ಧಾರವಾಡ: ಸ್ನೇಹಿತನೊಟ್ಟಿಗೆ ಪಾರ್ಟಿಗೆ ತೆರಳುತ್ತಿದ್ದ ಯುವಕನೊಬ್ಬ ರಸ್ತೆ ಅಪಘಾತದಲ್ಲಿ (Road Accident) ಮೃತಪಟ್ಟಿದ್ದಾನೆ. ಧಾರವಾಡದ (Dharwad News) ಮುಮ್ಮಿಗಟ್ಟಿ ಬಳಿ ಬುಧವಾರ ರಾತ್ರಿ ಘಟನೆ ನಡೆದಿದೆ. ಯುವಕರಿಬ್ಬರು ಪಾರ್ಟಿಗೆಂದು ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಓಂಕಾರ ಸಂಗಣ್ಣವರ (18) ಮೃತ ದುರ್ದೈವಿ.
ಧಾರವಾಡದ ಶೆಟ್ಟರ್ ಕಾಲೋನಿಯ ನಿವಾಸಿ ಓಂಕಾರ ಗೆಳೆಯನ ಜತೆಯಾಗಿ ಬೈಕ್‌ನಲ್ಲಿ ತೆರಳುತ್ತಿದ್ದಾ, ನಿಂತಿದ್ದ ಟ್ರಾಕ್ಟರ್ ಕಾಣದೇ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ಕೆಳೆಗೆ ಬಿದ್ದ ಓಂಕಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಓಂಕಾರ ಜತೆಗಿದ್ದ ಮತ್ತೊಬ್ಬ ಯುವಕ ವೃತ್ವಿಕ್ ಸಜ್ಜನ್ನವರ ಎಂಬಾತ ಗಂಭೀರ ಗಾಯಗೊಂಡಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ವೃತ್ವಿಕ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದ ಸ್ಥಳಕ್ಕಾಗಮಿಸಿದ ಗರಗ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Cyber Crime : ಹೆಂಡತಿ ಚಿತ್ರ, ಫೋನ್ ನಂಬರ್ ಹಾಕಿ ಕಾಲ್ ಗರ್ಲ್ ಬೇಕಾ ಎಂದು ಪೋಸ್ಟ್ ಹಾಕಿದ ಭೂಪ!
Fire Accident : ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಮನೆಗೆ ಬಿತ್ತು ಬೆಂಕಿ, ಇಲ್ಲಿದೆ ವಿಡಿಯೊ
ಬೆಂಗಳೂರು: ಇಲ್ಲಿನ ಸಾರಾಯಿಪಾಳ್ಯದ (Bangalore News) ಮನೆಯೊಂದರಲ್ಲಿ ಗುರುವಾರ ಬೆಳಗ್ಗೆ ಅಗ್ನಿ ಅವಘಡ (Fire Accident) ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಮನೆಯೊಂದರಿಂದ ಬೆಂಕಿ ಬರುತ್ತಿರುವುದನ್ನು ಗಮಸಿದ ಸ್ಥಳೀಯರು ಪೊಲೀಸರು ಹಾಗೂ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತಗೊಂಡ ಅವರ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.
ಅವಘಡ ಸಂಭವಿಸಿದ ಮನೆಯಲ್ಲಿ ಯಾರೂ ಇರಲಿಲ್ಲ ಎಂಬುದಾಗಿ ಮಾಹಿತಿಯಿದೆ. ಅಗ್ನಿ ಜ್ವಾಲೆಗಳು ಶಮನಗೊಂಡ ಬಳಿಕ ಉಳಿದ ಮಾಹಿತಿ ತಿಳಿಸುವುದಾಗಿ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಹೇಳಿದ್ದಾರೆ. ಸ್ಥಳೀಯರ ಪ್ರಕಾರ ಘಟನೆ ಸಂಭವಿಸಿದ ಮನೆಯಲ್ಲಿ ಯಾರೂ ಇರಲಿಲ್ಲ. ಗ್ಯಾಸ್ ಸೋರಿಕೆ ಅಥವಾ ಶಾರ್ಟ್ ಸರ್ಕೀಟ್ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿರಬಹುದು.
ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ ಕಾರಣ ಹೆಚ್ಚಿನ ಅನಾಹುತ ಆಗುವುದ ತಪ್ಪಿದೆ. ಎರಡು ಮಹಡಿಯ ಮನೆಯ ಮೇಲಿನ ಅಂತಸ್ತಿನದಲ್ಲಿ ಬೆಂಕಿ ಹೊತ್ತಿಕೊಂಡಿದೆ. ದಟ್ಟ ಹೊಗೆ ಹಾಗೂ ಬೆಂಕಿಯ ಜ್ವಾಲೆಯು ಮನೆಯಿಂದ ಹೊಸ ಸೂಸಿದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸುವ ಅವಕಾಶವ ಇಲ್ಲ ಎಂಬುದಾಗಿ ಸ್ಥಳದಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಬೆಂಕಿ ಅನಾಹುತ
ಬೇಸಿಗೆಯಲ್ಲಿ ಬೆಂಕಿಯ ಘಟನೆಗಳ ಹೆಚ್ಚಳಕ್ಕೆ ಹಲವಾರು ಕಾರಣಗಳಿವೆ ಮತ್ತು ಅವುಗಳಲ್ಲಿ ಹೆಚ್ಚಿನವು ತಾಪಮಾನದ ಏರಿಕೆಗೆ ನೇರವಾಗಿ ಸಂಬಂಧಿಸಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಗ್ಯಾಸ್ ಸೋರಿಕೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಮನೆಯಲ್ಲಿ ಬೆಂಕಿ ಉಂಟಾಗಬಹುದು.
ಬೇಸಿಗೆಯಲ್ಲಿ ಹವಾನಿಯಂತ್ರಣಗಳ ಬಳಕೆ ಹೆಚ್ಚು ಇರುತ್ತದೆ ಮತ್ತು ವಿದ್ಯುಚ್ಛಕ್ತಿಯ ಹೆಚ್ಚಿನ ಹಾದುಹೋಗುವಿಕೆಯಿಂದಾಗಿ, ಇದು ಅತಿಯಾದ ಬಿಸಿಗೆ ಕಾರಣವಾಗುತ್ತದೆ, ವಾತಾವರಣದ ಶಾಖದಿಂದ ಹದಗೆಡುತ್ತದೆ. ವಾತಾವರಣದ ಶಾಖದಿಂದ ವಾಹನಗಳ ವಿದ್ಯುತ್ ಸರ್ಕ್ಯೂಟ್ ಗಳು ಅತಿಯಾಗಿ ಬಿಸಿಯಾಗುವುದರಿಂದ ಶಾರ್ಟ್ ಸರ್ಕ್ಯೂಟ್ ಗಳು ಉಂಟಾಗುತ್ತವೆ.
ಮನೆಯಲ್ಲಿರುವ ವಸ್ತುಗಳ ನಿರ್ವಹಣೆ ಸೂಕ್ತ ಕಾಲಕ್ಕೆ ನಡೆಸಲು ವಿಫಲವಾದರೆ ಮತ್ತು ವಿಶ್ವಾಸಾರ್ಹವಲ್ಲದ ಮತ್ತು ವಿಶ್ವಾಸಾರ್ಹವಲ್ಲದ ವಸ್ತುಗಳನ್ನು ಇಡುವುದರಿಂದಲೂ ಬೆಂಕಿ ಉಂಟಾಗುತ್ತದೆ. ಸ್ಯಾನಿಟೈಸರ್ಗಳು, ಸುಗಂಧ ದ್ರವ್ಯಗಳು ಅಥವಾ ಲೈಟರ್ಗಳಂತಹ ಉರಿಯುವ ವಸ್ತುಗಳು ಬೇಸಿಗೆಯಲ್ಲಿ ಬೆಂಕಿಗೆ ಮತ್ತೊಂದು ಕಾರಣವಾಗಿದೆ.
ಬೆಂಕಿ ಅವಘಡಗಳನ್ನು ತಡೆಗಟ್ಟುವುದು ಹೇಗೆ?
ಬೆಂಕಿಯನ್ನು ತಡೆಗಟ್ಟಲು, ಮನೆ ಮಾಲೀಕರು ಮನೆಯಲ್ಲಿರುವ ಗ್ಯಾಸ್, ಕರೆಂಟ್ ಮೂಲಕ ಚಾಲನೆ ಪಡೆಯುವ ವಸ್ತುಗಳ ನಿರ್ವಹಣೆ ಮತ್ತು ತಪಾಸಣೆಯನ್ನು ಕೈಗೊಳ್ಳಬೇಕು. ಮನೆಯಿಂದ ಹೊರಕ್ಕೆ ಹೋಗುವ ಸಂದರ್ಭದಲ್ಲಿ ಲೈಟ್ ಮತ್ತು ಗ್ಯಾಸ್ ಸರಿಯಾಗಿ ಆಫ್ ಆಗಿದೆಯೇ ಎಂಬುದನ್ನೂ ತಪಾಸಣೆ ಮಾಡಬೇಕು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ