ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟಂಗ್ ಆಗಾಗ ಸ್ಲಿಪ್ ಆಗುತ್ತಲೇ ಇರುತ್ತದೆ. ಬಿಜೆಪಿ ಬದಲು ಕಾಂಗ್ರೆಸ್ ಹೆಸರು ಹೇಳುತ್ತಿರುತ್ತಾರೆ. ಕಾಂಗ್ರೆಸ್ ಎಂದು ಹೇಳುವ ಬದಲು ಬಿಜೆಪಿ ಎನ್ನುತ್ತಾರೆ. ಚುನಾವಣೆ ರ‍್ಯಾಲಿಗಳಲ್ಲಿ ಸಿದ್ದರಾಮಯ್ಯ ಅವರು, ‘ಕಾಂಗ್ರೆಸ್‌ಅನ್ನು ನಿರ್ಮೂಲನೆ ಮಾಡಿ, ಬಿಜೆಪಿಯನ್ನು ಸ್ಪಷ್ಟ ಬಹುಮತದಿಂದ ಗೆಲ್ಲಿಸಿ’ ಎಂದೆಲ್ಲ ಬಾಯಿತಪ್ಪಿ ಹೇಳಿದ್ದಾರೆ. ಈಗ ಮತ್ತೆ ಸಿದ್ದರಾಮಯ್ಯ ಅವರು ಬಾಯಿತಪ್ಪಿ ಮೋದಿ ಎನ್ನುವ ಬದಲು ಪಿ.ವಿ.ನರಸಿಂಹರಾವ್ ಅವರ ಹೆಸರು ಉಲ್ಲೇಖಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಜಾರಿಗೆ ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಬಿಜೆಪಿ ನಾಯಕ, ಮಾಜಿ ಸಚಿವ ಆರ್.ಅಶೋಕ್ ಅವರು ಕೂಡ ಕಾಂಗ್ರೆಸ್ ಗ್ಯಾರಂಟಿ ಜಾರಿಗೆ ಆಗ್ರಹಿಸಿದ್ದಾರೆ. ಅಶೋಕ್ ಆಗ್ರಹದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, “ಬಿಜೆಪಿಯವರು ಹೇಳಿದ್ದನ್ನೆಲ್ಲ ಮಾಡಿದ್ದಾರಾ? ನರಸಿಂಹರಾಯರು 15 ಲಕ್ಷ ರೂ. ಹಾಕಿದ್ದಾರಾ” ಎಂದು ಕೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಉಲ್ಲೇಖಿಸುವ ಭರದಲ್ಲಿ ಮಾಜಿ ಪ್ರಧಾನಿ, ತಮ್ಮದೇ ಪಕ್ಷದ ಪಿ.ವಿ.ನರಸಿಂಹರಾವ್ ಅವರ ಹೆಸರು ಹೇಳಿದರು.
ಇಲ್ಲಿದೆ ನೋಡಿ ವಿಡಿಯೊ
ಬಳಿಕ ಸುದ್ದಿಗಾರರು ಮೋದಿ ಅವರ ಹೆಸರು ಎಂದಾಗ, ಸಿದ್ದರಾಮಯ್ಯ ಅವರು ಎಚ್ಚೆತ್ತುಕೊಂಡರು. ಬಳಿಕ ಬಿಜೆಪಿ, ಮೋದಿ ವಿರುದ್ಧ ಹರಿಹಾಯ್ದರು. “ಮೋದಿ ಅವರು 15 ಲಕ್ಷ ರೂ. ಹಾಕಿದರಾ? ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಿದರಾ? ಅಚ್ಚೇ ದಿನಗಳು ಬರುತ್ತವೆ ಎಂದರು, ಮಾಡಿದರಾ?” ಎಂದು ಪ್ರಶ್ನಿಸಿದರು. ಹಾಗೆಯೇ, ನಾನು ಆರ್.ಅಶೋಕ್ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಕೂಡ ಹೇಳಿದರು.
ಇದನ್ನೂ ಓದಿ: Inside Story: ಯಾರಿಗೂ ಬೇಡವಾಯಿತು ಸಿದ್ದರಾಮಯ್ಯ ಸರ್ಕಾರದ ನಂ. 2 ಸ್ಥಾನ! ಕಾರಣ ಇದು…
ಸಿದ್ದು ಬಾಯಿತಪ್ಪಿನ ಹೇಳಿಕೆಗಳು ಹೀಗಿವೆ
ಹಿಂದೊಮ್ಮೆ ಕಾಂಗ್ರೆಸ್ ಪಕ್ಷವನ್ನೇ ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಹೇಳಿದ್ದರು. ದೇಶದಲ್ಲಿ ಸಾಲ ಮನ್ನಾ ಮಾಡಿದ್ದು ನರೇಂದ್ರ ಮೋದಿ ಎಂದಿದ್ದರು. ಅಷ್ಟೇ ಅಲ್ಲ, ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಮಾತನಾಡುತ್ತ, ʻರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆʼ ಎನ್ನಲು ಹೋಗಿ, ʻನರೇಂದ್ರ ಮೋದಿ ಪಾದಯಾತ್ರೆ ಮಾಡುತ್ತಿದ್ದಾರೆʼ ಎಂದು ಹೇಳಿದ್ದರು. ಭಾರತ್ ಜೋಡೋ ಯಾತ್ರೆ ಕುರಿತು ಮಾತನಾಡುವಾಗ ಹಾಗೆ ಹೇಳಿದ್ದರು.