Site icon Vistara News

Ananth Kumar: ಅನಂತಕುಮಾರ್ ಹೋರಾಟ, ರಾಜಕೀಯ ಜೀವನ ಪ್ರೇರಣೆ: ಪ್ರಲ್ಹಾದ ಜೋಶಿ

Pralhad Joshi visit Adamya chetana at hubballi

ಹುಬ್ಬಳ್ಳಿ: ಕರ್ನಾಟಕದ ಬಿಜೆಪಿಗೆ (BJP Karnataka) ಶಕ್ತಿ ತುಂಬಿದ್ದ ದಿ. ಅನಂತಕುಮಾರ್ (Ananth Kumar) ಅವರ ಹೋರಾಟ, ರಾಜಕೀಯ ಜೀವನ ನಮಗೆ ಪ್ರೇರಣೆ ಆಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ (Pralhad Joshi) ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ‘ಅನಂತ ಪ್ರೇರಣಾ ಕೇಂದ್ರ’ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅದಮ್ಯ ಚೇತನ ಸಂಸ್ಥೆಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಪ್ರಲ್ಹಾದ್‌ ಜೋಶಿ, ಕರ್ನಾಟಕದಲ್ಲಿ ಬಿಜೆಪಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರಂತೆ ಅದಮ್ಯ ಶಕ್ತಿ ತುಂಬಿದ್ದ ಮತ್ತೊಬ್ಬ ಮಹಾನ್ ನಾಯಕರೆಂದರೆ ಅದು ದಿ.‌ ಅನಂತಕುಮಾರ್ ಅವರಾಗಿದ್ದಾರೆ. ಅವರು ನನಗೆ ಅತ್ಯಾಪ್ತ ರಾಜಕೀಯ ಒಡನಾಡಿ ಮತ್ತು ಮಾರ್ಗದರ್ಶಕರಾಗಿದ್ದರು ಎಂದು ಸ್ಮರಿಸಿದರು.

ಇದನ್ನೂ ಓದಿ: Lok Sabha Election 2024: ಬಿಜೆಪಿಯಲ್ಲಿ ಕೆಆರ್‌ಪಿಪಿ ನಾಳೆ ವಿಲೀನ; ಅಧಿಕೃತ ಘೋಷಣೆ ಮಾಡಿದ ಜನಾರ್ದನ ರೆಡ್ಡಿ

ಅನಂತಕುಮಾರ್ ಅವರು ಹಾಕಿಕೊಟ್ಟ ರಾಜಕೀಯ ತಳಹದಿಯಲ್ಲೇ ತಾವು ರಾಜಕಾರಣದಲ್ಲಿ ನೆಲೆಯೂರಿದ್ದು, ಕಾಕತಾಳೀಯ ಎಂಬಂತೆ ಅವರು ನಿರ್ವಹಿಸಿದ ಹುದ್ದೆಗಳೇ ಕೆಲವು ನನಗೂ ದಕ್ಕುವಂತಾಯಿತು ಎಂದು ನೆನಪಿಸಿಕೊಂಡರು.

ರಾಜಕೀಯ ಜೀವನದಲ್ಲಿ ಉತ್ತಮ ಮಾರ್ಗದರ್ಶಕರಾಗಿದ್ದ ಅನಂತಕುಮಾರ್ ಸ್ಮರಣಾರ್ಥ ಹುಬ್ಬಳ್ಳಿಯಲ್ಲಿ ಸಹ ಅದಮ್ಯ ಚೇತನ ಸಂಸ್ಥೆ ಅನೇಕ ವರ್ಷಗಳಿಂದಲೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದು ಪ್ರಲ್ಹಾದ್‌ ಜೋಶಿ ಹೇಳಿದರು.

ಮಕ್ಕಳ ಹಸಿವು ನೀಗಿಸುವ ಅದಮ್ಯ ಚೇತನ

ಅನಂತಕುಮಾರ್ ಅವರ ಅದಮ್ಯ ಚೇತನ ಸಂಸ್ಥೆ ಕಳೆದ ಅನೇಕ ವರ್ಷಗಳಿಂದ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಿಸುತ್ತಿದೆ. ಈ ಮೂಲಕ ಮಕ್ಕಳ ಹಸಿವು ನೀಗಿಸುವ ಜತೆಗೆ ಶಿಕ್ಷಣಕ್ಕೂ ಪ್ರೇರಣೆ ನೀಡುತ್ತಿದೆ ಎಂದು ಪ್ರಲ್ಹಾದ್‌ ಜೋಶಿ ಹೇಳಿದರು.

ಅಯೋಧ್ಯೆಯಲ್ಲಿ ನಿತ್ಯ ಅನ್ನಪ್ರಸಾದ

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನದಿಂದಲೂ ನಿತ್ಯ ಬರುವ ಭಕ್ತರಿಗೆ ಅನ್ನ ಪ್ರಸಾದ ವಿತರಿಸುವ ಮೂಲಕ ಚೇತನ ಸಂಸ್ಥೆ ಮಾದರಿ ಕೆಲಸ ಮಾಡುತ್ತಿದೆ ಎಂದು ಪ್ರಲ್ಹಾದ್‌ ಜೋಶಿ ತಿಳಿಸಿದರು.

ಇದನ್ನೂ ಓದಿ: Lok Sabha Election 2024: ಡಾ. ಮಂಜುನಾಥ್‌ ಗೆಲುವಿಗೆ ಹರಕೆ ಹೊತ್ತ ಪತ್ನಿ; ಮಾ. 28ಕ್ಕೆ ಡಿಕೆಸು ನಾಮಪತ್ರ ಸಲ್ಲಿಕೆ

ಸಮಾರಂಭದಲ್ಲಿ ಶಾಸಕರಾದ ಮಹೇಶ್ ಟೆಂಗಿನಕಾಯಿ, ಅದಮ್ಯ ಚೇತನ ಸಂಸ್ಥೆಯ ಪ್ರಮುಖರಾದ ತೇಜಸ್ವಿನಿ ಅನಂತಕುಮಾರ್, ನಂದಕುಮಾರ್, ಮಾಜಿ ಶಾಸಕ ಅಶೋಕ ಕಾಟವೆ ಹಾಗೂ ಪಾಲಿಕೆ ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು.

Exit mobile version