Site icon Vistara News

Devadari Mines: ಎಚ್‌ಡಿಕೆ ನಿರ್ಧಾರಕ್ಕೆ ಬ್ರೇಕ್; ದೇವದಾರಿ ಗಣಿಗಾರಿಕೆಗೆ ಅರಣ್ಯ ಭೂಮಿ ನೀಡದಂತೆ ರಾಜ್ಯ ಸರ್ಕಾರ ಸೂಚನೆ

Devadari Mines

ಬೆಂಗಳೂರು: ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ (Devadari Mines) ಅರಣ್ಯ ತಿರುವಳಿ ಗುತ್ತಿಗೆ ಪತ್ರ ಹಾಗೂ ಅರಣ್ಯ ಭೂಮಿ ಹಸ್ತಾಂತರ ಮಾಡದಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಪತ್ರ ಬರೆದಿದ್ದಾರೆ. ಬೆಂಗಳೂರಿನ ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಒಸಿಎಲ್) ಸಂಸ್ಥೆಯು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಸ್ವಾಮಿಮಲೈ ಬ್ಲಕ್‌ನ ದೇವದಾರಿ ಹಿಲ್ ಪ್ರದೇಶದಲ್ಲಿ (Devadari Hill Range) 401.5761 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗಾಗಿ (Iron Ore Mining) ಅರಣ್ಯ ತಿರುವಳಿ ಪಡೆದಿದ್ದು, ಅರಣ್ಯ ಇಲಾಖೆ ವತಿಯಿಂದ “ಅರಣ್ಯ ತಿರುವಳಿ ಗುತ್ತಿಗೆ ಪತ್ರ” ಸಹಿಯೂ ಸೇರಿ ಜಮೀನು ಹಸ್ತಾಂತರ ಬಾಕಿ ಇರುವುದನ್ನು ಗಮನಿಸಲಾಗಿದೆ.

ಈ ಸಂಸ್ಥೆಯು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಗಣಿಗಾರಿಕೆಯ ಲೋಪದೋಶ/ಅರಣ್ಯ ಕಾಯ್ದೆ ಉಲ್ಲಘಂನೆಗಳಿಗಾಗಿ CECಯು ನೀಡಿರುವ ನಿರ್ದೇಶನಗಳನ್ನು ನಿಗದಿತ ಕಾಲಮಿತಿಯಲ್ಲಿ ಸಂಪೂರ್ಣವಾಗಿ ಜಾರಿ ಮಾಡಲು ವಿಫಲವಾಗಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಹೀಗಾಗಿ
ಕೆಐಒಸಿಎಲ್ ಸಂಸ್ಥೆಯು CEC ನಿರ್ದೇಶನಗಳನ್ನು ಅನುಷ್ಠಾನಗೊಳಿಸುವವರೆಗೆ, ಆ ಸಂಸ್ಥೆಗೆ ದೇವದಾರಿ ಹಿಲ್ ಪ್ರದೇಶದಲ್ಲಿ ಗಣಿಗಾರಿಕೆಗಾಗಿ ನೀಡಲಾಗಿರುವ ಅರಣ್ಯ ತಿರುವಳಿಯನ್ನು ಅನುಷ್ಠಾನಗೊಳಿಸದಂತೆ. ಅಂದರೆ “ಅರಣ್ಯ ತಿರುವಳಿ ಗುತ್ತಿಗೆ ಪತ್ರ” ನೀಡಬಾರದು ಹಾಗೂ ಅರಣ್ಯ ಭೂಮಿ ಹಸ್ತಾಂತರಿಸಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ | Rushikonda Palace: 500 ಕೋಟಿಯ ʼಋಷಿಕೊಂಡ ಅರಮನೆʼ ಖರೀದಿಸಲು ಕ್ರಿಮಿನಲ್‌ ಸುಕೇಶ್ ಚಂದ್ರಶೇಖರ್ ರೆಡಿ!

ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಕಾ ಸಚಿವರಾಗಿ ಎಚ್.ಡಿ. ಕುಮಾರಸ್ವಾಮಿ ಅವರು ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ತಕ್ಷಣವೇ ದೇವದಾರಿ ಹಿಲ್‌ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿ ಸಹಿ ಹಾಕಿದ್ದರು. ಆದರೆ, ದೇವದಾರಿ ಹಿಲ್ ಗಣಿಗಾರಿಕೆಯಿಂದ ಆ ಭಾಗದಲ್ಲಿ ಅರಣ್ಯ ಮತ್ತು ಜೀವರಾಶಿಗಳಿಗೆ ಹಾನಿ ಆಗುತ್ತದೆ. 99 ಸಾವಿರ ಮರಗಳಿಗೆ ಧಕ್ಕೆ ಆಗುತ್ತದೆ ಎಂದು ವರದಿಯಾಗಿತ್ತು. ಆದರೆ, ಅರಣ್ಯ ನಾಶದ ಬಗ್ಗೆ ಆತಂಕ ಬೇಡ ಎಂದು ಎಚ್‌ಡಿಕೆ ಹೇಳಿದ್ದರು. ಮತ್ತೊಂದೆಡೆ ಇಲ್ಲಿ ಗಣಿಕಾರಿಕೆ ನಡೆಸದಂತೆ ಸ್ಥಳೀಯ ಹೋರಾಟಗಾರರ ವಿರೋಧವೂ ವ್ಯಕ್ತವಾಗುತ್ತಿದೆ. ಇದೀಗ ಅರಣ್ಯ ಭೂಮಿ ಹಸ್ತಾಂತರ ತಡೆ ಹಿಡಿಯುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.

Exit mobile version