Site icon Vistara News

CN Ashwathnarayan: ರಾಮನಗರ ಬಿಜೆಪಿಯಲ್ಲಿ ಭಿನ್ನಮತ; ಅಶ್ವತ್ಥನಾರಾಯಣ ವಿರುದ್ಧ ಕಾರ್ಯಕರ್ತರ ಆಕ್ರೋಶ

Ramanagara BJP upset; Activists protest against Ashwathnarayan

ರಾಮನಗರ: ರಾಮನಗರ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಸಚಿವ ಅಶ್ವತ್ಥನಾರಾಯಣ (Dr CN Ashwathnarayan) ವಿರುದ್ಧ ಬಿಜೆಪಿ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಗರದಲ್ಲಿ ನಡೆದಿದೆ. ತಾಲೂಕಿನಲ್ಲಿ ಕೇವಲ ಒಬ್ಬ ವ್ಯಕ್ತಿಗೆ ಪಕ್ಷದ ಅಧಿಕಾರ ನೀಡಿದ್ದಾರೆ ಎಂದು ಆರೋಪಿಸಿ ನಗರದ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಬಿಜೆಪಿ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.

ಕಪ್ಪುಪಟ್ಟಿ ಧರಿಸಿ ಮೌನವಾಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ರಾಮನಗರದಲ್ಲಿ ಅಶ್ವತ್ಥನಾರಾಯಣ ಅವರು ಕೇವಲ ಒಬ್ಬ ವ್ಯಕ್ತಿಗೆ ಅಧಿಕಾರ ನೀಡಿದ್ದಾರೆ. ಜೆಪಿ ನಗರದ ಗೌತಮ್ ಗೌಡ ಹಾಗೂ ರಾಮನಗರಕ್ಕೂ ಸಂಬಂಧ ಇಲ್ಲ. ಆದರೆ, ಅವರನ್ನೇ ಎಂಎಲ್ಎ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ. ಆದರೆ ರಾಮನಗರದ ಬಿಜೆಪಿಯಲ್ಲಿ ಹಲವು ಜನ ಪ್ರಾಮಾಣಿಕರಿದ್ದಾರೆ. ಅಂತಹವರಿಗೆ ಪಕ್ಷದ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ | Karnataka Election 2023: ಮಂಡ್ಯ ಉಸ್ತುವಾರಿ ನನಗೆ ಬೇಡ; ಯಾರನ್ನು ಬೇಕಾದರೂ ಮಾಡಿ ಎಂದು ಸಿಎಂ ವಿರುದ್ಧ ನಾರಾಯಣಗೌಡ ಗರಂ

ಒಬ್ಬ ವ್ಯಕ್ತಿಯನ್ನು ಪಕ್ಷದಲ್ಲಿ ಬಿಂಬಿಸುವುದು ಬೇಡ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಲಿ. ನಾವು ಗೋ ಬ್ಯಾಕ್ ಅಶ್ವತ್ಥನಾರಾಯಣ ಎಂದು ಹೇಳಲ್ಲ. ಸಿಎಂ ಆಗಿ ಕಮ್ ಬ್ಯಾಕ್ ಎಂದು ಹೇಳುತ್ತೇವೆ. ಅವರು ಮುಂದಿನ ದಿನಗಳಲ್ಲಿ ಸಿಎಂ ಆಗಲಿ. ಆದರೆ, ಪಕ್ಷದಲ್ಲಿನ ನಿಷ್ಠಾವಂತರನ್ನು ಗುರುತಿಸಲಿ ಎಂದು ಸಚಿವ ಅಶ್ವತ್ಥನಾರಾಯಣ ವಿರುದ್ಧ ಆಕ್ರೋಶ ಹೊರಹಾಕಿದರು.

Exit mobile version