Site icon Vistara News

Fire Accident : ಅನಿಲ ಸೋರಿಕೆಯಿಂದ ಬೆಂಕಿ; ಅಡುಗೆ ಮನೆಯಲ್ಲೇ ಸುಟ್ಟು ಕರಕಲಾದ ಮಹಿಳೆ

Fire Accident Gas leakage

ಧಾರವಾಡ: ಅಡುಗೆ ಮನೆಯಲ್ಲಿದ್ದ ಗ್ಯಾಸ್‌ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ (Gas leakage from cylinder) ಮನೆಗೆ ಬೆಂಕಿ ಹತ್ತಿಕೊಂಡು (Fire Accident at House) ಆ ಬೆಂಕಿಯಲ್ಲಿ ಮಹಿಳೆಯೊಬ್ಬರು ದಹಿಸಿ (Woman Burnt Alive) ಹೋದ ಭೀಕರ ಘಟನೆ ಧಾರವಾಡ (Dharwad News) ತಾಲೂಕಿನ ಕಲ್ಲೆ ಗ್ರಾಮದಲ್ಲಿ ನಡೆದಿದೆ.

ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಈ ಮನೆಯ ಅಡುಗೆ ಮನೆಯಲ್ಲಿ ಇದ್ದ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಗ್ಯಾಸ್‌ ಸ್ಟವ್‌ನಿಂದ ಬೆಂಕಿ ಹತ್ತಿಕೊಂಡಿತು. ಆಗ ಅಡುಗೆ ಮನೆಯಲ್ಲಿದ್ದ ಮಹಾದೇವಿ ಒಗೆನ್ನವರ(28) ಅವರಿಗೆ ಬೆಂಕಿ ಹತ್ತಿಕೊಂಡಿತು. ಬೆಳಗ್ಗೆ ಬೆಳಗ್ಗೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆಕೆಗೆ ಹೊರಗೆ ಬರಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಅವರಿಗೆ ತುಂಬಾ ಸುಟ್ಟ ಗಾಯಗಳಾದವು.

ಈ ನಡುವೆ, ಆಕೆಯನ್ನು ರಕ್ಷಿಸಲು ಇನ್ನೂ ಕೆಲವು ಮಹಿಳೆಯರು ಮುಂದಾಗಿದ್ದು, ಅವರಿಗೂ ಸುಟ್ಟ ಗಾಯಗಳಾಗಿವೆ. ಮಹಾದೇವಿ ಸೇರಿದಂತೆ ಉಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾದೇವಿ ಅವರು ಮೃತಪಟ್ಟರೆ ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ಆರಿಸುವಲ್ಲಿ ನೆರವಾದರು.

ಚಿಲ್ಲರೆ ಅಂಗಡಿ ವ್ಯಾಪಾರಿ ಶವ ಪತ್ತೆ; ಕೊಲೆ ಶಂಕೆ

ಮೈಸೂರು: ಹುಣಸೂರು ತಾಲೂಕಿನ ಹರವೆ ಗ್ರಾಮದಲ್ಲಿ ಚಿಲ್ಲರೆ ಅಂಗಡಿ ವ್ಯಾಪಾರಿಯಾಗಿದ್ದ ಎಚ್‌.ಸಿ. ಹರೀಶ್ (40) ಎಂಬವರು ಅರೆಬೆಂದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾಲಿಗ್ರಾಮ ತಾಲೂಕಿನ ಕುಪ್ಪೆ ಅರಣ್ಯದ ಮಳಲಿ- ಹೊಸಕೋಟೆ ರಸ್ತೆಯ ಪಕ್ಕದಲ್ಲಿ ಶವ ಪತ್ತೆಯಾಗಿದೆ. ಇವರನ್ನು ಸ್ನೇಹಿತರು ಬಂದು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂಬ ಸಂಶಯ ಕೇಳಿಬಂದಿದೆ. ಮಾಹಿತಿ ತಿಳಿದ ಸಾಲಿಗ್ರಾಮ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೊಲೆಯ ಹಿಂದಿನ ವಿದ್ಯಮಾನಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Murder Case : ಪತ್ನಿಯ ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಕಿರಾತಕ; ಪೋಸ್ಟ್‌ಮಾರ್ಟಂನಲ್ಲಿ ಸಿಕ್ಕಿಬಿದ್ದ!

ಚಿತ್ರದುರ್ಗ: ಸಾಲಗಾರರ ಕಾಟಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ?

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ನಗರದ ಬಸವ ಲೇಔಟ್ ನಿವಾಸಿ ರಂಜಿತಾ (23) ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಗಂಡ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿಕೊಂಡಿದ್ದು, ಅದನ್ನು ಕೇಳಲು ಸಾಲಗಾರರು ಆಗಾಗ ಬರುತ್ತಿದ್ದರು ಎನ್ನಲಾಗಿದೆ. ಅವರ ಕಿರಿಕಿರಿ ತಾಳಲಾರದೆ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಹೇಳಲಾಗಿದೆ. ಪತ್ನಿಯ ಸಾವಿಗೆ ಸಾಲಗಾರರೆ ಕಾರಣ ಎಂದು ರಂಜಿತಾ ಪತಿ ದರ್ಶನ್ ಕೂಡಾ ದೂರು ನೀಡಿದ್ದಾನೆ.

ಸಣ್ಣ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ದರ್ಶನ್ ಜತೆ ಐದು ವರ್ಷಗಳ ಹಿಂದೆ ರಂಜಿತಾ ಮದುವೆ ನಡೆದಿತ್ತು. ದರ್ಶನ್‌ಗೆ ಒಳ್ಳೆಯ ಉದ್ಯೋಗವಿದ್ದರೂ ದರ್ಶನ್‌ ಖಾಸಗಿಯಾಗಿ ಕೋಟಿಗಟ್ಟಲೆ ಸಾಲ ಮಾಡಿಕೊಂಡಿದ್ದ.

ಹೀಗಾಗಿ ಸಾಲಗಾರರು ದಿನನಿತ್ಯ ಮನೆಗೆ ಬಂದು ಹಣ ನೀಡುವಂತೆ ಬಲವಂತ ಮಾಡುತ್ತಿದ್ದರು. ಹಣಕ್ಕಾಗಿ ಮನೆ ಹತ್ತಿರ ಬಂದು ದಂಪತಿಗಳಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಸಾಲಗಾರರ ಕಿರುಕುಳಕ್ಕೆ ಬೇಸತ್ತು ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ಹೇಳಿದ್ದು, ಪೊಲೀಸರು ಎಲ್ಲ ದಿಕ್ಕಿನಲ್ಲೂ ತನಿಖೆ ನಡೆಸಿದ್ದಾರೆ.

Exit mobile version