ಮಂಗಳೂರು: ಪುತ್ತೂರು ಸೇರಿ ರಾಜ್ಯದ ವಿವಿಧೆಡೆ ಬಿಜೆಪಿ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಭಾವಚಿತ್ರಕ್ಕೆ ಹಿಂದು ಕಾರ್ಯಕರ್ತರು ಚಪ್ಪಲಿ ಹಾರ ಹಾಕಿ, ಶ್ರದ್ಧಾಂಜಲಿ ಕೋರಿ ಆಕ್ರೋಶ ಹೊರಹಾಕಿರುವ ಘಟನೆ ಪುತ್ತೂರಿನಲ್ಲಿ ಸೋಮವಾರ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. “ಬಿಜೆಪಿ ಹೀನಾಯವಾಗಿ ಸೋಲಲು ಕಾರಣರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ” ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದ್ದು, ನೊಂದ ಹಿಂದು ಕಾರ್ಯಕರ್ತರ ಹೆಸರಿನಲ್ಲಿ ಬ್ಯಾನರ್ ಅಳವಡಿಕೆ ಮಾಡಲಾಗಿದೆ.
ಇದನ್ನೂ ಓದಿ | Puttur Election Results: ಪುತ್ತೂರಿನಲ್ಲಿ ಪುತ್ತಿಲರ ವೀರೋಚಿತ ಸೋಲು; ಗೆಲುವು ಕಂಡ ಅಶೋಕ್ ಕುಮಾರ್ ರೈ
ಕ್ಷೇತ್ರದಲ್ಲಿ ಬಿಜೆಪಿಯು ಹಿಂದು ಕಾರ್ಯಕರ್ತರ ಕಡೆಗಣನೆ ಆರೋಪವನ್ನು ಎದುರಿಸುತ್ತಿದೆ. ಹಾಗೆಯೇ ಬಿಜೆಪಿಯಿಂದ ಟಿಕೆಟ್ ಸಿಗದೆ ಹಿಂದು ಮುಖಂಡ ಅರುಣ್ ಪುತ್ತಿಲ ಪುತ್ತೂರಿನಲ್ಲಿ ಬಂಡಾಯವಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ವಿರುದ್ಧ 4 ಸಾವಿರ ಮತಗಳ ಅಂತರದಲ್ಲಿ ಸೋತಿದ್ದಾರೆ. ಹಿಂದು ಕಾರ್ಯಕರ್ತರನ್ನು ಕಡೆಗಣಿಸಿರುವುದೇ ಬಿಜೆಪಿ ಸೋಲಿಗೆ ಕಾರಣ ಎಂದು ಹೇಳಿ ಇಬ್ಬರು ನಾಯಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಹಿಂದು ಕಾರ್ಯಕರ್ತರು ಕಿಡಿಕಾರಿದ್ದಾರೆ.
ಚಿಕ್ಕಮಗಳೂರು ಇನ್ನು ಮುಂದೆ ವೀರಶೈವ ಲಿಂಗಾಯತರ ಕ್ಷೇತ್ರ: ಸಿ.ಟಿ.ರವಿ ವಿರುದ್ಧ ಎಂ.ಪಿ.ಕುಮಾರಸ್ವಾಮಿ ಕಿಡಿ
ಚಿಕ್ಕಮಗಳೂರು: ಸಿ.ಟಿ.ರವಿ ನನ್ನನ್ನು ಬಿಜೆಪಿಯಿಂದ ಹೊರಗೆ ಕಳುಹಿಸಿದರು, ಆದರೆ ಅವರು ಕ್ಷೇತ್ರವನ್ನೇ ಖಾಲಿ ಮಾಡಬೇಕಾಯಿತು. ಚಿಕ್ಕಮಗಳೂರು ಇನ್ನು ಮುಂದೆ ವೀರಶೈವ ಲಿಂಗಾಯತರ ಕ್ಷೇತ್ರ. ಸಿ.ಟಿ.ರವಿ ದತ್ತಮಾಲೆ, ಅಹಿತಕರ ಘಟನೆ ಇಟ್ಟುಕೊಂಡು ಚುನಾವಣೆಗೆ ಹೋದರು, ಅವೆಲ್ಲ ಇನ್ನು ಮುಂದೆ ಆಗಲ್ಲ. ನೆನ್ನೆಯಿಂದ ಅದು ವೀರಶೈವ ಲಿಂಗಾಯತರ ಕ್ಷೇತ್ರ ಎಂದು ಚಿಕ್ಕಮಗಳೂರು ಮಾಜಿ ಶಾಸಕ ಸಿ.ಟಿ.ರವಿ ವಿರುದ್ಧ ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇದನ್ನೂ ಓದಿ | Karnataka Election 2023 : ನನ್ನ ಬಳಿ 135 ಶಾಸಕರಿದ್ದಾರೆ ಎಂದು ಡಿಕೆಶಿ ಕುಟುಕಿದ್ದು ಯಾರಿಗೆ?
ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಸೋತ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಕ್ಷೇತ್ರದಲ್ಲಿ ಒಕ್ಕಲಿಗರು ಇರುವುದು ಆರೇ ಸಾವಿರ ಮತದಾರರು ಅಷ್ಟೆ. ಯಡಿಯೂರಪ್ಪ ಸ್ವಿಚ್ ಆಫ್ ಮಾಡಲಿಲ್ಲ, ಮಾಡಿದ್ದರೆ ಬಿಜೆಪಿ 50 ಸೀಟ್ ಅಷ್ಟೆ ಬರುತ್ತಿತ್ತು. ಸಿ.ಟಿ.ರವಿ ನನ್ನ ಕೈಬಿಟ್ಟಿದ್ದಕ್ಕೆ ಐದು ಕ್ಷೇತ್ರ ಹೋಯಿತು ಅಂತ ಸಾಮಾನ್ಯ ಜನ ಹೇಳುತ್ತಾರೆ. ಜೆಡಿಎಸ್‌ನಲ್ಲಿ ಬೂತ್ ಕಮಿಟಿ, ಪಕ್ಷ ಸಂಘಟನೆ ಇರಲಿಲ್ಲ, ಹಾಗಾಗಿ ಸೋತೆ. ಎಲ್ಲಾ ಸರಿ ಮಾಡಿಕೊಂಡು ಚುನಾವಣೆ ಎದುರಿಸುವುದು ಕಷ್ಟವಾಗಿತ್ತು. ಮುಂದೆ ಎಲ್ಲಾ ಸರಿ ಮಾಡಿಕೊಂಡು ಜಿಪಂ, ತಾಪಂ ಎಲೆಕ್ಷನ್‌ನಲ್ಲಿ ಉತ್ತಮ ಸಾಧನೆ ಮಾಡುತ್ತೇವೆ ಎಂದರು.