ಧಾರವಾಡ: ಕರ್ನಾಟಕ ವಿಧಾನಪರಿಷತ್ತಿನ ಪಶ್ಷಿಮ ಶಿಕ್ಷಕಕರ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಬಸವರಾಜ ಹೊರಟ್ಟಿ ಅವರು ತಮ್ಮ ಅದೃಷ್ಟದ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಸಿದರು.
ಈಗಾಗಲೇ ಎರಡು ಪ್ರತಿ ನಾಮಪತ್ರವನ್ನು ಹೊರಟ್ಟಿ ಸಲ್ಲಿಸಿದ್ದಾರೆ. ಎರಡೂ ಪ್ರತಿ ನಾಮಪತ್ರಗಳು ಸ್ವೀಕಾರ ಆಗಿವೆ. ಇನ್ನೊಂದು ನಾಮಪತ್ರ ಮೇ 26ಕ್ಕೆ ಸಿಎಂ ಬಸವರಾಜ ಬೊಮ್ಮಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸೇರಿ ಅನೇಕ ನಾಯಕರೊಂದಿಗೆ ಬಂದು ಮತ್ತೊಂದು ನಾಮಪತ್ರ ಸಲ್ಲಿಸುತ್ತೇನೆ ಎಂದರು.
ಇದನ್ನೂ ಓದಿ | BJPಗೆ ಹೊರಟ್ಟಿ ಅಧಿಕೃತ ಸೇರ್ಪಡೆ: ದೇವೇಗೌಡರಿಗೆ ಮುಖ ತೋರಿಸೋ ಧೈರ್ಯವಿಲ್ಲವೆಂದ ನಾಯಕ
ಈ ಭಾರತ ದೇಶದಲ್ಲಿ ಶಿಕ್ಷಕರ ಕ್ಷೇತ್ರದಿಂದ ಏಳು ಸಲ ಯಾರೂ ಪರಿಷತ್‌ಗೆ ಆರಿಸಿ ಬಂದಿಲ್ಲ. 8ನೇ ಬಾರಿ ಆರಿಸಿ ಬಂದಲ್ಲಿ ದಾಖಲೆ ಆಗುತ್ತದೆ. ಆ ದಾಖಲೆ ಆಗಬೇಕು ಅಂತಾನೇ ಎಲ್ಲರೂ ನಮ್ಮ ಕಡೆ ಒಲವು ತೋರಿಸಿದ್ದಾರೆ ಎಂದರು.
ಅಂಬಾಸಿಡರ್ ಕಾರಿನ ಕುರಿತು ಮಾತನಾಡಿದ ಹೊರಟ್ಟಿ, ʼನನಗೆ ಈ ಕಾರಿನ ಮೇಲೆ ಅದೆನೋ ಒಂದು ಭಾವನಾತ್ಮಕ ಸಂಬಂಧ. ನನಗೆ ಈ ಕಾರ್ ಮೇಲೆ ಬಹಳ ಪ್ರೀತಿ. ಆ ಪ್ರೀತಿಗಾಗಿ ತೊಗೊಂಡು ಬಂದಿದ್ದೇನೆ. ಈಗಾಗಲೇ ಅದು 8 ಲಕ್ಷ ಕಿ.ಮೀ. ಓಡಿದೆ. ಎಲ್ಲರಿಗೂ 5757 ಅಂದ್ರೆ ಪರಿಚಯ. ಈ ಕಾರಿನಲ್ಲಿ ಹೋದರೆ ಹೊರಟ್ಟಿ ಬಂದ್ರು ಎನ್ನುತ್ತಿದ್ದರು. ಶುಭ ಕಾರ್ಯಕ್ಕೆ ಈ ಕಾರ್ ಒಳ್ಳೆಯದು ಅನ್ನೋದು ನನಗೆ ನಂಬಿಕೆ. ಹೀಗಾಗಿ ಈ ಕಾರು ಬಳಸುತ್ತೇವೆ ಎಂದರು.
ಇದನ್ನೂ ಓದಿ | ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ‘ಕೈ’ ರಣತಂತ್ರ: ಇಂದು ಸಭೆ