Site icon Vistara News

DK Shivakumar: ನೀವೊಬ್ಬರೇ ನನ್ನ ಹೀರೋ: ಡಿಕೆಶಿಗೆ ಮಗಳು ಐಶ್ವರ್ಯಾ ಭಾವುಕ ಸಂದೇಶ

dk shivakumar daughter

ಬೆಂಗಳೂರು: ʼʼನೀವೊಬ್ಬರೇ ನನ್ನ ಹೀರೋ- ಮತ್ತು ಯಾವಾಗಲೂ ಹೀರೋ ಆಗಿಯೇ ಇರುತ್ತೀರಿʼʼ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರಿಗೆ ಅವರ ಪುತ್ರಿ ಐಶ್ವರ್ಯಾ ಹುಟ್ಟುಹಬ್ಬದ (DK Shivakumar birhtday) ಶುಭಾಶಯ ತಿಳಿಸಿದ್ದಾರೆ.

ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಡಿ.ಕೆ ಶಿವಕುಮಾರ್‌ ಅವರಿಗೆ ಪುತ್ರಿ ಐಶ್ವರ್ಯಾ ಅವರು ಭಾವನಾತ್ಮಕ ಧ್ವನಿಸಂದೇಶವೊಂದನ್ನು ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಸಂದೇಶದಲ್ಲಿ ಹೀಗೆ ಹೇಳಿಕೊಂಡಿದ್ದಾರೆ:

ʼʼಪ್ರತೀ ಹುಡುಗಿಯೂ ಒಬ್ಬ ರಾಜಕುಮಾರಿಯಾಗಲು ಬಯಸುತ್ತಾಳೆ. ಆದರೆ ನಾನು ಯಾವತ್ತೂ ಹಾಗಾಗಬೇಕೆಂದು ಪ್ರಯತ್ನಿಸಲಿಲ್ಲ. ಯಾಕೆಂದರೆ ನನ್ನನ್ನು ಪ್ರತಿ ದಿನವೂ ಹಾಗೆಯೇ ನೋಡಿಕೊಳ್ಳಲಾಗುತ್ತಿತ್ತು. ಪ್ರತಿ ಮುಂಜಾನೆಯೂ ಅವರ ಬಾಯಿಯಿಂದ ಬರುತ್ತಿದ್ದ ʼಮಗಳೇʼ ಎಂಬ ಪದ ನನ್ನನ್ನು ರಾಜಕುಮಾರಿಯಂತೆ ಮಾತ್ರವಲ್ಲದೆ, ನಾನು ಸದೃಢವಾದ ಮನುಷ್ಯ ಜೀವಿ ಎಂಬುದನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತುಪಡಿಸುವಂತಿತ್ತು. ಕೆಟ್ಟ ಜಗತ್ತಿನಿಂದ ನನ್ನನ್ನು ರಕ್ಷಿಸುವುದರಿಂದ ಹಿಡಿದು, ಗಂಡುಮಗುವಿಗಿಂತ ಏನೇನೂ ಕಡಿಮೆಯಿಲ್ಲದಂತೆ ನೋಡಿಕೊಳ್ಳುವವರೆಗೆ, ಅಪ್ಪಾ, ನೀವು ನನಗೆ ಪ್ರತಿಯೊಂದನ್ನೂ ನೀಡಿದಿರಿ. ನೀವು ನನ್ನನ್ನು ತುಂಬಾ ನಂಬಿದಿರಿ. ನಾನು ಎಂದೂ ನಿಮಗೆ ಮುಜುಗರವಾಗುವಂತೆ ನಡೆದುಕೊಳ್ಳಲಾರೆ ಎಂದು ಭರವಸೆ ನೀಡುತ್ತೇನೆ. ನೀವೊಬ್ಬರೇ ನನ್ನ ಹೀರೋ- ಮತ್ತು ಯಾವಾಗಲೂ ಹೀರೋ ಆಗಿಯೇ ಇರುತ್ತೀರಿ.ʼʼ

ಇದರೊಂದಿಗೆ ತಂದೆಯ ಜತೆಗೆ ತಾವು ಇರುವ ಫೋಟೋಗಳನ್ನು ಅವರು ಖಾತೆಯಲ್ಲಿ ಹಾಕಿಕೊಂಡಿದ್ದು, ಇದರ ಬಳಿಕ ʼಅಪ್ಪಾ, ಐ ಲವ್‌ ಯೂ ಅಪ್ಪಾʼ ಎಂಬ ಹಾಡಿನ ರೀಲ್ಸ್‌ ಅನ್ನು ಜೋಡಿಸಿದ್ದಾರೆ.

ಇದನ್ನೂ ಓದಿ: Karnataka CM: ದಿಲ್ಲಿಗೆ ಹೋಗಲ್ಲ, ನಿರ್ಧಾರ ಹೈಕಮಾಂಡ್‌ಗೆ ಎಂದ ಡಿಕೆಶಿ; ದಿಲ್ಲಿಗೆ ತೆರಳಲು ಸಿದ್ದರಾಮಯ್ಯ ರೆಡಿ

Exit mobile version