Site icon Vistara News

Assault Case : ಮಗು ಅಳುತ್ತಿದ್ದಕ್ಕೆ ಸಿಟ್ಟಾಗಿ ಗೋಡೆಗೆ ಎಸೆದು ಬಿಸಾಡಿದ ಪಾಪಿ ತಂದೆ!

Father throws baby crying

ಧಾರವಾಡ: ಮಗಳಿಗೆ ಬೆರಗುವ ಮೂಡಿಸುವ ಜಾದೂಗಾರನಾಗಿ ಇರಬೇಕಾದ ಅಪ್ಪನೊಬ್ಬ ಕ್ರೂರಿಯಾದ ಸುದ್ದಿ ಇದು. ಮಗು ಮಲಗುವಾಗ ಅಳುತ್ತೆ ಎಂಬ ಕಾರಣಕ್ಕೆ ಪಾಪಿ ತಂದೆ ಗೋಡೆಗೆ ಎಸೆದು ಬೀಸಾಕಿದ್ದಾನೆ. ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

ಒಂದು ವರ್ಷದ ಹೆಣ್ಣು ಮಗು ಸಾವು ಬದುಕಿನ ಮಧ್ಯೆ ಹೋರಾಡಿ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. ಶಂಬುಲಿಂಗಯ್ಯ ಶಾಪುರಮಠ ಎಂಬಾತ ಪಾಪಿ ತಂದೆಯಾಗಿದ್ದಾನೆ. ಕಳೆದ ರಾತ್ರಿ ಮಗು ಅಳುತ್ತಿತ್ತು. ಅಳುವ ಮಗುವಿಗೆ ಸಮಾಧಾನ ಪಡಿಸುವ ಬದಲಿಗೆ ಮಗುವಿನ ಕಾಲು ಹಿಡಿದು ಗೋಡೆಗೆ ಎಸೆದಿದ್ದಾನೆ.

ಗೋಡೆಗೆ ರಭಸವಾಗಿ ಎಸೆದ ಪರಿಣಾಮ ಮಗುವಿನ ತಲೆಗೆ ಬಲವಾದ ಪೆಟ್ಟಾಗಿದೆ. ಕೂಡಲೇ ಮಗುವಿನ ತಾಯಿ ಕಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿತ್ತು. ಆದರೆ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.

ಮಗಳಿಂದ ನಿದ್ರೆಗೆ ಭಂಗ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಂದು ವರ್ಷದ ಶ್ರೇಯಾ ಮೃತ ದುರ್ದೈವಿ. ಮಗು ಅಳುವುದರಿಂದ ತನ್ನ ನಿದ್ರೆಗೆ ಭಂಗ ಬರುತ್ತಿದೆ ಎಂದು ಶಂಭುಲಿಂಗಯ್ಯ ಶಾಪುರಮಠ ಗೋಡೆಗೆ ಎಸೆದಿದ್ದ. ಮಗುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕುಟುಂಬಸ್ಥರಿಂದ ಗರಗ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಾಪಿ ತಂದೆ ಶಂಬುಲಿಂಗಯ್ಯನನ್ನು ಬಂಧಿಸಿದ್ದಾರೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯನ್ನ ನಡೆದ ಘಟನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Namma Metro : ಬಟ್ಟೆ ಗಲೀಜು ಎಂದು ರೈತನಿಗೆ ಅಪಮಾನ; ಸರ್ಕಾರ, ಬಿಎಂಆರ್‌ಸಿಎಲ್‌ಗೆ ಚಾಟಿ ಬೀಸಿದ ಎನ್‌ಎಚ್‌ಆರ್‌ಸಿ

ಸೇನೆ ಸೇರಲಾಗದಿದ್ದ ಮೇಲೆ ಬದುಕಿ ಏನು ಪ್ರಯೋಜನ?; ಬೇಸರದಲ್ಲಿ ಯುವಕ ಆತ್ಮಹತ್ಯೆ

ಚಿಕ್ಕಮಗಳೂರು : ಭಾರತೀಯ ಸೇನೆ (Indian Army) ಸೇರುವ ಮಹತ್ವಾಕಾಂಕ್ಷೆ ಹೊತ್ತು ಪರೀಕ್ಷೆ ಎದುರಿಸಿದ್ದ ಯುವಕನೊಬ್ಬ ಪರೀಕ್ಷೆಯಲ್ಲಿ ಫೇಲ್‌ ಆದ (Failed in Army Exam) ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ (Chikkamagaluru News) ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಯಡದಾಳು ಗ್ರಾಮದ ಕಾರ್ತಿಕ್ (23) ಆತ್ಮಹತ್ಯೆ (Self Harming) ಮಾಡಿಕೊಂಡ ಯುವಕ.

ಕಾರ್ತಿಕ್‌ ಕಳೆದ ಎರಡು ವರ್ಷದಿಂದ ಸೇನಾ ಪರೀಕ್ಷೆಗೆ ಸಂಬಂಧಿಸಿ ಸಾಕಷ್ಟು ಸಿದ್ಧತೆಗಳನ್ನು ನಡೆಸಿದ್ದ. ಬರೆಯುವ ಪರೀಕ್ಷೆ, ದೈಹಿಕ ಪರೀಕ್ಷೆ, ಕ್ರೀಡೆ ಮತ್ತು ಇತರ ಹಲವು ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದ. ಇತ್ತೀಚೆಗೆ ಪರೀಕ್ಷೆಯೂ ನಡೆದಿತ್ತು. ಒಂದೆರಡು ದಿನದ ಹಿಂದೆ ಅದರ ಫಲಿತಾಂಶ ಬಂದಿತ್ತು. ಕಾರ್ತಿಕ್‌ ಸೇನೆಗೆ ಸೆಲೆಕ್ಟ್‌ ಆಗಿರಲಿಲ್ಲ. ಈ ಬಾರಿ ಸೆಲೆಕ್ಟ್‌ ಆಗಗಿದ್ದರೂ ಮುಂದೆ ಅವಕಾಶ ಸಿಗಬಹುದು ಎಂಬ ಆಲೋಚನೆಗೂ ಹೋಗದೆ, ಸೇನೆಗೆ ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕಾಗಿಯೇ ಖಿನ್ನನಾದ.

Self Harming: ಡೆತ್‌ ನೋಟ್‌ನಲ್ಲಿ ಏನಿತ್ತು?

ಬುಧವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ʻʻಭಾರತೀಯ ಸೇನೆಯ ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ. ಇದನ್ನು ಮನೆಯವರಿಗೆ ಹೇಳುವ ಧೈರ್ಯ ನನ್ನ ಬಳಿ ಇಲ್ಲ. ಹೀಗಾಗಿ ನಿರ್ಗಮಿಸುತ್ತಿದ್ದೇನೆʼʼ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ.

ಈ ಬಗ್ಗೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೇನೆ ಸೇರುವ ಕನಸು ಹೊತ್ತು ಸಾಕಾರವಾಗದೆ ಪ್ರಾಣವನ್ನೇ ಕಳೆದುಕೊಂಡ ಯುವಕನ ಹೆತ್ತವರು ಈಗ ಕಣ್ಣೀರು ಹಾಕುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ‌

Exit mobile version