ಬೆಂಗಳೂರು: ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಸಂಸತ್ ಭವನಕ್ಕೆ (Parliament House) ಅನುಭವ ಮಂಟಪ ಎಂದು ನಾಮಕರಣ ಮಾಡಿ, ಜಗತ್ತಿಗೆ ಪ್ರಪ್ರಥಮ ಪ್ರಜಾಪ್ರಭುತ್ವ ಸಂಸತ್ತಿನ ಕಲ್ಪನೆ ಮಾಡಿಕೊಟ್ಟಿದ್ದು ಭಾರತ ಎಂದು ಆ ಮೂಲಕ ತಿಳಿಯುವಂತೆ ಮಾಡಬೇಕೆಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮನವಿ ಮಾಡಿದೆ.
ಪ್ರಪ್ರಥಮವಾಗಿ ವಿಶ್ವ ಮಟ್ಟದಲ್ಲಿ ಪ್ರಜಾಪ್ರಭುತ್ವದ ಹುಟ್ಟು ಮತ್ತು ಸಂಸತ್ತು ಸ್ಥಾಪಿಸಿದ್ದು ಭಾರತದ ಬಸವಕಲ್ಯಾಣದಲ್ಲಿ ಎಂಬ ಮಹತ್ವದ ವಿಷಯವನ್ನು ಪ್ರಚಾರಪಡಿಸಲಾಗಿದೆ. ಅದರಿಂದ ಇಡೀ ವಿಶ್ವದ ಗಮನ ಭಾರತದತ್ತ ಕೇಂದ್ರೀಕರಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ್ದಾರೆ. ಇದಕ್ಕೆ ವೇದಿಕೆ ಹರ್ಷ ವ್ಯಕ್ತಪಡಿಸುತ್ತದೆ.
ಅನುಭವ ಮಂಟಪದ ಮುಖಾಂತರ ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ಬಸವಕಲ್ಯಾಣದಲ್ಲಿ ಸಂಸತ್ತನ್ನು ಪ್ರಾರಂಭಿಸಿ, ವಿಶ್ವಕ್ಕೆ ಪ್ರಜಾಪ್ರಭುತ್ವ ಸಂಸತ್ತಿನ ಕಲ್ಪನೆ ಕೊಟ್ಟ ದೇಶ ಭಾರತ. ಆದ್ದರಿಂದ ರಾಜ್ಯ ಸರ್ಕಾರವು ಈ ಬಗ್ಗೆ ಒಂದು ನಿರ್ಣಯ ಕೈಗೊಂಡು, ಕೇಂದ್ರಕ್ಕೆ ಈ ಬಗ್ಗೆ ಶಿಫಾರಸ್ಸು ಮಾಡುವಂತೆ ಎಂದು ಪತ್ರ ಬರೆದು ಒತ್ತಾಯಿಸಲಾಗಿದೆ.
ಇದನ್ನೂ ಓದಿ | ಸಂಸತ್ ಭವನದ ಸಂಕೀರ್ಣದಲ್ಲಿ ಕರಪತ್ರ ಹಂಚುವಂತೆಯೂ ಇಲ್ಲ; ಇನ್ನೊಂದು ಹೊಸ ಆದೇಶ