Site icon Vistara News

2023 Calendar | ಕೇವಲ ದಿನಾಂಕ ಕೇಳಿ ವಾರ ಯಾವುದೆಂದು ಹೇಳುವ ಮ್ಯಾಜಿಕ್‌ ಟ್ರಿಕ್‌ ಇಲ್ಲಿದೆ!

determine the day of the week for the 2023 calender

ಬೆಂಗಳೂರು: 2023ರಲ್ಲಿ ಯಾವ ದಿನಾಂಕವು ಯಾವ ವಾರ ಬರುತ್ತದೆ ಎಂದು ನೋಡಬೇಕೆಂದರೆ ಕ್ಯಾಲೆಂಡರ್‌ ನೋಡಬೇಕು. ಆದರೆ ಈ ಟ್ರಿಕ್‌ ಉಪಯೋಗಿಸಿದರೆ, ಕ್ಯಾಲೆಂಡರ್‌ ನೋಡದೆಯೇ ಅದು ಯಾವ ವಾರ ಎಂದು ಖಚಿತವಾಗಿ ಹೇಳಬಹುದು.

ಕೇವಲ ದಿನಾಂಕವನ್ನು ನೋಡಿಕೊಂಡು ಅದು ಯಾವ ವಾರ ಎಂದು ಹೇಳುವ ಅತ್ಯಂತ ಸರಳ ಟ್ರಿಕ್‌ ಅನ್ನು ಬೆಂಗಳೂರಿನ ಐಐಐಟಿಬಿ( ಇಂಟರ್‌ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇನ್ಫಾರ್ಮೇಷನ್‌ ಟೆಕ್ನಾಲಜಿ-ಬೆಂಗಳೂರು) ಯೋಜನಾ ಸಹಾಯಕ ಕೆ. ಸುಬ್ರಮಣಿ ಅವರು ರೂಪಿಸಿದ್ದಾರೆ. (ಈ ಟ್ರಿಕ್‌ 2023ನೇ ಇಸವಿಗೆ ಮಾತ್ರ ಅನ್ವಯವಾಗುತ್ತದೆ.)

ಜ್ಞಾನಪ ಇಟ್ಟುಕೊಳ್ಳಬೇಕಾದ ಕೋಡ್‌

ಈ ಟ್ರಿಕ್‌ ಬಳಸುವ ಮುನ್ನ ಒಂದು ಕೋಡ್‌ ಅನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಪ್ರತಿಯೊಂದು ತಿಂಗಳಿಗೂ ಒಂದೊಂದು ಕೋಡ್‌ ನೀಡಲಾಗಿದೆ.

ಜನವರಿ-0
ಫೆಬ್ರವರಿ-3
ಮಾರ್ಚ್‌-3
ಏಪ್ರಿಲ್‌-6
ಮೇ-1
ಜೂನ್‌-4
ಜುಲೈ-6
ಆಗಸ್ಟ್‌-2
ಸೆಪ್ಟೆಂಬರ್‌-5
ಅಕ್ಟೋಬರ್‌-0
ನವೆಂಬರ್‌-3
ಡಿಸೆಂಬರ್‌-5

ಇದೂ ತಿಳಿದಿರಲಿ
1 ಭಾನುವಾರ
2 ಸೋಮವಾರ
3 ಮಂಗಳವಾರ
4 ಬುಧವಾರ
5 ಗುರುವಾರ
6 ಶುಕ್ರವಾರ
0 ಶನಿವಾರ

ವಾರವನ್ನು ಹೇಳುವುದು ಹೇಗೆ?

ಉದಾಹರಣೆ ಒಂದು: 15.08.2023 ಯಾವ ದಿನ?

ಹಂತ 1: ದಿನಾಂಕ ಅಂದರೆ 15ನ್ನು ಸಂಖ್ಯೆ 7ರಿಂದ ಭಾಗಿಸಿ. ಆಗ ಉತ್ತರವಾಗಿ 2 ಬರುತ್ತದೆ. ಆದರೆ 1 ಶೇಷ ಉಳಿಯುತ್ತದೆ.

ಹಂತ 2: ಶೇಷ ಸಂಖ್ಯೆ 1ಕ್ಕೆ ತಿಂಗಳ ಕೋಡ್‌ (ಆಗಸ್ಟ್‌- 2) ಸೇರಿಸಿ. ಫಲಿತಾಂಶ 3 ಬರುತ್ತದೆ. ಅದರ ಆಧಾರದಲ್ಲಿ ವಾರದ ಮೂರನೇ ದಿನವಾದ ಮಂಗಳವಾರ ಉತ್ತರವಾಗುತ್ತದೆ.

ಉದಾಹರಣೆ ಎರಡು: 27.03.2023 ಯಾವ ದಿನ?

ಹಂತ 1: ದಿನಾಂಕ ಅಂದರೆ 27ನ್ನು ಸಂಖ್ಯೆ 7ರಿಂದ ಭಾಗಿಸಿ. ಆಗ ಉತ್ತರವಾಗಿ 3 ಬರುತ್ತದೆ. ಆದರೆ 6 ಶೇಷ ಉಳಿಯುತ್ತದೆ.

ಹಂತ 2: ಶೇಷ ಸಂಖ್ಯೆ 6ಕ್ಕೆ ತಿಂಗಳ ಕೋಡ್‌ (ಮಾರ್ಚ್‌-3) ಸೇರಿಸಿ. ಫಲಿತಾಂಶ 9 ಬರುತ್ತದೆ. ಈ ಫಲಿತಾಂಶ 7ಕ್ಕಿಂತ ಹೆಚ್ಚಾಗಿರುವ ಕಾರಣ ಮತ್ತೆ 7ರಿಂದ ಭಾಗಿಸಿ. ಉತ್ತರ 1 ಬರುತ್ತದೆ ಹಾಗೂ ಶೇಷ 2 ಉಳಿಯುತ್ತದೆ. ಅದರ ಆಧಾರದಲ್ಲಿ ವಾರದ ಎರಡನೇ ದಿನವಾದ ಸೋಮವಾರ ಉತ್ತರವಾಗುತ್ತದೆ.

ಇದನ್ನೂ ಓದಿ | ನೆನಪು | ಗಣಿತದ ಗಣಿ ಶ್ರೀನಿವಾಸ ರಾಮಾನುಜನ್‌

Exit mobile version