Site icon Vistara News

Self harming : ಆಟ ಕಡಿಮೆ ಮಾಡು, ಓದಿಗೆ ಗಮನ ಕೊಡು ಎಂದಿದ್ದಕ್ಕೇ ಯುವಕ ಆತ್ಮಹತ್ಯೆ

Self Harming death Dharwad.webp

ಧಾರವಾಡ: ಕ್ರೀಡೆಯ ಬಗ್ಗೆ ಆಸಕ್ತಿ (Interest on Sports) ಕಡಿಮೆ ಮಾಡಿ ಓದಿನ ಕಡೆ ಗಮನಕೊಡು ಎಂದು ಹೆತ್ತವರು ಸಲಹೆ ನೀಡಿದ್ದನ್ನೇ ದೊಡ್ಡ ವಿಚಾರ ಮಾಡಿ ನೊಂದುಕೊಂಡು ಯುವಕನೊಬ್ಬ ಆತ್ಮಹತ್ಯೆಗೆ (Self Harming) ಶರಣಾಗಿದ್ದಾನೆ. ಧಾರವಾಡದ (Dharwad News) ಸಾಧನ ಕೇರಿಯ ನಿವಾಸಿ ಚೇತನ್‌ ತೊಂಡಿಹಾಳ ಎಂಬಾತನೇ ಪ್ರಾಣ ಕಳೆದುಕೊಂಡವನು. ಅವನು ಧಾರವಾಡದ ಕೆಲಗೇರಿ ಕೆರೆಗೆ ಜಿಗಿದು ಮೃತಪಟ್ಟಿದ್ದಾನೆ.

ಪುಟ್ಬಾಲ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಯುವಕ ಎಲ್ಲಾ ಹೊತ್ತಿನಲ್ಲೂ ಆಟದ ಮೇಲೆಯೇ ಗಮನ ಕೊಡುತ್ತಿದ್ದ. ಆದರೆ, ಪಾಠದ ಕಡೆಗೆ ಗಮನ ಕೊಡುತ್ತಿರಲಿಲ್ಲ ಎನ್ನುವ ಕೊರಗು ತಂದೆಗಿತ್ತು. ಹಾಗಾಗಿ ಅವರು ಆಟ ಬಿಟ್ಟು ಸ್ವಲ್ಪ ಓದಿನ ಕಡೆಗೆ ಗಮನ ಕೊಡು ಎಂದು ಬುದ್ಧಿವಾದ ಹೇಳಿದ್ದರು. ಆದರೆ, ಚೇತನ್‌ ಇಷ್ಟಕ್ಕೇ ನೊಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದ.

ಸೋಮವಾರ ಸಂಜೆ ಯಾವುದೇ ಮಾತು ಹೇಳದೆ ಮನೆಯಿಂದ ಕಾಣೆಯಾಗಿದ್ದ ಚೇತನ್‌ಗಾಗಿ ಮನೆಯವರು ಭಾರಿ ಹುಡುಕಾಟ ನಡೆಸಿದ್ದರು. ಆತನ ಶವ ಬುಧವಾರ ಬೆಳಗ್ಗೆ ಕೆಲಗೇರಿ ಕೆರೆಯಲ್ಲಿ ಪತ್ತೆಯಾಗಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಕುವಿನಿಂದ ಇರಿದು ಯುವಕನ‌ ಭೀಕರ ಹತ್ಯೆ

ಕಲಬುರಗಿ: ಯುವಕನೊಬ್ಬನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಕಲಬುರಗಿ‌ ಆಶ್ರಯ ಕಾಲೊನಿಯಲ್ಲಿ ನಡೆದಿದೆ. ಕಲಬುರಗಿ‌ ಆಶ್ರಯ ಕಾಲೊನಿ ನಿವಾಸಿಯಾಗಿರುವ ರೋಹನ್‌ (22) ಕೊಲೆಯಾದ ಯುವಕ.

ರೋಹನ್‌ ಕಲಬುರಗಿ ನಗರದ ಏಷ್ಯನ್ ಮಾಲ್ ನಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಆತನನ್ನು ಮಂಗಳವಾರ ರಾತ್ರಿ ಆಶ್ರಯ ಕಾಲೋನಿಯಲ್ಲಿ ಕೊಲೆ ಮಾಡಿದ್ದು ಒಬ್ಬ ರೌಡಿ ಶೀಟರ್‌. ಮಹಾರಾಷ್ಟ್ರದ ಪುಣೆಯಿಂದ ಗಡಿಪಾರಾಗಿ ಬಂದಿದ್ದ ರೌಡಿ ಶೀಟರ್‌ ರೋಹನ್‌ ಜತೆಗೆ ಯಾವುದೋ ಕಾರಣಕ್ಕೆ ವೈರವನ್ನು ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಆತ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ : Murder Case : ತಾಯಿಗಿತ್ತು ಅನೈತಿಕ ಸಂಬಂಧ; ಅಪ್ಪನಿಗಾಗಿ ಕೊಲೆಗಾರನಾದ ಮಗ!

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಜೀಪ್

ಚಿಕ್ಕಮಗಳೂರು: ಕಳಸಾ ತಾಲೂಕಿನ ಹೀನಾರಿ ಬಳಿ ಜೀಪ್‌ ಒಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯ ಸಾರ್ವಜನಿಕರು ಚಾಲಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಹೀನಾರಿ ತಿರುವಿನಲ್ಲಿ ಒಂದೇ ತಿಂಗಳಲ್ಲಿ ಆರೇಳು ಬಾರಿ ವಾಹನಗಳು ಕಂದಕಕ್ಕೆ ಉರುಳಿ ಬಿದ್ದಿವೆ. ಒಂದೇ ತಿರುವಿನಲ್ಲಿ ಪದೇಪದೆ ಅಪಘಾತ ನಡೆದರೂ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಭಾಗದಲ್ಲಿ ತಡೆಗೋಡೆ ಇಲ್ಲದಿರುವುದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಇದರ ಜತೆಗೆ ಪ್ರವಾಸಿಗರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಮನವಿ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೀನಾರಿ ತಿರುವಿನಲ್ಲಿ ನಡೆದ ಘಟನೆ ಇದಾಗಿದೆ.

Exit mobile version