Site icon Vistara News

Pen Drive Issue:‌ ಕಸ ಗುಡಿಸೋಣ ನಡೀರಿ: HDK ಪೆನ್‌ಡ್ರೈವ್‌ ಪ್ರಶ್ನೆಗೆ ಶಿವಕುಮಾರ್‌ ಉತ್ತರ

DK Shivakumar inspecting swm plant

ಬೆಂಗಳೂರು: ರಾಜ್ಯದಲ್ಲಿ ಈ ಹಿಂದೆ ಸಿಡಿ ಪ್ರಕರಣ, ವಿವಾದಗಳು ನಡೆಯುತ್ತಿದ್ದವು. ಈ ಬಾರಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪೆನ್‌ಡ್ರೈವ್‌ (Pen Drive) ಮೂಲಕ ಆರೋಪ ಮಾಡಿದ್ದಾರೆ. ಆದರೆ ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ಡಿಸಿಎಂ ಡಿ.ಕೆ. ಶಿವಕುಮಾರ್‌ ನಿರಾಕರಿಸಿದ್ದಾರೆ.

ನಗರದ ವಿವಿಧೆಡೆ ಘನತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿದರು. ಮೊದಲಿಗೆ ಸೀಗೇಹಳ್ಳಿ ಘನತ್ಯಾಜ್ಯ ಸಂಸ್ಕರಣಾ ಘಟಕ ಪರಿಶೀಲನೆ ನಡೆಸಿದರು. ಸೀಗೇಹಳ್ಳಿ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 120 ಮೆಟ್ರಿಕ್ ಟನ್ ಹಸಿ ತ್ಯಾಜ್ಯ ಸಮಾರ್ಥ್ಯವಿದ್ದು, ಸದ್ಯ ಸಂಸ್ಕರಣಾ ಘಕಟವು ಚಾಲ್ತಿಯಲ್ಲಿ‌ ಇರುವುದಿಲ್ಲ. ಅದನ್ನು ಕೂಡಲೆ ಪ್ರಾರಂಭಿಸಲು ಸೂಚನೆ ನೀಡಿದರು.

ನಂತರ ಕನ್ನಹಳ್ಳಿ ಘನತ್ಯಾಜ್ಯ ಸಂಸ್ಕರಣಾ ಘಟಕ ಪರಿಶೀಲನೆ ನಡೆಸಿದರು. ಕನ್ನಹಳ್ಳಿ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 350 ಮೆಟ್ರಿಕ್ ಟನ್ ಹಸಿ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯವಿದ್ದು, ಪ್ರತಿನಿತ್ಯ 350 ಮೆಟ್ರಿಕ್ ಟನ್ ಸಂಸ್ಕರಣೆ ಮಾಡಲಾಗುತ್ತಿದೆ. ಪ್ರತಿನಿತ್ಯ ನಿತ್ಯ ಎಷ್ಟು ಕಾಂಪ್ಯಾಕ್ಟರ್ ಬರುತ್ತದೆ, ಅದಕ್ಕೆ ಅಳವಡಿಸಿರುವ ಜಿ.ಪಿ.ಎಸ್ ಅನ್ನು ಪರಿಶೀಲಿಸಿದರು.

ದೊಡ್ಡಬಿದರಕಲ್ಲು ಘನತ್ಯಾಜ್ಯ ಸಂಸ್ಕರಣಾ ಘಟಕ ಪರಿಶೀಲನೆ ನಡೆಸಿ, ದೊಡ್ಡಬಿದರಕಲ್ಲು ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 150 ಮೆಟ್ರಿಕ್ ಟನ್ ಹಸಿ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯವಿದ್ದು, ಪ್ರತಿನಿತ್ಯ 110 ಮೆಟ್ರಿಕ್ ಟನ್ ಸಂಸ್ಕರಣೆ ಮಾಡಲಾಗುತ್ತಿದೆ. ಅದನ್ನು‌ ಪರಿಶೀಲನೆ ನಡೆಸಿದರು. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಘನತ್ಯಾಜ್ಯ ಸಂಗ್ರಹ ಹೆಚ್ಚಳವಾಗುತ್ತಿದ್ದು, ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಕುರಿತು ಗಂಭೀರ ಚಿಂತನೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್, ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರಾದ ಡಾ. ಹರಿಶ್ ಕುಮಾರ್, ವಲಯ ಜಂಟಿ ಆಯುಕ್ತರಾದ ಜಗದೀಶ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಸೀಗೆಹಳ್ಳಿ ಮತ್ತು ಕನ್ನಳ್ಳಿ ಎರಡು‌ ಕಸ ವಿಲೇವಾರಿ ಘಟಕಗಳ ವೇಬ್ರೀಜ್ ಪರಿಶೀಲನೆ ನಡೆಸಿದರು. ಕಸದ ತೂಕದಲ್ಲಿ ವ್ಯತ್ಯಾಸ ಆಗುತ್ತಿದೆ ಎಂಬ ಆರೋಪವಿರುವುದರಿಂದ ಎರಡು ಘಟಕಗಳ ವೇ ಬ್ರೀಜ್ ಪರಿಶೀಲನೆ ಮಾಡಿದರು. ಮಾಗಡಿ ರಸ್ತೆಯ ಖಾಲಿ ಜಾಗದಲ್ಲಿ ರಸ್ತೆ ಬದಿ ಕಸ ನೋಡಿ ಕಾರು ನಿಲ್ಲಿಸಿದ ಡಿ ಕೆ ಶಿವಕುಮಾರ್, ಈ ರೀತಿ ರಸ್ತೆ ಪಕ್ಕದಲ್ಲಿ ಕಸ ಆಹೇಕಿದರೆ ಹೇಗೆ? ಕೂಡಲೆ ಇದನ್ನು ಸ್ವಚ್ಛಗೊಳಿಸಿ ಹಾಗೂ ಮತ್ತೆ ಕಸ ಹಾಕದಂತೆ ಕ್ರಮವಹಿಸಿ ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್‌ ಅವರಿಗೆ ಸೂಚನೆ ನೀಡಿದರು.

ಇಂದು ಯಾವುದೇ ಅಧಿಕಾರಿಗಳಿಗೆ ತಿಳಸದೇ ತ್ಯಾಜ್ಯ ಸಂಸ್ಕರಣ ಘಟಕಗಳಿಗೆ ಭೇಟಿ ನೀಡಿದ್ದೇನೆ. ತ್ಯಾಜ್ಯ ಸಂಸ್ಕರಣ ಘಟಕಗಳಲ್ಲಿ ಅಧಿಕಾರಿಗಳು ಯಾರೂ ತಪಾಸಣೆ ಮಾಡುತ್ತಿಲ್ಲ ಬೆಂಗಳೂರು ಸ್ವಚ್ಛಗೊಳಿಸಬೇಕಾಗಿದೆ. ಫುಟ್ ಪಾತ್‌ಗಳಲ್ಲಿ ಡಂಪ್ ಮಾಡುತ್ತಿದ್ದಾರೆ, ಅದು ಆಗದಂತೆ ತಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ಇದಕ್ಕೆ ಪರಿಹಾರ ಏನು ಎಂದು ಪ್ರಶ್ನೆ ಮಾಡಿದ್ದೇವೆ. ಇದಕ್ಕೆ ಯಾರು ಜವಾಬ್ದಾರರು ಎಂದು ಕೂಡ ಕೇಳಿದ್ದೇನೆ. ಕಸ ಡಂಪ್ ಮಾಡುವ ಟೆಂಡರ್ ತೆಗೆದುಕೊಂಡಿರುವವರು ಎಲ್ಲೆಂದರಲ್ಲಿ ಡಂಪ್ ಮಾಡ್ತಿದ್ದಾರೆ. ಲಾರಿಗಳು, ಟ್ರಾಕ್ಟರ್‌ಗಳು ಕಸ ತಂದು ಸುರಿಯುತ್ತಿದ್ದಾರೆ. ಲಾರಿ ಚಾಲಕರು ರೋಡ್‌‌ಗೆ,ಫುಟ್‌ಪಾತ್‌ಗೆ ಕಸ ಹಾಕಿದರೆ ಪೋಲಿಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: Indira Canteen: ಡಿಸಿಎಂ ಡಿಕೆಶಿ ಕರೆ ಮಾಡಿದ ನಂಬರ್‌ ಮಾನ್ಯವಿಲ್ಲ!: ಇಂದಿರಾ ಕ್ಯಾಂಟೀನ್‌ನಲ್ಲಿ ಹೇಳೋರಿಲ್ಲ ಕೇಳೋರಿಲ್ಲ

ಎಚ್‌.ಡಿ. ಕುಮಾರಸ್ವಾಮಿಯವರು ಪೆನ್‌ಡ್ರೈವ್‌ ಹಿಡಿದು ಆರೋಪ ಮಾಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ಒಎನ್‌ಡ್ರೈವ್‌ನಾದರೂ ಮಾಡಿಕೊಳ್ಳಲಿ, ಏನು ಬೇಕಾದರೂ ಮಾಡಿಕೊಳ್ಳಲಿ. ಮೊದಲು ಕಸದ್ದು ನೋಡೊಣ. ಕಸ ಗುಡಿಸೋಣ ನಡಿರಿ ಎಂದು ತಿಳಿಸಿ ಮುಂದೆ ಹೋದರು.

ಬಜೆಟ್‌ನಲ್ಲಿ ಸರಿಯಾದ ಅನುದಾನ ಬೆಂಗಳೂರಿಗೆ ಸಿಗದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಜೆಟ್‌ನಲ್ಲಿ ಅವರು ಎಷ್ಟೆ ಅನುದಾನ ನೀಡಲಿ, ನಾವು ರೆವಿನ್ಯೂ ಜನರೇಟ್ ಮಾಡುತ್ತೇವೆ. ಟ್ಯಾಕ್ಸ್ ಕದಿಯುತ್ತಿರುವವರಿಗೆ ಕಡಿವಾಣ ಹಾಕುತ್ತೇವೆ. ಬೆಂಗಳೂರು ಅಭಿವೃದ್ಧಿ ಮಾಡುತ್ತೇವೆ ಎಂದರು.

Exit mobile version