ಬೆಂಗಳೂರು: ಸೂಡಾನ್‌ನಲ್ಲಿ ಅಲ್ಲಿನ ಸೇನೆ ಹಾಗೂ ಅರೆಸೇನೆಯ ನಡುವಿನ ಕದನದಲ್ಲಿ 700-800 ಭಾರತೀಯರು ಸಿಲುಕಿದ್ದು, ಅವರ ರಕ್ಷಣೆ ಮಾಡುವ ಬದಲಿಗೆ ಬಿಜೆಒಇ ನಾಯಕರು ಚುನಾವಣೆ ನಡೆಸುವಲ್ಲಿ ನಿರತರಾಗಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಸುರ್ಜೆವಾಲ, ಇವತ್ತು ಕರ್ನಾಟಕದ ಜನರಿಗೆ ಶುಭ ದಿನ ಅಲ್ಲ. ಸೂಡಾನ್‌ನಲ್ಲಿ ಟ್ರೈಬ್ ಜನ ಸಿಲುಕಿದ್ದಾರೆ. 700-800 ಕುಟುಂಬ ಸಿಲುಕಿವೆ. ಮೋದಿ ಸರ್ಕಾರ ಏನೂ ಮಾಡ್ತಿಲ್ಲ. ಪ್ರಲ್ಹಾದ್ ಜೋಷಿ, ಶೋಬಾ ಕರಂದ್ಲಾಜೆ ಎಲ್ಲಿ ಇದ್ದಾರೆ? ಕೇಂದ್ರ ಗೃಹ ಇಲಾಖೆ ಏನ್ ಮಾಡ್ತಿದೆ? ಮೋದಿ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಹಾಗೂ ಕರ್ನಾಟಕದ 26 ಜನ ಎಂಪಿಗಳು ಏನ್ ಮಾಡ್ತಿದ್ದಾರೆ? ಜೈ ಶಂಕರ್ ಏನ್ ಮಾಡ್ತಿದ್ದಾರೆ? ಎಂದರು.
ಈ ಸರ್ಕಾರಕ್ಕೆ ನಾಚಿಕೆ ಆಗಬೇಕು. ಮೊದಲು ಅವರ ರಕ್ಷಣೆ ಮಾಡಿ. ಹಕ್ಕಿ-ಪಿಕ್ಕಿ ಜನ ಸೂಡಾನ್‌ನಲ್ಲಿ ಸಿಲುಲಿದ್ದಾರೆ. ಸಿಎಂ ದೆಹಲಿಗೆ ಹೋಗಿ. ಸಿಎಂ ಏನು ಮಾಡ್ತಿದ್ದಾರೆ? ಅಲ್ಲಿಗೆ ಹೋಗಿ ಜನರ ರಕ್ಷಣೆ ಮಾಡಿ. ವಿಶೇಷ ವಿಮಾನ ಕಳಿಸಿ.
ಆದರೆ ಇವರಿಗೆ ಚುನಾವಣೆ ಮುಖ್ಯ. ಚುನಾವಣೆ ಕಾರ್ಯದಲ್ಲಿ ಬಿಜೆಪಿ ಇದೆ. ಹಾಗಾದರೆ ಅಲ್ಲಿ ಸಿಲುಕಿರುವವರ ಜೀವಕ್ಕೆ ಯಾರು ಹೊಣೆ? ಇವರಿಗೆ ಜನರ ಜೀವ ಮುಖ್ಯ ಅಲ್ಲ ಎಂದಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಈ ಕುರಿತು ಟ್ವೀಟ್ ಮಾಡಿದ್ದಾರೆ. ಸೂಡಾನ್ ಕದನದಲ್ಲಿ ಕರ್ನಾಟಕದ 31 ಹಕ್ಕಿಪಿಕ್ಕಿ ಜನಾಂಗದವರು ಸಿಲುಕಿದ್ದಾರೆ ಎಂಬ ಮಾಹಿತಿ ಇದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವಾಲಯ ಮಧ್ಯಪ್ರವೇಶಿಸಿ ಪರಿಹಾರ ಕಂಡುಕೊಳ್ಳಬೇಕು.
ಹಕ್ಕಿ ಪಿಕ್ಕಿ ಜನಾಂಗದವರು ಅನೇಕ ದಿನಗಳಿಂದ ಆಹಾರವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಬಿಜೆಪಿ ಸರ್ಕಾರ ಕೂಡಲೆ ರಾಜತಾಂತ್ರಿಕ ಮಾತುಕತೆಯನ್ನು ಆರಂಭಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: Sudan: ಸೂಡಾನ್ ಅರೆಸೇನೆ – ಸೇನೆ ಸಂಘರ್ಷ; ಒಬ್ಬ ಭಾರತೀಯ ಸೇರಿ 56 ಜನ ಮೃತ, 183 ಮಂದಿಗೆ ಗಾಯ