Site icon Vistara News

Devara Hippargi Election Results: ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ರಾಜು ಗೌಡ ಪಾಟೀಲ್‌ಗೆ ಜಯ

JDS Candidate Rajugouda patil winner devar hippargi constituency

ಬೆಂಗಳೂರು, ಕರ್ನಾಟಕ: ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿರುವ ಹೊತ್ತಿನಲ್ಲಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ್ ಅವರು ಗೆಲುವ ಕಂಡಿದ್ದಾರೆ. ಸುಮಾರು 19,999 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಅವರಿಗೆ 33431 ಮತಗಳು ಬಂದಿವೆ. ಇನ್ನೂ ಬಿಜೆಪಿಯ ಸೋಮನಗೌಡ ಪಾಟೀಲ್ ಅವರು 45272 ಮತಗಳನ್ನು ಪಡೆದುಕೊಂಡ ಸೋಲು ಅನುಭವಿಸಿದ್ದಾರೆ(Devara Hippargi Election Results).

2023ರ ಚುನಾವಣೆಯ ಅಭ್ಯರ್ಥಿಗಳು

ಹಾಲಿ ಶಾಸಕ ವಿಜಯ ಪಾಟೀಲ್ ಸಾಸನೂರ್ ಅವರು ಮತ್ತೆ ಬಿಜೆಪಿಯಿಂದ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ರಾಜುಗೌಡ ಪಾಟೀಲ್ ಹಾಗೂ ಕಾಂಗ್ರೆಸ್‌ನಿಂದ ಸೋಮನಗೌಡ ಬಿ ಪಾಟೀಲ್ ಅವರು ಸ್ಪರ್ಧೆಯಲ್ಲಿದ್ದರು.

2018ರ ಚುನಾವಣೆ ಫಲಿತಾಂಶ ಏನಾಗಿತ್ತು?

ವಿಜಯಪುರ ಜಿಲ್ಲೆಯಲ್ಲಿ ದೇವರ ಹಿಪ್ಪರಗಿ ಪ್ರಮುಖ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಪಾರುಪತ್ಯವಿದೆ. 2008 ಮತ್ತು 2013ರಲ್ಲಿ ಎ ಎಸ್ ಪಾಟೀಲ್ ನಡಹಳ್ಳಿ ಅವರು ಕ್ಷೇತ್ರದಲ್ಲಿ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯ ಸೋಮನಗೌಡ ಪಾಟೀಲ್ ಸಾಸನೂರು ಅವರು 48245 ಮತಗಳನ್ನು ಪಡೆದುಕೊಂಡು 3335 ಅಂತರದಲ್ಲಿ ಜೆಡಿಎಸ್‌ನ ಭೀಮನಗೌಡ ಪಾಟೀಲ್ ಕುದರಿಸಾಲವಾಡಗಿ ಅವರನ್ನು ಸೋಲಿಸಿದ್ದರು. ಜೆಡಿಎಸ್ ಅಭ್ಯರ್ಥಿ 44892 ಮತಗಳನ್ನುಪಡೆದುಕೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಬಿ ಎಸ್ ಪಾಟೀಲ್ ಯಾಳಗಿ ಅವರು 38038 ಮತಗಳನ್ನು ಪಡೆದುಕೊಂಡು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.

Exit mobile version