಚರಣೆಗೆ ಸಾಕ್ಷಿಯಾದರು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ ಈ ಸಂಪ್ರದಾಯ ನಡೆದುಕೊಂಡು ಬಂದಿದ್ದು, ಬೇಡಗಂಪಣ ಸಮುದಾಯದ ೧೦೧ ಹೆಣ್ಣುಮಕ್ಕಳು ಬಿಂದಿಗೆಯಲ್ಲಿ ನೀರನ್ನು ಹೊತ್ತು ಮೆರವಣಿಗೆ ಸಾಗಿದರು. ಬೆಟ್ಟ ಹತ್ತಿ ಬಂದು ಮಲೆ ಮಹದೇಶ್ವರನಿಗೆ ಅಭಿಷೇಕ ಮಾಡುವ ಕೈಂಕರ್ಯದಲ್ಲಿ ಭಾಗಿಯಾದರು.
ನೆರವೇರಿದ ಪೂಜಾ ಕೈಂಕರ್ಯ
ದೀಪಾವಳಿ ಪ್ರಯುಕ್ತ ಶ್ರೀ ಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಾಲರವೆ ಉತ್ಸವ ನಡೆದಿದ್ದು, ಹಾಲರಳ್ಳದಿಂದ ಕತ್ತಿ ಪೂಜೆ ಮಾಡಿ ದೇವಾಲಯಕ್ಕೆ ಹಾಲರವೆ ತರಲಾಯಿತು. ಈ ವೇಳೆ ಮಹದೇಶ್ವರನಿಗೆ ಎಣ್ಣೆಮಜ್ಜನ ಸೇವೆ, ತ್ರಿಕಾಲ ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಲಾಗಿದ್ದು, ಬಳಿಕ ರುದ್ರಾಭಿಷೇಕ, ವಿಭೂತಿ ಅಭಿಷೇಕ ಹಾಗೂ ಬಿಲ್ವಾರ್ಚನೆಯನ್ನು ನೆರವೇರಿಸಲಾಗಿದೆ.
ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕ್ಯಾತ್ಯಾಯಿನಿ ದೇವಿ ಸಹಿತ ಹಲವು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ಉತ್ಸವದಲ್ಲಿ ಭಾಗಿಯಾಗಿ ಭಕ್ತಿ ಮೆರೆದರು.
ಇದನ್ನೂ ಓದಿ | Solar Eclipse 2022 | ಗ್ರಹಣದಿಂದ ಯಾವ ರಾಶಿಗೆ ಶುಭ? ಯಾವೆಲ್ಲಾ ರಾಶಿಗೆ ಅಶುಭ? ಪರಿಹಾರಕ್ಕೆ ಯಾವ ಮಂತ್ರ ಪಠಿಸಬೇಕು?