Site icon Vistara News

kodi mutt swamiji: ದೇಶದಲ್ಲಿ ಸನ್ಯಾಸಿ ಸೇರಿ ರಾಷ್ಟ್ರೀಯ ನಾಯಕರ ಸಾವು; ಯುದ್ಧ ಭೀತಿ, ಅಣುಬಾಂಬ್‌ ಸ್ಫೋಟ: ಕೋಡಿಮಠ ಶ್ರೀ

Death of national leaders including sanyasi in the country Kodi mutt swamiji predicts

ಹುಬ್ಬಳ್ಳಿ: ಈ ವರ್ಷ ಒಟ್ಟು ಮೂರು ಗಣ್ಯರ ಸಾವು ಉಂಟಾಗಲಿದೆ. ಇಬ್ಬರು ರಾಷ್ಟ್ರಮಟ್ಟದ ನಾಯಕರು ಹಾಗೂ ಧಾರ್ಮಿಕರೊಬ್ಬರು ಮೃತಪಡುತ್ತಾರೆ ಎಂದು ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ (kodi mutt swamiji) ಭವಿಷ್ಯ ನುಡಿದಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಕೋಡಿಮಠ ಸ್ವಾಮೀಜಿ, ರಾಷ್ಟ್ರ ಮಟ್ಟದ ಇಬ್ಬರು ನಾಯಕರಿಗೆ ಸಾವಿನ ಕಂಟಕ ಇದೆ. ಸನ್ಯಾಸಿಯೊಬ್ಬರ ಜೀವಕ್ಕೂ ಆಪತ್ತು ಎದುರಾಗಲಿದೆ. ಇದಲ್ಲದೆ, ವಿದೇಶಗಳಲ್ಲಿ ಆಗುವ ಕೆಲ ಬೆಳವಣಿಗೆಗಳಿಂದ ಭಾರತಕ್ಕೂ ಯುದ್ಧ ಭೀತಿ ಎದುರಾಗಲಿದೆ ಎಂದು ಹೇಳಿದರು.

ಕರ್ನಾಟಕದ ಭವಿಷ್ಯ ಏನು?

ಇನ್ನು ಕೋಡಿಮಠದ ಸ್ವಾಮೀಜಿ ಕರ್ನಾಟಕದ ಬಗ್ಗೆಯೂ ಭವಿಷ್ಯವನ್ನು ನುಡಿದಿದ್ದು, ಮುಂಬರುವ ದಿನಗಳಲ್ಲಿ ಅಕಾಲಿಕ ಮಳೆ ಭಾರಿ ಪ್ರಮಾಣದಲ್ಲಿ ಆಗಲಿದೆ. ಇದರಿಂದ ಬೆಳೆ ಹಾನಿ ಆಗುವುದರ ಜತೆಗೆ ಜನರ ಜೀವಕ್ಕೂ ಆಪತ್ತು ಎದುರಾಗಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಬರಗಾಲದಿಂದ ಕಂಗೆಟ್ಟಿದ್ದ ರೈತರು ಹಾಗೂ ನಾಗರಿಕರು ಮುಂದೆ ಪ್ರವಾಹಕ್ಕೆ ತುತ್ತಾಗುವ ಎಚ್ಚರಿಕೆಯನ್ನು ಶ್ರೀಗಳು ನೀಡಿದ್ದಾರೆ.

ಅಣುಬಾಂಬ್‌ ಬೀಳಲಿದೆ

ಇನ್ನು ವಿಶ್ವದ ಬಗ್ಗೆ ಹೇಳುವುದಾದರೆ ಯುದ್ಧ ಭೀತಿ ಎದುರಾಗಲಿದೆ. ಅಲ್ಲಿ ಅಣುಬಾಂಬ್‌ ಸ್ಫೋಟಕ್ಕೂ ಸಂಚು ಮಾಡಲಾಗುತ್ತದೆ. ಈ ವರ್ಷ ಜಾಗತಿಕವಾಗಿ ತುಂಬಾ ಅಪಾಯಕಾರಿಯಾಗಿದೆ. ಗೌರಿ ಶಂಕರ‌ ಶಿವಾ.. ಶಿವಾ.. ಎನ್ನುವ ರೀತಿ ಆಗಲಿದ್ದು, ಮನುಕುಲ ಸಂಕಷ್ಟಕ್ಕೆ ಸಿಲುಕಲಿದೆ. ಮುಂಬರಲಿರುವ ದಿನಗಳು ಕಷ್ಟಕರವಾಗಿವೆ ಎಂದು ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.

ಈ ವರ್ಷ ಸಾಕಷ್ಟು ತೊಂದರೆ

2024ರ ವರ್ಷ ಬಹಳ ತೊಂದರೆಯಿಂದ ಕೂಡಿರಲಿದೆ. ಕಾಲಕ್ಕೆ ಮಳೆ ಬೆಳೆ ಬರಲ್ಲ. ಅಕಾಲಿಕ ಮಳೆ ಬೆಳೆ ಬರುತ್ತದೆ. ಇದರಿಂದ ಜನರಿಗೆ ತೊಂದರೆ ಆಗಲಿದೆ. ಇದರ ಜತೆಗೆ ಜಾಗತಿಕ ಮಟ್ಟದಲ್ಲಿ ಸಹ ದೊಡ್ಡ ಪ್ರಮಾಣದ ಅನಾಹುತ ಆಗುತ್ತವೆ. ವಿದೇಶದಲ್ಲಿ ಆಗುವ ಅನಾಹುತ ನಮ್ಮ ದೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

ಯುಗಾದಿ ಬಳಿಕ ರಾಜಕೀಯದಲ್ಲಿ ಏರುಪೇರು!

ಯುಗಾದಿ ಬಳಿಕ ರಾಜ್ಯ ರಾಜಕೀಯದಲ್ಲಿ (Karnataka Politics) ಹಲವು ಏರುಪೇರಾಗಲಿದೆ. ಆ ಬಗ್ಗೆ ಮಾತನಾಡಲು ಆಗಲ್ಲ. ಯುಗಾದಿ ಬಳಿಕ ನಾನು ಅಧ್ಯಯನ ಮಾಡಿ ತಿಳಿಸಬಹುದು ಎಂದು ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.

ಇದನ್ನೂ ಓದಿ: 40 percent commission: ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಡಿಕೆಶಿಗೆ‌ ಖುದ್ದು ಹಾಜರಾಗಲು ಸಮನ್ಸ್; ಶ್ರೀರಾಮುಲುಗೆ ಸಂಕಷ್ಟ

ಆಂತರಿಕ ಮಾಲಿನ್ಯ ಹೆಚ್ಚಾಗಲಿದೆ

ನಾಡಿನಲ್ಲಿ ಒಳ್ಳೆಯ ಆಹಾರ ಗಾಳಿ, ವಾತಾವರಣ ಇಲ್ಲದಾಗಿದೆ. ಮನುಷ್ಯನ ಆರೋಗ್ಯ ಮತ್ತು ಆಯುಷ್ಯ ಕಡಿಮೆ ಆಗುತ್ತಿದೆ. ಇತ್ತ ಪರಿಸರ‌ ಮಾಲಿನ್ಯ ಹೆಚ್ಚಾಗುತ್ತಿದೆ. ಇನ್ನು ಮನಷ್ಯನಲ್ಲಿ ಆಂತರಿಕ ನೆಮ್ಮದಿ ಇಲ್ಲದಂತಾಗಿದೆ. ಹಲವು ದುಶ್ಚಟಕ್ಕೆ ಬಲಿಯಾಗುತ್ತಿದ್ದಾನೆ ಎಂದು ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.

Exit mobile version