ಧಾರವಾಡ : ವಿದ್ಯಾಗಿರಿ ಬಡಾವಣೆಯಲ್ಲಿರುವ ಲೇ ಮೋರ್ಜ್ ಸ್ಪಾನಲ್ಲಿ ನಡೆದ ಲೈಂಗಿಕ ಕಿರುಕುಳ ಆರೋಪದಡಿ ಕಾಂಗ್ರೆಸ್ ಮುಖಂಡನನ್ನು ಬಂಧಿಸಲಾಗಿದೆ (Arrest Case). ಮನೋಜ ಕರ್ಜಗಿ ಬಂಧಿತ ಕಾಂಗ್ರೆಸ್ ಮುಖಂಡನಾಗಿದ್ದಾನೆ.
ಮನೋಜ ಕರ್ಜಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ನಿರ್ದೇಶಕನಾಗಿದ್ದ. ತನ್ನ ಬ್ಯೂಟಿ ಪಾರ್ಲರನಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಾಂಕಾ ಎಂಬಾಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದರಿಂದ ಯುವತಿ ಬೇಸತ್ತು ಲೈಂಗಿಕ ಕಿರುಕುಳ ಕುರಿತು ದೂರು ದಾಖಲಿಸಿದ್ದರು. ಯುವತಿ ನೀಡಿದ ದೂರಿನ ಅನ್ವಯ ಮನೋಜ ಕರ್ಜಗಿಯನ್ನು ವಿದ್ಯಾಗಿರಿ ಪೊಲೀಸರು ಬಂಧಿಸಿದ್ದಾರೆ.
ಅಂಗಡಿಗೆ ನುಗ್ಗಿ ಯುವತಿ ಕಡೆಯವರು ಮನೋಜನ ಮೇಲೆ ಮಾರಣಾಂತಿಕ ದಾಳಿ ಮಾಡಿದ್ದಾರೆಂದು ಮನೋಜ ಪ್ರತಿ ದೂರು ದಾಖಲಿಸಿದ್ದಾರೆ. ಇದೀಗ ಯುವತಿ ಕಡೆಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | Arrest Case | ಹಣ ದುರ್ಬಳಕೆ ಆರೋಪ: ಮಂತ್ರಿ ಗ್ರೂಪ್ ಸಿಎಂಡಿ ಸುಶೀಲ್ ಪಾಂಡುರಂಗ ಮಂತ್ರಿ ಮತ್ತೆ ಅರೆಸ್ಟ್!