ಧಾರವಾಡ: ಬೈಕ್ನಿಂದ ಇಳಿಯುವಾಗ ಕಾಲು ತಗುಲಿದ್ದನ್ನು ಪ್ರಶ್ನಿಸಿದ ವ್ಯಕ್ತಿಯನ್ನು ಹತ್ಯೆ(Murder Case) ಮಾಡಿರುವ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದಲ್ಲಿ ನಡೆದಿದೆ.
ಅಮರಗೋಳ ಗ್ರಾಮದ ಸಂಗನಗೌಡ ಮುದಿಗೌಡ್ರ (50) ಮೃತರು. ಇದೇ ಗ್ರಾಮದ ಈರಪ್ಪ ಕಿತ್ತಲಿ, ಫಕ್ಕಿರಪ್ಪ ಕಿತ್ತಲಿ, ಬಸವರಾಜ ಕಿತ್ತಲಿ, ಮಂಜುನಾಥ್ ಕಿತ್ತಲಿ, ನಾಗರಾಜ ಕಿತ್ತಲಿ, ಬಸವರಾಜ ಕುರುಗೋವಿನಕೊಪ್ಪ ಆರೋಪಿಗಳು. ಆರೋಪಿಗಳಲ್ಲಿ ಒಬ್ಬರು ಬೈಕ್ನಿಂದ ಇಳಿಯುವಾಗ ಕಾಲು ಬಡಿದಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರಿಂದ ಸಂಗನಗೌಡ ಮೃತಪಟ್ಟಿದ್ದಾರೆ. ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Farmer Suicide | ಸಾಲ ಬಾಧೆ ತಾಳಲಾರದೆ ನೇಣಿಗೆ ಶರಣಾದ ರೈತ