Site icon Vistara News

Dengue Fever: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ತೀವ್ರ ಏರಿಕೆ; ಮಂಗಳವಾರ 487 ಕೇಸ್‌ ಪತ್ತೆ!

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 487 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 128 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದ್ದು, ಸದ್ಯ ರಾಜ್ಯದಲ್ಲಿ 358 ಸಕ್ರಿಯ ಪ್ರಕರಣಗಳ ಇವೆ.

ಕಳೆದ 24 ಗಂಟೆಗಳಲ್ಲಿ 4572 ಟೆಸ್ಟ್‌ ಮಾಡಿದ್ದು, ಇದರಲ್ಲಿ 487 ಮಂದಿಗೆ ಸೋಂಕು ದೃಢಪಟ್ಟಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 283, ಬೆಂಗಳೂರು ನಗರ 5, ಬೆಂ. ಗ್ರಾಮಾಂತರ 3, ರಾಮನಗರ 1, ಕೋಲಾರ 3, ತುಮಕೂರು 18, ಚಿತ್ರದುರ್ಗ 10, ದಾವಣಗೆರೆ 12, ಶಿವಮೊಗ್ಗ 9, ವಿಜಯಪುರ 2, ಧಾರವಾಡ 17, ಹಾವೇರಿ 12, ಉತ್ತರ ಕನ್ನಡ 5, ಕಲಬುರಗಿ 12 ಬೀದರ್‌ 3, ವಿಜಯನಗರ 16, ಕೊಪ್ಪಳ 6, ಮೈಸೂರು 5, ಚಾಮರಾಜನಗರ 4, ಮಂಡ್ಯ 6, ಹಾಸನ 26, ಉಡುಪಿ 12, ಚಿಕ್ಕಮಗಳೂರು 9, ಕೊಡಗು ಜಿಲ್ಲೆಯಲ್ಲಿ 8 ಪ್ರಕರಣ ಪತ್ತೆಯಾಗಿವೆ.

ಇನ್ನು ರಾಜ್ಯದಲ್ಲಿ ಜನವರಿಯಿಂದ ಈವರೆಗೆ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 10449 ವರದಿಯಾಗಿದ್ದು, 8 ಮಂದಿ ಮೃತಪಟ್ಟಿದ್ದಾರೆ. ಸದ್ಯ ಡಂಗ್ಯೂ ಮರಣ ಪ್ರಮಾಣ ಶೇ. 0.07 ಇದೆ.

ಇದನ್ನೂ ಓದಿ | Manikanta Rathod: ಅನ್ನ ಭಾಗ್ಯ ಅಕ್ಕಿ ಕಳವು ಕೇಸ್‌ನಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಬಂಧನ

ಮಹಾಮಾರಿ ಡೆಂಗ್ಯೂಗೆ ಯುವಕ ಬಲಿ

ಶಿವಮೊಗ್ಗ: ಮಹಾಮಾರಿ ಡೆಂಗ್ಯೂಗೆ ಯುವಕ ಬಲಿಯಾಗಿರುವ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ನಡೆದಿದೆ. ಇದರಿಂದ ಒಂದೇ ವಾರದಲ್ಲಿ ಇಬ್ಬರು ಡೆಂಗ್ಯೂದಿಂದ ಮೃತಪಟ್ಟಂತಾಗಿದೆ. ಹೊಸನಗರ ರಸ್ತೆಯ ನಿವಾಸಿ ಆಶಿಕ್ ರಸೂಲ್ (27) ಮೃತಪಟ್ಟ ದುರ್ದೈವಿ.

ಶನಿವಾರದಿಂದ ಜ್ವರದಿಂದ ಬಳಲುತಿದ್ದ ಆಶಿಕ್ ರಸೂಲ್‌ಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಸಾವನ್ನಪ್ಪಿದ್ದಾನೆ. ಬಿಳಿರಕ್ತ ಕಣಗಳು ತೀವ್ರವಾಗಿ ಕ್ಷೀಣಿಸಿದ ಹಿನ್ನೆಲೆಯಲ್ಲಿ ಯುವಕ ಸಾವಿಗೀಡಾಗಿದ್ದಾನೆ. ಇತ್ತೀಚೆಗೆ ರಶ್ಮಿ ನಾಯಕ್ ಎನ್ನುವ ರಿಪ್ಪನ್‌ಪೇಟೆಯ ಬಿವಾಸು ಮಹಿಳೆ ಡೆಂಗ್ಯೂನಿಂದ ಮೃತಪಟ್ಟಿದ್ದಾರೆ.

Exit mobile version