ಚಾಮರಾಜನಗರ: ಹಿಂದಿ ಒಂದು ರಾಷ್ಟ್ರೀಯ ಭಾಷೆ. ನೋಡಿ ನಮ್ಮ ನೋಟಿನಲ್ಲೂ ಇದೆ. ರಾಷ್ಟ್ರೀಯ ಭಾಷೆಗೆ(Hindi Diwas) ಏನು ಗೌರವ ಕೊಡಬೇಕೋ ಅದಕ್ಕೆ ನಮಗೆ ತಕರಾರಿಲ್ಲ. ಆದರೆ, ಕನ್ನಡ ನಾಡಿನಲ್ಲಿ ಕನ್ನಡ ಉಳಿಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹಿಂದಿ ದಿವಸ್ ಆಚರಣೆ ಬಗ್ಗೆ ನಗರದಲ್ಲಿ ಬುಧವಾರ ಪ್ರತಿಕ್ರಿಯಿಸಿ, ʻʻಸರ್ಕಾರ ಪ್ರತಿಯೊಂದರಲ್ಲೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಹಿಂದಿ ದಿವಸ್ ಆಚರಣೆ ಬಗ್ಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ಮಾಡಬೇಕಿತ್ತು. ಕನ್ನಡವನ್ನು ಯಾರೂ ಅಳಿಸಬಾರದು, ಇಂಗ್ಲಿಷ್ ಕೂಡ ಮುಖ್ಯವಿದೆ. ಹಿಂದಿ ಆಸೆ ಪಡುವವರಿಗೆ ನಮ್ಮ ತಕರಾರಿಲ್ಲ. ಆದರೆ, ನಮ್ಮ ತಾಯಿ ಭಾಷೆ ಕನ್ನಡಕ್ಕೆ ಗೌರವ ಕೊಡಬೇಕುʼʼ ಎಂದು ತಿಳಿಸಿದ್ದಾರೆ.
ʻʻರಾಜ್ಯದ ಶಿಕ್ಷಣದಲ್ಲಿ ಮೂರು ಭಾಷೆ ಕಲಿಯಲು ಅವಕಾಶವಿದೆ. ಮೂರರಲ್ಲಿ ಯಾವ ಭಾಷೆಯನ್ನಾದರೂ ಕಲಿಯಲಿ. ಮೂರನೇ ಭಾಷೆಯಾಗಿ ಹಿಂದಿ ಅಥವಾ ಬೇರೆ ಭಾಷೆಯನ್ನಾದರೂ ಕಲಿಯಲಿ, ನಮ್ಮ ವಿರೋಧವಿಲ್ಲʼʼ ಎಂದು ಹೇಳಿದರು.
ಇದನ್ನೂ ಓದಿ | U T Khader : ‘ಹಿಂದಿಯನ್ನು ಯಾಕೆ ವಿರೋಧ ಮಾಡ್ತಾರೋ ಗೊತ್ತಿಲ್ಲ’