Site icon Vistara News

ಹನುಮ ಜಯಂತಿ| ಅಂಜನಾದ್ರಿಯಲ್ಲಿ ಆಂಜನೇಯನ ದರ್ಶನಕ್ಕೆ ಜನಸಾಗರ

anjanadri hills

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ದೇವಸ್ಥಾನದಲ್ಲಿ ಹನುಮಮಾಲಾ ವ್ರತ ಆರಂಭವಾಗಿದ್ದು, ಭಕ್ತ ಸಾಗರ ಹರಿದುಬರುತ್ತಿದೆ.

ಅಂಜನಾದ್ರಿಗೆ ನಿನ್ನೆಯಿಂದಲೇ ಹನುಮಮಾಲಾ ವ್ರತಧಾರಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ದೇವರ ದರ್ಶನ ಪಡೆಯುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ದೇವಸ್ಥಾನ ಬೆಟ್ಟದ ಮೇಲಿದ್ದು, ರಾತ್ರಿಯಿಂದಲೇ ಆಂಜನಾದ್ರಿಯ ಮೆಟ್ಟಲುಗಳನ್ನು ಹತ್ತಿ ಆಂಜನೇಯನ ದರ್ಶನ ಪಡೆಯುತ್ತಿದ್ದಾರೆ. ಜೈ ಶ್ರೀರಾಮ್‌ ಘೋಷಣೆಗಳು ಮೊಳಗುತ್ತಿವೆ.

ವಿಶೇಷ ಎಂದರೆ, ಹಲವು ಜನ ಪುನೀತ್ ರಾಜಕುಮಾರ್‌ ಭಾವಚಿತ್ರ ಹಿಡಿದು ದರ್ಶನ ಪಡೆಯುತ್ತಿದ್ದಾರೆ. ಪುನೀತ್‌ ಜತೆಗೆ ಹನುಮದರ್ಶನ ಮಾಡಿದ ಭಾವನೆ ಮೂಡುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಅಪ್ಪು ಅಗಲಿ ಒಂದೂವರೆ ವರ್ಷವಾದರೂ ಅಭಿಮಾನಿಗಳ ಅಭಿಮಾನ ಹೀಗೆ ವ್ಯಕ್ತವಾಗುತ್ತಿದೆ.

ಬಿಜೆಪಿ ಮುಖಂಡ ಜನಾರ್ದನ ರೆಡ್ಡಿ ಅವರು ಕೂಡ ಪಂಪಾ ಸರೋವರದಲ್ಲಿ ಪೂಜೆ ಸಲ್ಲಿಸಿ ಹನುಮಮಾಲೆ ಧರಿಸಿದ್ದಾರೆ. ಪೂಜೆ ಸಲ್ಲಿಸಿ ಕೊನೆಯ ಒಂದು ದಿನದ ವ್ರತ ಆರಂಭಿಸಿದ್ದು, ಕೇಸರಿ ವಸ್ತ್ರ, ತುಳಸಿ ಮಾಲೆ ಧರಿಸಿ ಆಂಜನೇಯನ ದರ್ಶನ ಪಡೆಯಲಿದ್ದಾರೆ.

ಇದನ್ನೂ ಓದಿ | Hanuma Jayanti | ಹನುಮ ಜಯಂತಿಗೆ ಸಕಲ ರೀತಿಯಲ್ಲಿ ಸಜ್ಜಾದ ಅಂಜನಾದ್ರಿ ಬೆಟ್ಟ; ಪೊಲೀಸ್‌ ಬಿಗಿ ಬಂದೋಬಸ್ತ್‌

Exit mobile version