Site icon Vistara News

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆಯ ಕೊಲೆ, ಆರೋಪಿ ಬಂಧನ

woman murder

ಧಾರವಾಡ: ಧಾರವಾಡದಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ನಡೆಸಲಾಗಿದ್ದ ಮಹಿಳೆಯ ಬರ್ಬರ ಹತ್ಯೆ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ.

ಅ.14ರ ಸಂಜೆ ಜಿಲ್ಲಾಸ್ಪತ್ರೆ ಎದುರು ಸವಿತಾ ಕಿತ್ತೂರು ಎಂಬ ಮಹಿಳೆಯ ಹತ್ಯೆ ನಡೆದಿತ್ತು. ಹತ್ಯೆಗೆ ಸಂಬಂಧಿಸಿ ಆನಂದ ದುಧನಿ ಎಂಬಾತನನ್ನು ಬಂಧಿಸಲಾಗಿದೆ.

ಗಂಡನನ್ನು ಕಳೆದುಕೊಂಡಿದ್ದ ಸವಿತಾ ಕಿತ್ತೂರು, ನಂತರ ಆನಂದ ಜೊತೆ ಸಂಪರ್ಕ ಹೊಂದಿದ್ದರು. ಆಗ ಸವಿತಾಗೆ ಆನಂದ ಸಾಕಷ್ಟು ಹಣ ನೀಡಿದ್ದ. ನಂತರ ಇನ್ನೊಬ್ಬರ ಜೊತೆ ಸಂಪರ್ಕ ಬೆಳೆಸಿದ್ದರು. ಇದರಿಂದ ಕ್ರೋಧವಶನಾದ ಆನಂದ ಕೊಲೆ ಕೃತ್ಯ ಎಸಗಿದ್ದಾನೆ. ಧಾರವಾಡ ಉಪನಗರ ಪೊಲೀಸರಿಂದ ಆರೋಪಿಯ ವಿಚಾರಣೆ ಮುಂದುವರಿದಿದೆ.

ಇದನ್ನೂ ಓದಿ | ತಲೆ ಮೇಲೆ ಕಲ್ಲು ಹಾಕಿ ಮಹಿಳೆಯ ಬರ್ಬರ ಕೊಲೆ

Exit mobile version