Site icon Vistara News

ಒಂಬತ್ತು ಚಿನ್ನದ ಪದಕಕ್ಕೆ ಮುತ್ತಿಟ್ಟ ಡಿ ದರ್ಜೆ ನೌಕರನ ಪುತ್ರಿ

ಒಂಬತ್ತು ಚಿನ್ನದ ಪದಕಕ್ಕೆ

ಧಾರವಾಡ: ಒಂದಲ್ಲ ಎರಡಲ್ಲ ಒಟ್ಟು ಒಂಬತ್ತು ಚಿನ್ನದ ಪದಕಕ್ಕೆ ಮುತ್ತಿಡುತ್ತಿರೋ ಈ ಯುವತಿ ಸಾಧನೆ ನಿಜಕ್ಕೂ ಎಲ್ಲರನ್ನೂ ಅಚ್ಚರಿಗೊಳಿಸುತ್ತೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮದವಳಾದ ಸುಜಾತಾ ಜೋಡಳ್ಳಿ ಸದ್ಯ, ಕರ್ನಾಟಕ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಸಾಧನೆಗೆ ರಾಜ್ಯಪಾಲರಿಂದ ಪ್ರಶಂಸೆ ಪಡೆದಿದ್ದಾರೆ.

ಈಕೆಯ ತಂದೆ ನಾಗೇಶ ಜೋಡಳ್ಳಿ ಮತ್ತು ತಾಯಿ ಮಹಾದೇವಿ. ಸುಜಾತಾ ಜೋಡಳ್ಳಿ ತಂದೆ ಗ್ರಾಮ ಪಂಚಾಯತ್‌ನಲ್ಲಿ ಡಿ ದರ್ಜೆ ನೌಕರಿಯನ್ನು ಮಾಡುತ್ತಿದ್ದಾರೆ.

ಪತ್ರಿಕೋದ್ಯಮ ವಿಭಾಗದಲ್ಲಿ ಅತಿ ಹೆಚ್ಚು ಚಿನ್ನದ ಪದಕವನ್ನು ಗಿಟ್ಟಿಸಿಕೊಳ್ಳುವುದರ ಮೂಲಕ 2022ರ ವಿಶ್ವವಿದ್ಯಾಲಯದ ಅತಿ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ. 9 ಚಿನ್ನದ ಪದಕಕ್ಕೆ ಮುತ್ತಿಟ್ಟು ತನ್ನ ಬಡತನವನ್ನ ಮೆಟ್ಟಿ ನಿಂತು ಸಾಧನೆಗೈದಿದ್ದಾರೆ. ಮಗಳ ಈ ಸಾಧನೆಗೆ ತಂದೆ ತಾಯಿ ಸಂತಸ ವ್ಯಕ್ತಪಡಿಸಿದ್ದು ಸಾಧನೆಯನ್ನು ಕೊಂಡಾಡಿದ್ದಾರೆ.

ಬಡತನದಲ್ಲೇ ಕಲಿತು ಹೊಸ ದಾಖಲೆ ಮಾಡಿದ ವಿದ್ಯಾರ್ಥಿನಿಗೆ ಸ್ನೇಹಿತರು, ಗುರುಗಳು ಶುಭಾಶಯ ಹೇಳಿ ಖುಷಿ ಹಂಚಿಕೊಂಡರು. ಮನೆಯಲ್ಲಿ ಬಡತನ ಇದ್ದರೂ ಅದ್ಯಾವುದೂ ಸಾಧನೆಗೆ ಅಡ್ಡಿಯಾಗದು ಎಂದು ಈಕೆ ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮದಲ್ಲೇ ಹಲವು ಸಾಧನೆ ಮಾಡುವ ಉತ್ಸಾಹ ಹೊಂದಿರುವುದಾಗಿ ಸುಜಾತಾ ತಿಳಿಸಿದ್ದಾರೆ.

ಇದನ್ನೂ ಓದಿ: ಮ್ಯಾರಥಾನ್‌ಗಾಗಿ ನೇಪಾಳಕ್ಕೆ ಹಾರಿದ ಹಾವೇರಿ ಪೋರ: ಮುಮ್ಮದ್‌ ಜೈದ್‌ ಸಾಧನೆ

Exit mobile version