Site icon Vistara News

‌Political Movies: ಕಾಶ್ಮೀರ್‌ ಫೈಲ್ಸ್ ಮಾದರಿಯಲ್ಲಿ ಕೋವಿಡ್‌ ಫೈಲ್ಸ್ ಚಿತ್ರ ನಿರ್ಮಾಣಕ್ಕೆ ಮುಂದಾದರಾ ಡಿ.ಕೆ. ಶಿವಕುಮಾರ್?

DK Shivakumar plans to make covid files ‌POLITICAL MOVIES on the lines of Kashmir Files

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಚಟುವಟಿಕೆ ಬಿರುಸುಗೊಂಡಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ನಾನಾ ಕಸರತ್ತುಗಳಲ್ಲಿ ತೊಡಗಿಕೊಂಡಿವೆ. ಆರೋಪ-ಪ್ರತ್ಯಾರೋಪಗಳೂ ಹೆಚ್ಚಾಗುತ್ತಿವೆ. ಇದೇ ಸಂದರ್ಭದಲ್ಲಿ ಸಿನಿಮಾ ಕ್ಷೇತ್ರದ (‌Political Movies) ಮೂಲಕ ಪಕ್ಷಗಳನ್ನು ಹಣಿಯಲು ರಾಜಕೀಯ ಪಕ್ಷಗಳು ಮುಂದಾಗುತ್ತಿವೆ ಎಂಬ ಮಾಹಿತಿ ಲಭ್ಯವಾಗಿವೆ. ಈ ನಿಟ್ಟಿನಲ್ಲಿ ಈಗ ಕಾಂಗ್ರೆಸ್‌ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ. ಚುನಾವಣಾ ಸಮಯದಲ್ಲಿ “ಕೋವಿಡ್ ಫೈಲ್ಸ್‌” (Covid Files) ಎಂಬ ಕನ್ನಡ ಚಲನಚಿತ್ರ ತೆರೆಗೆ ಬರಲಿದೆಯೇ ಎಂಬ ಚರ್ಚೆ ಈಗ ಶುರುವಾಗಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಮಾಸ್ಟರ್‌ಪ್ಲ್ಯಾನ್‌ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಈಗಾಗಲೇ ಬಿಜೆಪಿ ಮೇಲೆ ಸಾಕಷ್ಟು ರೀತಿಯಲ್ಲಿ ಆರೋಪಗಳನ್ನು ಮಾಡುತ್ತಾ ಬಂದಿರುವ ಕಾಂಗ್ರೆಸ್‌ ನಾಯಕರು. ಹೊಸ ಹೊಸ ರೀತಿಯಲ್ಲಿ ಮುಗಿಬೀಳುತ್ತಿವೆ. ಒಂದು ವಿಷಯಕ್ಕೆ ಕೌಂಟರ್‌ ಕೊಡುತ್ತಿದ್ದಂತೆ ಮತ್ತೊಂದು ವಿಷಯವನ್ನು ಕೈಗೆತ್ತಿಕೊಳ್ಳುತ್ತಿದೆ. ಈಗ ಚುನಾವಣೆಗೆ ಡಿ.ಕೆ. ಶಿವಕುಮಾರ್‌ ಅವರು ಮತ್ತೊಂದು ಅಸ್ತ್ರ ಬಳಸಲು ಮುಂದಾಗಿದ್ದಾರೆ ಎಂದೇ ಹೇಳಲಾಗುತ್ತಿದೆ. ಇದಕ್ಕಾಗಿ ಕೋವಿಡ್‌ ಫೈಲ್ಸ್‌ ಚಿತ್ರ ನಿರ್ಮಾಣಕ್ಕೆ ಸದ್ದಿಲ್ಲದೆ ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Shivarajkumar: ಮತ್ತೆ ಬಂದ ‌ʻಭೈರತಿ ರಣಗಲ್ʼ: ನರ್ತನ್‌ ಆ್ಯಕ್ಷನ್‌ ಕಟ್‌!

ಏನಿದು ಕೋವಿಡ್ ಫೈಲ್ಸ್‌?

ಕೋವಿಡ್ ಫೈಲ್ಸ್ ಚಿತ್ರದ ಹೆಸರನ್ನು ಡಿ.ಕೆ. ಶಿವಕುಮಾರ್‌ ಅವರ ಆಪ್ತರೊಬ್ಬರು ನೋಂದಾಯಿಸಿದ್ದಾರೆ. ಒಂದು ವರ್ಷದ ಹಿಂದೆಯೇ ಈ ಹೆಸರನ್ನು ನೋಂದಣಿ ಮಾಡಿದ್ದಾರೆ. ಈ ಸಂಬಂಧ ಖ್ಯಾತ ನಿರ್ದೇಶಕ ರಾಜಗೋಪಾಲ್ ವರ್ಮಾ ಅವರನ್ನೂ ಡಿಕೆಶಿ ಟೀಮ್ ಸಂಪರ್ಕ ಮಾಡಿತ್ತು ಎಂದು ತಿಳಿದುಬಂದಿದೆ.

ಈ ಸಿನಿಮಾ ನಿರ್ಮಾಣಕ್ಕೆ 25 ಕೋಟಿ ರೂಪಾಯಿ ಬೇಕು ಎಂದು ವರ್ಮಾ ಲೆಕ್ಕ ಕೊಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೇಡ ಎಂದು ಡಿಕೆಶಿ ಹಿಂದೆ ಸರಿದಿದ್ದರು ಎನ್ನಲಾಗಿದೆ. ಈಗ ಮತ್ತೆ ಕೋವಿಡ್‌ ಫೈಲ್ಸ್ ಸಿನಿಮಾ ನಿರ್ಮಾಣ ಮಾಡಲು ಡಿಕೆಶಿ ಟೀಮ್ ಸಿದ್ಧತೆ ಮಾಡಿಕೊಂಡಿದ್ದು, ಕೋವಿಡ್ ಸಮಯದಲ್ಲಿ ಆದ ಸಾವುನೋವುಗಳ ಬಗ್ಗೆ ಜನರಿಗೆ ತಿಳಿಸಲು ಮುಂದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Maha Shivaratri 2023: ಪುರಾಣ ಪ್ರಸಿದ್ಧ ಗೋಕರ್ಣದಲ್ಲಿ ಕಣ್ಣು ಹಾಯಿಸಿದಷ್ಟು ಜನವೋ ಜನ; ಮಹಾಬಲೇಶ್ವರನ ಕಣ್ತುಂಬಿಕೊಂಡ ಭಕ್ತರು

ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವು ಸೇರಿದಂತೆ ಹಲವು ಮನಕಲುಕುವ ದೃಶ್ಯಗಳನ್ನು ಈ ಸಿನಿಮಾದಲ್ಲಿ ಸೆರೆ ಹಿಡಿಯುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎನ್ನಲಾಗಿದೆ. ಜತೆಗೆ ಕೋವಿಡ್ ಸಮಯದಲ್ಲಿ ಸರ್ಕಾರ ಮಾಡಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆಯೂ ಇದರಲ್ಲಿ ಬಿಂಬಿಸಲು ಮುಂದಾಗಲಾಗಿದೆ ಎಂದು ತಿಳಿದುಬಂದಿದೆ.

Exit mobile version