ಬೆಂಗಳೂರು: ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ(Voter Data) ಕರ್ತವ್ಯ ಲೋಪ ಹಾಗೂ ಮತದಾರರ ದತ್ತಾಂಶ ಕಳವಿಗೆ ಸಹಕರಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಮೂವರು ಕಂದಾಯ ಅಧಿಕಾರಿಗಳು(ಆರ್‌ಒ) ಹಾಗೂ ಒಬ್ಬ ಸಹಾಯಕ ಕಂದಾಯ ಅಧಿಕಾರಿಯನ್ನು(ಎಆರ್‌ಒ) ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಿಬಿಎಂಪಿ ಕಂದಾಯ ಅಧಿಕಾರಿಗಳಾದ ಚಿಕ್ಕಪೇಟೆಯ ವಿ.ಬಿ.ಭೀಮಾಶಂಕರ್, ಶಿವಾಜಿನಗರದ ಸೊಹೆಲ್ ಅಹಮದ್
ಮಹಾದೇವಪುರದ ಚಂದ್ರಶೇಖರ್, ಆರ್‌ಆರ್ ನಗರದ ಎಆರ್‌ಒ ಮಹೇಶ್ ಎಂಬಾತನ್ನು ಬಂಧಿಸಲಾಗಿದೆ. ಖಾಸಗಿ ವ್ಯಕ್ತಿಗಳಿಗೆ ಚುನಾವಣಾ ಬೂತ್ ಮಟ್ಟದ ಅಧಿಕಾರಿಗಳ(ಬಿಎಲ್‌ಒ) ಐಡಿ ಕಾರ್ಡ್ ನೀಡುವಂತಿಲ್ಲ. ಆದರೆ ಬಂಧಿತ ಅಧಿಕಾರಿಗಳು ಚಿಲುಮೆ ಸಂಸ್ಥೆಯ ವ್ಯಕ್ತಿಗಳಿಗೆ ಬಿಎಲ್‌ಒ ಗುರುತಿನ ಚೀಟಿ ನೀಡಿದ್ದರು. ಹೀಗಾಗಿ ಇವರನ್ನು ಬಂಧಿಸಲಾಗಿದ್ದು, ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Say CM | ಕಡತವನ್ನೇ ರಕ್ಷಿಸಲಾಗದವರು ರಾಜ್ಯ ರಕ್ಷಿಸಲು ಸಾಧ್ಯವೇ?; Say Cm ಎಂದು ಟ್ವೀಟ್ ಮಾಡಿದ ಕಾಂಗ್ರೆಸ್