ಬೆಂಗಳೂರು, ಕರ್ನಾಟಕ: ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿಯ ಕೆ ಶಿವನಗೌಡ ನಾಯಕ್ ಅವರು ಸೋಲು ಕಂಡಿದ್ದಾರೆ. ಜೆಡಿಎಸ್‌ನ ಕರಿಯಮ್ಮ ನಾಯಕ್ ಅವರು 99544 ಮತಗಳನ್ನು ಪಡೆದುಕೊಂಡರೆ, ಬಿಜೆಪಿಯ ನಾಯಕ್ ಅವರು 65288 ಮತಗಳನ್ನು ತಮ್ಮದಾಗಿಸಿಕೊಂಡು ಸೋಲು ಒಪ್ಪಿಕೊಂಡಿದ್ದಾರೆ. 34256 ಮತಗಳ ಅಂತರದಲ್ಲಿ ಜೆಡಿಎಸ್ ಗೆದ್ದು ಬೀಗಿದೆ. ಕಾಂಗ್ರೆಸ್‌ನ ಶ್ರೀದೇವಿ ನಾಯಕ್ ಅವರು 3909 ಮತಗಳನ್ನು ಮಾತ್ರವೇ ಪಡೆದುಕೊಂಡಿದ್ದಾರೆ(Devadurga Election Results).
2023ರ ಚುನಾವಣೆ ಅಭ್ಯರ್ಥಿಗಳು
ಪ್ರಸಕ್ತ ಚುನಾವಣೆಯಲ್ಲಿ ಹಾಲಿ ಶಾಸಕ ಶಿವನಗೌಡ ನಾಯಕ್ ಅವರು ಬಿಜೆಪಿಯಿಂದ ಮತ್ತೆ ಕಣದಲ್ಲಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೀದೇವಿ ನಾಯಕ್, ಜೆಡಿಎಸ್ ಪಕ್ಷದಿಂದ ಕರಿಯಮ್ಮ ಜಿ ನಾಯಕ್ ಸ್ಪರ್ಧಿಸಿದ್ದರು.
2018ರ ಚುನಾವಣಾ ಫಲಿತಾಂಶ ಏನಾಗಿತ್ತು?
ಅತಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ದೇವದುರ್ಗ ವಿಶಿಷ್ಟ ಕ್ಷೇತ್ರವಾಗಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಈ ಕ್ಷೇತ್ರವು ಈಗ ಬಿಜೆಪಿಯ ತೆಕ್ಕೆಯಲ್ಲಿದೆ. 2018ರಲ್ಲಿ ಬಿಜೆಪಿಯ ಕೆ ಶಿವನಗೌಡ ನಾಯಕ್ ಅವರು 67,003 ಮತಗಳನ್ನು ಪಡೆದುಕೊಂಡು ಕಾಂಗ್ರೆಸ್ ಪಕ್ಷದ ಎ ರಾಜಶೇಖರ್ ನಾಯಕ ಅವರ ವಿರುದ್ಧ 21045 ಮತಗಳ ಅಂತರದಿಂದ ಗೆಲವು ಕಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ 45,958 ಮತಗಳನ್ನು ಪಡೆದುಕೊಂಡಿದ್ದರು. ಪಕ್ಷೇತರ ಅಭ್ಯರ್ಥಿ ಕರೆಮ್ಮಾ ಅವರು 25,958 ಮತಗಳನ್ನು ಪಡೆದುಕೊಂಡರೆ, ಜೆಡಿಎಸ್ ಅಭ್ಯರ್ಥಿ ಅರ್ಕೆರಾ ವೆಂಕಟೇಶ್ ಪೂಜಾರಿ 7137 ಮತಗಳನ್ನು ಪಡೆದುಕೊಂಡು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.