Site icon Vistara News

Dharma Dangal : ಬೇಲೂರು ಚನ್ನಕೇಶವ ಜಾತ್ರೆಯಲ್ಲಿ ಕುರಾನ್‌ ಪಠಣಕ್ಕೆ ಅವಕಾಶ; ರಥದ ಬದಲು ದೇವಳದ ಮೆಟ್ಟಿಲ ಮೇಲೆ

beluru channakeshava temple

#image_title

ಹಾಸನ: ಬೇಲೂರಿನ ಶ್ರೀ ಚನ್ನಕೇಶವ ದೇವಸ್ಥಾನದ ವಾರ್ಷಿಕ ಜಾತ್ರೆಯ ವೇಳೆ ಕುರಾನ್‌ ಪಠಣಕ್ಕೆ ಇರುವ ಅವಕಾಶವನ್ನು ಮುಂದುವರಿಸಲು ಮುಜರಾಯಿ ಇಲಾಖೆ ಅವಕಾಶ ನೀಡಿದೆ. ಆದರೆ, ರಥದ ಮುಂದೆ ಓದುವ ಬದಲು ದೇವಾಲಯದ ಮೆಟ್ಟಿಲ ಮೇಲೆ ಪಠಿಸುವಂತೆ ಸೂಚಿಸಲಾಗಿದೆ.

ಚನ್ನಕೇಶವನ ಜಾತ್ರೆಯಲ್ಲಿ ಕುರಾನ್‌ ಪಠಣ ಮಾಡುವ ಪದ್ಧತಿ ಮಿರ್ಜಾ ಇಸ್ಮಾಯಿಲ್‌ ಅವರು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕಾಲದಲ್ಲಿ ಅಂದರೆ 1929ರಲ್ಲಿ ಆರಂಭವಾಗಿರುವ ಬಗ್ಗೆ ಮ್ಯಾನುವಲ್‌ನಲ್ಲಿ ಉಲ್ಲೇಖವಿದೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಚನ್ನಕೇಶವನ ಮುಂದೆ ಅವರೇಕೆ ಕುರಾನ್‌ ಪಠಿಸಬೇಕು ಎಂಬ ವಾದ ತೀವ್ರಗೊಂಡಿತ್ತು ಮತ್ತು ಇದಕ್ಕೆ ಅವಕಾಶ ನೀಡಬಾರದು ಎಂಬ ವಾದ ಜೋರಾಗಿ ಧರ್ಮ ದಂಗಲ್‌ಗೆ ಕಾರಣವಾಗಿತ್ತು.

ಕೆಲವು ದಿನಗಳ ಹಿಂದೆ ಬೇಲೂರು ಪಟ್ಟಣದಲ್ಲಿ ಹಿಂದೂ ಸಂಘಟನೆಗಳು ಮೆರವಣಿಗೆ ನಡೆಸಿ, ದೇವಸ್ಥಾನದ ಎದುರು ಪ್ರತಿಭಟನೆ ನಡೆಸಿದ್ದವು. ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ ಅವರು ಆಗಮ ಪಂಡಿತರ ಮೂಲಕ ಅಧ್ಯಯನಕ್ಕೆ ಅವಕಾಶ ನೀಡಿದ್ದರು. ಆಗಮ ಪಂಡಿತರು ದೇವಸ್ಥಾನಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡಿದ್ದರು. ದೇವಾಲಯದ ಜಾತ್ರೆಯ ಸಂದರ್ಭದಲ್ಲಿ ಮುಸ್ಲಿಮರಿಗೆ ಗೌರವ ಕೊಡುವ ಮತ್ತು ಅವರು ಗೌರವ ಕೊಡುವ ಸಂಪ್ರದಾಯ ಇರುವುದು ನಿಜ. ಅದರೆ, ಕುರಾನ್‌ ಪಠಣದ ಉಲ್ಲೇಖವಿಲ್ಲ ಎಂದು ಮೌಖಿಕವಾಗಿ ತಿಳಿಸಿದ್ದರು.

ಹಾಗಿದ್ದರೆ ಈಗ ಮುಜರಾಯಿ ಇಲಾಖೆಯ ಆದೇಶದಲ್ಲಿ ಹೇಳಿದ್ದೇನು?

ಇದೀಗ ಎಲ್ಲ ವಿಚಾರಗಳನ್ನು ಕೂಲಂಕಷವಾಗಿ ಗಮನಿಸಿದ ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಕಮಿಷನರ್‌ ಅವರು ಆದೇಶವೊಂದನ್ನು ಹೊರಡಿಸಿದ್ದು, ಅದರಲ್ಲಿ ರಥೋತ್ಸವದ ದಿನ ಕುರಾನ್‌ ಪಠಣಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿದೆ. ಆದರೆ, ಕಳೆದ ಐದು ವರ್ಷಗಳಿಂದ ಜಾರಿಯಲ್ಲಿರುವಂತೆ ರಥದ ಎದುರು ಪಠಣ ಮಾಡುವ ಬದಲು ಅದಕ್ಕಿಂತ ಮೊದಲು ಇದ್ದಂತೆ ದೇವಾಲಯದ ಮೆಟ್ಟಿಲುಗಳ ಮೇಲೆ ಕುರಾನ್‌ ಪಠಣಕ್ಕೆ ಅವಕಾಶ ನೀಡುವಂತೆ ಸೂಚಿಸಲಾಗಿದೆ. ಆರು ವರ್ಷದ ಹಿಂದೆ ಮೆಟ್ಟಿಲುಗಳ ಮೇಲೆ ಕುರಾನ್‌ ಪಠಣ ನಡೆಯುತ್ತಿತ್ತು. ಅದು ಐದು ವರ್ಷಗಳಿಂದ ರಥೋತ್ಸವದ ದಿನ ರಥದ ಮುಂದೆ ಅವಕಾಶ ನೀಡಲಾಗುತ್ತಿತ್ತು. ಹೊಸ ಆದೇಶದಂತೆ ರಥದ ಮುಂದೆ ಪಠಣಕ್ಕೆ ಅವಕಾಶವಿಲ್ಲ.

ಸುತ್ತೋಲೆಯಲ್ಲಿ ಏನಿದೆ?

ಬೇಲೂರು ಶ್ರೀ ಚನ್ನಕೇಶವ ದೇವಾಲಯದ ಮ್ಯಾನುಯಲ್ ಕೈಪಿಡಿಯಲ್ಲಿ ತಿಳಿಸಿರುವಂತೆ ದೇವಾಲಯದ ರಥೋತ್ಸವದ ದಿನದಂದು ಮೇದೂರು ಖಾಜಿ ಸಾಹೇಬರ ಖಾಜಿ ಸಾಹೇಬರ ಕುಟುಂಬದ ಸದಸ್ಯರು ದೇವಾಲಯಕ ದೇವಸ್ಥಾನದಿಂದ ನೀಡಲಾಗುತ್ತಿರುವ ಧಾನ್ಯ ಮತ್ತು ನಗದು ಕಾಣಿಕೆಗಳ ಮರ್ಯಾದೆಗಳನ್ನು ಸ್ವೀಕರಿಸಿ ದೇವರಿಗೆ ವಂದನ ಮಾಡುವಂತ ಮೇದೂರು ಖಾಜಿ ಸಾಹೇಬರ ಕುಟುಂಬದ ಸದಸ್ಯರಿಗೆ ಸೂಚಿಸಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ಕ 1997 ಅಧಿನಿಯಮ 2002ರ ಸೆಕ್ಷನ್ 58ಕ, ಒಳವಟ್ಟು ದೇವಾಲಯದಲ್ಲಿ ಹಿಂದಿನಿಂದ ನಡೆದು ಬರುತ್ತಿರುವ ರೂಢಿ ಸಂಪ್ರದಾಯ ಪದ್ಧತಿಗಳಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನಿಯಮಾನುಸಾರ ದೇವಾಲಯದ ಕೈಪಿಡಿಯನ್ನಯ ಸೂಕ್ತ ಕ್ರಮ ವಹಿಸಲು ಕೋರಿದೆ.ಹಾಸನ ಜಿಲ್ಲೆ, ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ವಾರ್ಷಿಕವಾಗಿ ನಡೆಯುವ ರಥೋತ್ಸವ ದಿನದಂದು ಮೇದೂರು ಖಾಜಿ ಸಾಹೇಬರ ಕುಟುಂಬದವರಿಗೆ ದೇವಾಲಯದ ವತಿಯಿಂದ ಮಾರ್ಯಾದೆಯ ಬಗ್ಗೆ ಹಾಗೂ ಖುರಾನ್ ಪಠಣೆ ಮಾಡುತ್ತಿರುವ ಬಗ್ಗೆ ಸೂಕ್ತ ನಿರ್ದೇಶನ ನೀಡಲು ಉಲ್ಲೇಖಿತ ಪತ್ರದಲ್ಲಿ ಕೋರಿರುತ್ತಾರೆ.

ಈ ಕಚೇರಿಯ ಹಿರಿಯ ಆಗಮ ಪಂಡಿತರು ದಿನಾಂಕ: 30.03.2023 ರಂದು ಸದರಿ ದೇವಾಲಯಕ್ಕೆ ಭೇಟಿ ನೀಡಿ ಸದರಿ ದೇವಾಲಯದಲ್ಲಿರುವ ಮ್ಯಾನುಯಲ್ ಯಾ ಕೈಪಿಡಿಯನ್ನು ಪರಿಶೀಲಿಸಿ ಈ ಕಳಕಂಡಂತೆ ವರದಿ ಸಲ್ಲಿಸಿರುತ್ತಾರೆ.

ಸುತ್ತೋಲೆ

“ಸದರಿ ಮ್ಯಾನ್ಯುಯಲ್ ಯಾ ಕೈಪಿಡಿಯ ಪುಟ ಸಂಖ್ಯೆ-9ರಲ್ಲಿ ವಿಷಯ 5ರಲ್ಲಿ ಈ ದೇವಾಲಯಕ್ಕೆ ಬ್ರಾಹ್ಮಣರಲ್ಲಿ ತ್ರಿಮತಸ್ತರೂ ಭಕ್ತರಾಗಿರುವುದಲ್ಲದೇ ಇತರ ಮತರೂ ಕೂಡ, ಅಂದರೆ ವೈಶ್ಯರು, ವೀರಶೈವರು, ಮುಸಲ್ಮಾನರಲ್ಲಿ ಕೆಲವರು ಭಕ್ತರಾಗಿ ಅನೇಕ ಸೇವೆಗಳನ್ನು ನಡೆಸುತ್ತಿದ್ದಾರೆ. ಕೆಲವು ಪ್ರವೇಶವಿರುತ್ತದೆ. ಬ್ರಾಹ್ಮಣೇತರ ಪಂಗಡದವರಿಗೆ ದೇವರ ದರ್ಶನಕ್ಕಾಗಿ ಸುಕನಾಸಿವರೆಗೂ ರಥೋತ್ಸವ ಕಾಲದಲ್ಲಿ ಮುಸಲ್ಮಾನ ಜನಗಳ ಪ್ರತಿನಿಧಿಯಾದ ಖಾಜಿ ಸಾಹೇಬರು ಬಂದು ದೇವರಿಗೆ ವಂದನ ಮಾರುವ ದೇವಸ್ಥಾನದಿಂದ ಕೆಲವು ಮರ್ಯಾದೆ ಗಳನ್ನು ಸ್ವೀಕರಿಸಿ ವಾಡಿಕೆಯಿದ ಎಂದು ಮುದ್ರಿತವಾಗಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸದರಿ ಮಾನ್ಯುಯಲ್ ಯಾ ಕೈಪಿಡಿಯ ಪುಟ ಸಂಖ್ಯೆ-58ರಲ್ಲಿ ರಥೋತ್ಸವ ಕಾಲದಲ್ಲಿ ದೇವಾಲಯದ ಕೆಲಸವನ್ನು ಮಾಡಿದ ಕಾರಣ ಬಂಡಿಕಾರರಿಗೆ, ಹರಿ ಸೇವೆ ಮಾಡುವವರಿಗೆ, ಪೋಲಿಸರಿಗೆ ಮುಂತಾದವರುಗಳಿಗೆ ದೇವಾಲಯದವತಿಯಿಂದ ಗೌರವಪೂರ್ವಕವಾಗಿ ಮಿರಾಸೆಯನ್ನು (ಧಾನ ಕಾಣಿಕೆ) ಕೊಡುವ ಪದ್ಧತಿ ಇರುವ ಬಗ್ಗೆ ಉಲ್ಲೇಖವಿರುತ್ತದೆ. ಇಲ್ಲಿ ಮೇದೂರು ಖಾಜಿ ಸಾಹೇಬರಿಗೆ ದೇವಸ್ಥಾನದಿಂದ ಮಾಮೂಲ್ ಮೇರೆ 4 ಶೇರು ಅಕ್ಕಿ, ನಗದು ದುಡ್ಡು ಕೊಡತಕ್ಕದ್ದು ಎಂದು ಉಲ್ಲೇಖವಿರುತ್ತದೆ “(ಆಗಮ ಪಂಡಿತರ ಪರಿಶೀಲನ ವರದಿ ಲಗತ್ತಿಸಿದೆ.)

ಬೇಲೂರು ಶ್ರೀ ಚನ್ನಕೇಶವ ದೇವಾಲಯದ ಮ್ಯಾನುಯಲ್ ಕೈಪಿಡಿಯಲ್ಲಿ ತಿಳಿಸಿರುವಂತೆ ದೇವಾಲಯದ ರಥೋತ್ಸವದ ದಿನದಂದು ಮೇದೂರು ಖಾಜಿ ಸಾಹೇಬರ ಖಾಜಿ ಸಾಹೇಬರ ಕುಟುಂಬದ ಸದಸ್ಯರು ದೇವಾಲಯಕ ದೇವಸ್ಥಾನದಿಂದ ನೀಡಲಾಗುತ್ತಿರುವ ಧಾನ್ಯ ಮತ್ತು ನಗದು ಕಾಣಿಕೆಗಳ ಮರ್ಯಾದೆಗಳನ್ನು ಸ್ವೀಕರಿಸಿ ದೇವರಿಗೆ ವಂದನ ಮಾಡುವಂತ ಮೇದೂರು ಖಾಜಿ ಸಾಹೇಬರ ಕುಟುಂಬದ ಸದಸ್ಯರಿಗೆ ಸೂಚಿಸಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ಕ 1997 ಅಧಿನಿಯಮ 2002ರ ಸೆಕ್ಷನ್ 58ಕ, ಒಳವಟ್ಟು ದೇವಾಲಯದಲ್ಲಿ ಹಿಂದಿನಿಂದ ನಡೆದು ಬರುತ್ತಿರುವ ರೂಢಿ ಸಂಪ್ರದಾಯ ಪದ್ಧತಿಗಳಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನಿಯಮಾನುಸಾರ ದೇವಾಲಯದ ಕೈಪಿಡಿಯನ್ವಯ ಸೂಕ್ತ ಕ್ರಮ ವಹಿಸಲು ಕೋರಿದೆ.

ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ ಅವರು ಹೇಳಿದ್ದೇನು?

ದೇಗುಲದ ಮ್ಯಾನ್ಯುಯಲ್ ನಲ್ಲಿ ಮುಸಲ್ಮಾನ್ ಸಮುದಾಯದ ಖಾಜಿ ಸಾಹೇಬರಿಂದ ದೇವರಿಗೆ ವಂದನೆ ಎಂದು ಉಲ್ಲೇಖವಿದೆ. ಹಾಗಾಗಿ ರೂಢಿ ಸಂಪ್ರದಾಯದಂತೆ ಖುರಾನ್ ಪಠಣಕ್ಕೆ ಅವಕಾಶ ನೀಡಲಾಗುತ್ತದೆ. ನಾಳೆ (ಮಾರ್ಚ್‌ 4) ರಥೋತ್ಸವಕ್ಕೂ ಮೊದಲು ಮೆದೂರಿನ ಖಾಜಿ ಸಾಹೇಬರ ಕುಟುಂಬ ಸದಸ್ಯರು‌ ಕುರಾನ್‌ ಪಠಣ ಮಾಡಲಿದ್ದಾರೆ. ಆದರೆ, ಕಳೆದ ಬಾರಿಯಂತೆ ರಥದ ಮುಂದೆ ಪಠಣ ಮಾಡುವ ಬದಲು, ಆರು ವರ್ಷದ ಹಿಂದೆ ಇದ್ದಂತೆ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.‌ ಅರ್ಚನಾ ತಿಳಿಸಿದ್ದಾರೆ.

ಬ್ರಹ್ಮ ರಥೋತ್ಸವಕ್ಕೆ ಸರ್ಪಗಾವಲು

ಬೇಲೂರು ಚೆನ್ನಕೇಶ್ವರ ದೇವರ ರಥೋತ್ಸವ ಮಂಗಳವಾರ (ಏಪ್ರಿಲ್‌ 4) ನಡೆಯಲಿದೆ. ಇದೀಗ ಕುರಾನ್‌ ಪಠಣದ ವಿವಾದವೂ ಇರುವುದರಿಂದ ಹೆಚ್ಚಿನ ಪೊಲೀಸ್‌ ಪಡೆಗಳನ್ನು ನಿಯೋಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಪೆರೇಡ್ ನಡೆಸಲಾಗಿದೆ.

ರಥೋತ್ಸವದ ವೇಳೆ ಕುರಾನ್ ಪಠಣಕ್ಕೆ ವಿರೋಧ ವ್ಯಕ್ತಪಡಿಸಿರುವ ಸಂಘಟನೆಗಳು ಕುರಾನ್ ಪಠಿಣ ಮಾಡಿದ್ರೆ ಪ್ರತಿಭಟನೆಯ ಎಚ್ಚರಿಕೆ ನೀಡಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

Exit mobile version