Site icon Vistara News

Murder Case : ತಾಯಿಯಿಂದಲೇ ಮಗುವಿನ ಮರ್ಡರ್‌; ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಕೊಂದಳೇ?

Murder case child death

ಧಾರವಾಡ: ಧಾರವಾಡದ ಕಮಲಾಪುರದಲ್ಲಿ (Dharawad News) ಐದು ವರ್ಷದ ಪುಟ್ಟ (Five year old child killed) ಕಂದಮ್ಮ ನಿಗೂಢವಾಗಿ ಕೊಲೆಯಾಗಿದೆ (Murder Case). ಹೆತ್ತ ತಾಯಿಯೇ ಈ ಕೊಲೆ ಮಾಡಿದ್ದಾಳೆ (Child killed by Mother) ಎಂಬ ಆಪಾದನೆ ಎದುರಾಗಿದೆ. ಆದರೆ, ನಾನಲ್ಲ ಎನ್ನುತ್ತಿದ್ದಾಳೆ ತಾಯಿ.

ಜ್ಯೋತಿ ಕಲ್ಲಯ್ಯ ಹಿರೇಮಠ ಎಂಬ ಐದು ವರ್ಷದ ಮಗು ಸಹನಾ ಹಿರೇಮಠ ನಿಗೂಢವಾಗಿ ಕೊಲೆಯಾದವಳು. ಮಗುವಿನ ಕತ್ತನ್ನು ಕೊಯ್ದು ಭೀಕರವಾಗಿ ಕೊಲೆ ಮಾಡಲಾಗಿದೆ. ತಾಯಿ ಜತೆ ವಾಸವಾಗಿದ್ದ ಮಗು ಮನೆಯಲ್ಲಿರುವಾಗಲೇ ಕೊಲೆಯಾಗಿದೆ. ಹೀಗಾಗಿ ತಾಯಿಯೇ ಕೊಲೆ ಮಾಡಿದ್ದು ಎಂಬುದು ಎಲ್ಲರ ಅಭಿಪ್ರಾಯ. ಕಮಲಾಪುರದ ಶಾಲೆಯ ಪಕ್ಕದ ಹೂಗಾರ ಓಣಿಯ ಮನೆಯಲ್ಲಿ ಈ ಘಟನೆ ನಡೆದಿದೆ.

ಜ್ಯೋತಿ ಹಿರೇಮಠಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿದೆ ಒಂದು ಮಗು ಹುಟ್ಟಿದೆ. ಅದು ವಿಕಲಚೇತನ ಮಗು. ಮಗು ಮತ್ತು ಇತರ ವಿಚಾರಗಳಿಗೆ ಸಂಬಂಧಿಸಿ ಗಂಡ, ಹೆಂಡಿರ ನಡುವೆ ಸಂಬಂಧ ಹದಗೆಟ್ಟಿತ್ತು. ಈ ಕಾರಣಕ್ಕಾಗಿ ಆಕೆ ಗಂಡನನ್ನ ಬಿಟ್ಟು ಬಂದು ನವನಗರದಲ್ಲಿ ವಾಸವಾಗಿದ್ದಳು.

ಈ ನಡುವೆ ನವನಗರದಲ್ಲಿ ಆಕೆ ಇನ್ನೊಬ್ಬನ ಜತೆ ಸಂಬಂಧ ಹೊಂದಿದ್ದಾಳೆ ಎಂದು ಹೇಳಲಾಗುತ್ತಿದೆ. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಆತ ಇತ್ತೀಚೆಗೆ ವಿಕಲ ಚೇತನ ಹೆಣ್ಣು ಮಗುವಿನ ಬಗ್ಗೆ ಅಸಹನೆ ತೋರಿಸುತ್ತಿದ್ದಾನೆ ಎನ್ನಲಾಗಿದೆ. ಜ್ಯೋತಿಗೆ ತನ್ನ ಅಕ್ರಮ ಸಂಬಂಧವನ್ನು ಆಸರೆಯಾಗಿ ಉಳಿಸಿಕೊಳ್ಳುವ ಜರೂರತ್ತು ಇತ್ತು ಅನಿಸುತ್ತದೆ. ಹಾಗಾಗಿ ವಿಕಲಚೇತನ ಮಗು ಇರಬಾರದು ಎಂಬ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.

‌ಇದನ್ನೂ ಓದಿ : Illicit relationship : Live in ಇದ್ದಾಗಲೇ ಮತ್ತೊಬ್ಬನ ಜತೆ Love in! ಸಂಗಾತಿ ಸೂಸೈಡ್‌

ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

ಕಳೆದ ಎರಡು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ಧಾರವಾಡದ ಯುವಕನೊಬ್ಬ ಕೆಲಗೇರಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಧಾರವಾಡ ಸಾಧನಕೇರಿ ಗ್ರೀನ್ ವಿವ್ ನಿವಾಸಿಯಾದ 23 ವರ್ಷದ ಚೇತನ ಶರಣಪ್ಪ ತೊಂಡಿಹಾಳ ಮಾನಸಿಕವಾಗಿ ನೊಂದು ಕೆರೆಯಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.

ಕಳೆದ ಎರಡು ದಿನಗಳ ಹಿಂದೆ ಮನೆಯಿಂದ ಮರೆಯಾಗಿದ್ದ ಅಗ್ನಿಶಾಮಕ ದಳದ DFO ಗೋವಿಂದ, ASOPT ಹೊಸಮನಿ, ಅರ್ಜುನ ಮಂಗಳೂರ, ಮಲ್ಲಿಕಾರ್ಜುನ ಜಕಣಾಚಾರಿ, ಶಬ್ಬೀರ ಮನಿಯಾರ, ಲಾಲಸಾಬ ಶವವನ್ನ ಹೊರತೆಗೆದಿದ್ದಾರೆ. ಪ್ರಕರಣ ಉಪನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆಯನ್ನ ನಡೆಸುತ್ತಿದ್ದಾರೆ.

ಆತ ಫುಟ್ಬಾಲ್‌ ಆಟದಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದು, ಪಾಠದ ಕಡೆಗೂ ಗಮನ ಕೊಡು ಎಂದು ಮನೆಯವರು ಬುದ್ಧಿಮಾತು ಹೇಳಿದ್ದೇ ಸಾವಿಗೆ ಕಾರಣ ಎಂದು ಹೇಳಲಾಗಿದೆ.

Exit mobile version