Site icon Vistara News

Dingaleshwar Swamiji: ದ್ವೇಷ ಭಾಷಣ; ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಎಫ್‌ಐಆರ್

Dingaleshwar Swamiji

ಧಾರವಾಡ: ವಿಭಿನ್ನ ವರ್ಗಗಳ ಮಧ್ಯೆ ವೈರತ್ವ ಮತ್ತು ದ್ವೇಷ ಭಾವನೆಯನ್ನುಂಟು ಮಾಡುವ ಹೇಳಿಕೆ ನೀಡಿದ ಆರೋಪದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಜಿಲ್ಲೆಯ ನವಲಗುಂದ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನವಲಗುಂದ ಮಾರ್ಕೆಟ್‌ನಲ್ಲಿ ನಡೆದಿದ್ದ ಸ್ವಾಭಿಮಾನಿ ಮತದಾರರ ಸಮಾವೇಶ ಚುನಾವಣೆ ಭಾಷಣದ ವೇಳೆ ಸ್ವಾಮೀಜಿ ಎಡವಟ್ಟು ಮಾಡಿದ್ದರು. ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ್ದ ಸ್ವಾಮೀಜಿ, ಭಸ್ಮ ಹೋಗಿ ಕುಂಕುಮ ಬಂತು ಹಾಗೂ ಭಂಡಾರ ಹೋಗಿ ಕುಂಕುಮ ಬಂತು. ಶರಣು ಶರಣಾರ್ಥಿ ಹೋಗಿ ಹರಿ ಓಂ ಬಂತು ಎಂದು ಭಾಷಣ ಮಾಡಿದ್ದರು. ಹೀಗಾಗಿ ವಿಭಿನ್ನ ವರ್ಗಗಳ ಮಧ್ಯೆ ವೈರತ್ವ ಮತ್ತು ದ್ವೇಷ ಭಾವನೆಯನ್ನುಂಟು ಮಾಡಿದ್ದಾರೆ ಎಂಬ ಆರೋಪದಲ್ಲಿ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ | Lok Sabha Election : ಚುನಾವಣೆ ಖರ್ಚಿಗೆ ಹಣ ಕೊಡದ್ದಕ್ಕೆ ಟಿಕೆಟ್​ ವಾಪಸ್​ ಕೊಟ್ಟ ಕಾಂಗ್ರೆಸ್​ ಅಭ್ಯರ್ಥಿ!

ಜೈ ಶ್ರೀರಾಮ್ ಘೋಷಣೆ ಕೂಗಿದ್ರೆ ಬೂಟುಗಾಲಲ್ಲಿ ಒದೆಯಿರಿ ಎಂದಿದ್ದ ಕೈ ಮುಖಂಡ ಅಮಾನತು

ರಾಯಚೂರು: ಜೈ ಶ್ರೀರಾಮ್ ಘೋಷಣೆ (Jai Shri Ram Slogan) ಕೂಗಿದವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಮುಖಂಡನನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ. ರಾಯಚೂರು ಕಾಂಗ್ರೆಸ್ ಮುಖಂಡ ಬಷಿರುದ್ದೀನ್ ಅವರನ್ನು ಪಕ್ಷದಿಂದ ಅಮಾನತು ಮಾಡಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ.

‌ಅತಿ ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡಬಾರದು ಎಂಬ ಕೆಪಿಸಿಸಿ ಸೂಚನೆಯ ನಡುವೆ ಚುನಾವಣೆ ಹೊತ್ತಿನಲ್ಲಿ ಪಕ್ಷ ಮತ್ತು ನಾಯಕರಿಗೆ ಮುಜುಗಗರವಾಗುವ ರೀತಿಯಲ್ಲಿ ಹೇಳಿಕೆ ನೀಡಿದ್ದರಿಂದ ನಿಮ್ಮನ್ನು ಕಾಂಗ್ರೆಸ್ ‌ಪಕ್ಷದಿಂದ ಅಮಾನತು ಮಾಡಲಾಗಿದೆ. ತಾವು 7 ದಿನಗಳೊಳಗಾಗಿ ಈ ಹೇಳಿಕೆಗಳ ವಿವರಣೆ ನೀಡಬೇಕು ಎಂದು ಕೈ ಮುಖಂಡ ಬಷೀರುದ್ದೀನ್‌ ಅವರಿಗೆ ಅಮಾನತು ಆದೇಶ ಪತ್ರದಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ | Prajwal Revanna Case: ಪೆನ್‌ಡ್ರೈವ್‌ ಕೇಸ್;‌ ದೇವೇಗೌಡರ ನಿವಾಸದಲ್ಲೇ ಎಚ್‌.ಡಿ.ರೇವಣ್ಣ ಬಂಧನ

ನಗರಸಭೆ ಕಮಿಷನರ್ ಗುರುಸಿದ್ದಯ್ಯ ಹಿರೇಮಠ ಅವರ ಮುಂದೆಯೇ ಕಾಂಗ್ರೆಸ್‌ ಮುಖಂಡ ಬಷಿರುದ್ದೀನ್ ಉದ್ಧಟತನದ ಹೇಳಿಕೆ ನೀಡಿದ್ದರು. ರಾಯಚೂರಲ್ಲಿ ಜೈ ಶ್ರೀರಾಮ್ ಎನ್ನುವವರನ್ನು ಪೊಲೀಸರು ಬೂಟುಗಾಲಲ್ಲೇ ಒದ್ದು‌ ಒಳಗೆ ಹಾಕಬೇಕು‌ ಎಂದು ಹೇಳಿದ್ದರು. ಹೀಗಾಗಿ ಬಷಿರುದ್ದೀನ್ ಹೇಳಿಕೆ ಎಲ್ಲೆಡೆ ವೈರಲ್ ಆಗಿತ್ತು. ಕೈ‌ ಮುಖಂಡನ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಕಾಂಗ್ರೆಸ್‌ ಮುಖಂಡನನ್ನು ಅಮಾತುಗೊಳಿಸಲಾಗಿದೆ.

Exit mobile version