ಹಾಸನ: ನಮ್ಮ ಜೆಡಿಎಸ್ ಪಕ್ಷಕ್ಕೆ ಮಾಜಿ ಪ್ರಧಾನಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ರೇವಣ್ಣ ಅವರೇ ಚಾಣಕ್ಯರು. ಬಿಜೆಪಿಯವರು ಅಮೆರಿಕ ಪ್ರೆಸಿಡೆಂಟ್‌ನಾದರೂ ಕರೆದುಕೊಂಡು ಬರಲಿ, ರಷ್ಯಾದವರನ್ನಾದರೂ ಕರೆದುಕೊಂಡು ಬರಲಿ ನಮಗೇನೂ ತೊಂದರೆ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭೇಟಿ ಬಗ್ಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಪ್ರತಿಕ್ರಿಯೆ ನೀಡಿದರು.
ಅವರು ಬೇಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ ಜಿಲ್ಲೆಗೆ ಸೋಮವಾರ (ಏಪ್ರಿಲ್ 24) ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡುತ್ತಿರುವ ವಿಚಾರವಾಗಿ ಈ ಪ್ರತಿಕ್ರಿಯೆ ನೀಡಿದರು. ನಮಗೆ ದೇವೇಗೌಡರು, ಕುಮಾರಣ್ಣ ಇಬ್ಬರೇ ಸಾಕು, ಇನ್ಯಾರೂ ಬೇಡ ಎಂದು ಹೇಳಿದರು.
ಇದನ್ನೂ ಓದಿ: Karnataka Election: ಮಾಜಿ ಡಿಸಿಎಂ ಕುಟುಂಬ ಇಂದು ಬಿಜೆಪಿ ಸೇರ್ಪಡೆ: ಹೂವಿನಹಡಗಲಿಯಲ್ಲಿ ಪಕ್ಷ ಬಲವರ್ಧನೆ ತಂತ್ರ
ನಾವು ಜೆಡಿಎಸ್ ಪಕ್ಷದಿಂದ 123 ಕ್ಷೇತ್ರವನ್ನು ಟಾರ್ಗೆಟ್ ಇಟ್ಟುಕೊಂಡಿದ್ದೇವೆ. ಒಂದು ಭಾರಿ ಬಹುಮತ ಕೊಡಿ. ದೇವೇಗೌಡರು ಸಾಮಾನ್ಯ ರೈತನ ಮಗ. ಜನರ ಆಶೀರ್ವಾದ ಇರುವವರೆಗೂ ನಮಗೇನೂ ತೊಂದರೆಯಿಲ್ಲ. ಜನ ಎರಡೂ ರಾಷ್ಟ್ರೀಯ ಪಕ್ಷಗಳ ಆಡಳಿತವನ್ನು ನೋಡಿದ್ದಾರೆ. ಇವೆರಡು ಪಕ್ಷಗಳನ್ನು ಸ್ವಲ್ಪ ದಿನ ವಿಶ್ರಾಂತಿಗೆ ಕಳುಹಿಸಬೇಕೆಂದು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಚಾಣಕ್ಯರ ಬಗ್ಗೆ ರೇವಣ್ಣ ನೀಡಿರುವ ಹೇಳಿಕೆ ಇಲ್ಲಿದೆ
ಕುಮಾರಣ್ಣ, ದೇವೇಗೌಡರ ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ, ಗ್ರಾಮಗಳ ಅಭಿವೃದ್ಧಿ ಸೇರಿ ಐದು ಕಾರ್ಯಕ್ರಮಗಳನ್ನು ಜನ ಮೆಚ್ಚಿದ್ದಾರೆ. ಹಾಸನದಿಂದ ಎಚ್.ಎಸ್. ಪ್ರಕಾಶ್ ಅವರ ಮಗ ಸ್ವರೂಪ್ ಗೌಡ ಅವರನ್ನು ಕಣಕ್ಕಿಳಿಸಿದ್ದೇವೆ. ಭವಾನಿ ಅವರೇ ಕೈ ಎತ್ತಿ ಹೇಳಿದ್ದಾರಲ್ವಾ? ಇನ್ನೇನು ಬೇಕು? ನಮಗೆ ಬೇಕಿರುವುದು ಪಕ್ಷ, ಜನ ಉಳಿಯಬೇಕು. ರಾಜ್ಯ ಉಳಿಯಬೇಕು ಎಂದು ರೇವಣ್ಣ ಹೇಳಿದರು.
ಇದನ್ನೂ ಓದಿ: Karnataka Election : ನಾವು ರಾಜಕಾರಣಿಗಳು, ಕಾವಿ ಹಾಕಿಕೊಂಡಿಲ್ಲ; ಸಿಎಂ ಚರ್ಚೆಗೆ ಡಿಕೆಶಿಯಿಂದ ಮತ್ತದೇ ಉತ್ತರ
ಶಾಸಕ ಪ್ರೀತಂಗೌಡ ಸೈಲೆಂಟ್ ಆಗಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ರೇವಣ್ಣ, ಅವರು ದೊಡ್ಡವರಿದ್ದಾರೆ. ಅವರ ಬಗ್ಗೆ ನನಗೆ ಮಾತನಾಡುವ ಶಕ್ತಿ ನನಗೆ ಇಲ್ಲ. ಅವರ ಆ ಲೆವೆಲ್‌ಗೆ ನಾವು ಬೆಳೆದಿಲ್ಲ ಎಂದು ವ್ಯಂಗ್ಯವಾಡಿದರು.