Site icon Vistara News

DK Shivakumar : ಬೆಂಗಳೂರು ಟ್ರಾಫಿಕ್‌ ಬಗ್ಗೆ ಗಡ್ಕರಿ ಜತೆ ಡಿಕೆಶಿ ಚರ್ಚೆ; ಪಾಸಿಟಿವ್‌ ರೆಸ್ಪಾನ್ಸ್‌ ಬಂದಿದೆ ಎಂದ ಡಿಸಿಎಂ

DCM DK Shivakumar Meets Nitin Gadkari

ಬೆಂಗಳೂರು: ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ (Bangalore traffic Problem) ಬಗ್ಗೆ ಕೆಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರಿಗೆ ಹೇಳಿದ್ದೇನೆ. ಅವರು ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕು ಎಂಬ ನಿಟ್ಟಿನಲ್ಲಿ ಪಾಸಿಟಿವ್ ರೆಸ್ಪಾನ್ಸ್ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ. ಇಲ್ಲಿ ಅಧಿಕಾರಿಗಳ ಜತೆ ಒಂದು ಸುತ್ತಿನ ಸಭೆ ಬಳಿಕ ಕೇಂದ್ರ ಸರ್ಕಾರದ ಜತೆ ಮಾತನಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DCM DK Shivakumar) ಹೇಳಿದರು.

ನವ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ಕೆಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ನಾನು ಬುಧವಾರ ಭೇಟಿ ಮಾಡಿದ್ದೇನೆ. ಬೆಂಗಳೂರು ನಗರ ಟ್ರಾಫಿಕ್ ವಿಚಾರದ ಬಗ್ಗೆ ಬಹಳವಾಗಿಯೇ ಚರ್ಚೆ ನಡೆಸಿದ್ದೇವೆ. ನಗರದ 4 ಭಾಗದಿಂದ ಟ್ರಾಫಿಕ್ ಆಗುತ್ತಿದೆ ಎಂಬ ಬಗ್ಗೆ ವಿವರಣೆ ನೀಡಿದ್ದೇನೆ. ಅವರು ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಸುರಂಗ ಅಥವಾ ಫ್ಲೈ ಓವರ್ ಮೂಲಕ ಈ ಸಮಸ್ಯೆ ಬಗೆಹರಿಸುವ ಯೋಚನೆ ನಮಗೆ ಇದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ಹೇಳಿದರು.

DCM DK Shivakumar Meets Nitin Gadkari

ಈಗ ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ನಿವಾರಣೆ ಸಂಬಂಧ ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನವನ್ನು ಕೈಗೊಳ್ಳಲಾಗುವುದು. ಇದಾದ ಬಳಿಕ ಕೇಂದ್ರ ಸರ್ಕಾರದ ಬಳಿ ಮಾತನಾಡುತ್ತೇವೆ. ‌ನವ ದೆಹಲಿ ಹಾಗೂ ಮುಂಬೈನಲ್ಲೂ ಟ್ರಾಫಿಕ್ ಸಮಸ್ಯೆ ಇದೆ. ಆದರೆ, ಬೆಂಗಳೂರು ಟ್ರಾಫಿಕ್ ಬಗ್ಗೆ ಮಾತ್ರ ಜನ ಮಾತನಾಡುತ್ತಾರೆ. ಏಕೆಂದರೆ ಬೆಂಗಳೂರು ಇಂಟರ್ನ್ಯಾಷನಲ್ ಸಿಟಿ ಅಂತ ಆಗಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಈಗಾಗಲೇ ಸಾಕಷ್ಟು ಮಂದಿ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಪ್ರೆಸೆಂಟೇಷನ್ ಕೊಟ್ಟಿದ್ದಾರೆ. ಆಗಸ್ಟ್ 8ಕ್ಕೆ ಕೊನೆಯ ದಿನ ಆಗಿದೆ. ಇದರ ಬಗ್ಗೆ ನಾವು ಹೆಚ್ಚಿನ ಗಮನವನ್ನು ಹರಿಸುತ್ತೇವೆ. ಇದು ತೀವ್ರ ಥರದ ಸಮಸ್ಯೆ ಆಗಿರುವುದರಿಂದ ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಉ.ಕ. ಭಾಗಕ್ಕೆ ನೀರು ಬಿಡುಗಡೆ

ಉತ್ತರ ಕರ್ನಾಟಕದಲ್ಲಿ ಮಳೆ ಆಗುತ್ತಿದೆ. ತುಂಗಾಭದ್ರ ಭಾಗದಲ್ಲಿ ನೀರಿಗಾಗಿ ನಮಗೆ ಬಹಳ ಡಿಮ್ಯಾಂಡ್ ಇದೆ. ಆ ಕಡೆಯ ಎಲ್ಲ ಜಿಲ್ಲಾ ಮಂತ್ರಿಗಳು ನನ್ನ ಬಳಿ ಮಾತನಾಡಿದ್ದಾರೆ. ಹಾಗಾಗಿ, ಸಚಿವ ಶಿವರಾಜ್ ತಂಗಡಗಿಯನ್ನು ಸಮಿತಿಗೆ ನೇಮಕ ಮಾಡಿದ್ದೇವೆ. ನೀರು ಬಿಡಬೇಕು ಎಂದು ರೈತರು ಬಹಳ ಬೇಡಿಕೆ ಇಟ್ಟಿದ್ದಾರೆ. 5175 ಕ್ಯೂಸೆಕ್ ನೀರು ಬಿಡುಗಡೆ ಮಾಡೋಕೆ ಅನುಮತಿ ನೀಡಿದ್ದೇನೆ. ಆಂಧ್ರಪ್ರದೇಶಕ್ಕೂ ಸಹ ಸ್ವಲ್ಪ ನೀರು ಬಿಡಬೇಕು. ಅದಕ್ಕೆ ಒಟ್ಟಿಗೆ ಎಲ್ಲವೂ ಸೇರಿ ನೀರು ಬಿಡುಗಡೆ ಮಾಡಲು ತೀರ್ಮಾನ ಮಾಡಿದ್ದೇವೆ. ಹೇಗೆ ಮತ್ತು ಯಾವಾಗ ನೀರು ಬಿಡಬೇಕು ಎಂದೆಲ್ಲ ಸಮಿತಿ ತೀರ್ಮಾನ ಮಾಡುತ್ತದೆ. ರೈತರ ಬೆಳೆ ಹಾಳಾಗಬಾರದು. ಅವರಿಗೆ ಅನುಕೂಲ ಆಗಬೇಕು. ಈ ನಿಟ್ಟಿನಲ್ಲಿ ಸಮಿತಿಯವರು ಚರ್ಚೆ ಮಾಡಿ ನೀರು ಬಿಡುವ ತೀರ್ಮಾನ ಮಾಡುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ: PM Narendra Modi : ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ; ಮೈಸೂರು ಅಂಬಾರಿ ಉಡುಗೊರೆ

ನೀರಾವರಿ ಕೇಸ್‌ಗಳ ಬಗೆಹರಿಸಲು ತೀರ್ಮಾನ

ಇಂದು ನೀರಾವರಿ ವಿಚಾರವಾಗಿ ಸಭೆ ಮಾಡಿದ್ದೇನೆ. ಸುಮಾರು 350 ಕೇಸ್ ಇದೆ ಅಂತ ಹೇಳಿದ್ದಾರೆ. ಮೇಕೆದಾಟು, ಮಹದಾಯಿ, ಕಳಸಾ ಬಂಡೂರಿ, ಕೃಷ್ಣ ನದಿಗಳ ವಿಚಾರವಾಗಿ ಕಾನೂನು ಸಲಹೆಗಳು ಬಂದಿವೆ. ಈ ಎಲ್ಲ ಕೇಸ್‌ಗಳನ್ನು ಆದಷ್ಟು ಬೇಗ ಮುಗಿಸಬೇಕು. ಇಲ್ಲಿವರೆಗೂ ಸಹ ಇದಕ್ಕೆ ಎಷ್ಟು ಖರ್ಚು ಆಗಿದೆ? ಏನೆಲ್ಲ ಆಗಿದೆ ಎಂಬ ಬಗ್ಗೆ ಮಾಹಿತಿ ಕೇಳಿದ್ದೇನೆ. ಆದಷ್ಟು ಬೇಗ ಈ ಪ್ರಕಾರಣಗಳು ಬಗೆಹರಿಯಲಿ ಎಂದು ಈ ಸಭೆ ಮಾಡಲಾಗಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

Exit mobile version