Site icon Vistara News

DK Shivakumar : ಇನ್ನೊಂದು ವರ್ಷಕ್ಕೆ ಸಿಎಂ ಬದಲಾವಣೆ? ಡಿ.ಕೆ. ಶಿವಕುಮಾರ್ ಸಿಎಂ?; ಕೇದಾರನಾಥ ಶ್ರೀ ಮಾತಿನ ಅರ್ಥವೇನು?

DK Shivakumar and siddaramaiah and DK Shivakumar to be next CM in one year What say Kedarnath Shri

ಬೆಂಗಳೂರು: ಹೃಷಿಕೇಶದಲ್ಲಿ ಕರ್ನಾಟಕ ಭವನ ಕಟ್ಟಿದರೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಲಕ್ ಬದಲಾಗುತ್ತದೆಯೇ? ಮುಂದಿನ ಸಿಎಂ ಆಗಲಿದ್ದಾರೆಯೇ? ಇಂಥದ್ದೊಂದು ಚರ್ಚೆ ಈಗ ಹುಟ್ಟಿಕೊಂಡಿದೆ. ಕಾರಣ, ಕೇದಾರನಾಥ ಮಠದ 108 ರಾವಲ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಶ್ರೀಗಳ ಮಾತು ಇಂಥದ್ದೊಂದು ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೆ, ಇನ್ನು ಒಂದೇ ವರ್ಷಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬದಲಾವಣೆಯಾಗಲಿದ್ದಾರಾ? ಎಂಬ ಪ್ರಶ್ನೆಯೂ ಎದುರಾಗಿದೆ.

ಶನಿವಾರ ರಾಜರಾಜೇಶ್ವರಿ ನಗರದಲ್ಲಿ ಕೇದಾರನಾಥ ಶ್ರೀಗಳನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾಗಿದ್ದರು. ಈ ವೇಳೆ ಅಭಯ ನೀಡಿರುವ ಶ್ರೀಗಳು, ಹೃಷಿಕೇಶದಲ್ಲಿ ಕರ್ನಾಟಕ ಭವನ ಕಟ್ಟಬೇಕು. ಈಗ ಅರ್ಧ ಆಗಿದೆ, ಪೂರ್ಣವಾಗಿಲ್ಲ. ಒಂದು ವರ್ಷ ತಡೆಯಿರಿ‌ ಕೇದಾರನಾಥನೇ ಪೂರ್ತಿ ಮಾಡುತ್ತಾನೆ ಎಂದು ಶ್ರೀಗಳು ಹೇಳಿದ್ದಾರೆ.

ಕೇದಾರನಾಥ ಶ್ರೀಗಳನ್ನು ಭೇಟಿ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್

ನಿಮ್ಮ ಕೆಲಸವನ್ನು ನೀವು ಮಾಡಿ. ಕೇದಾರನಾಥ ಆತನ ಕೆಲಸ ಮಾಡುತ್ತಾನೆ. ಹೃಷಿಕೇಶ್ – ಹರಿದ್ವಾರ ಮಾರ್ಗದಲ್ಲಿ ಕರ್ನಾಟಕದ ಯಾತ್ರಿ ನಿವಾಸ ಆಗಬೇಕು. ರಸ್ತೆಯಿಂದ 500 ಅಡಿ ಅಂತರದಲ್ಲಿ ಕರ್ನಾಟಕದ ಯಾತ್ರಿ ನಿವಾಸ ನಿರ್ಮಾಣ ಮಾಡಬೇಕು. 2 ಎಕರೆಯಲ್ಲಿ 100 ಕೊಠಡಿಗಳ ಕಟ್ಟಡ ನಿರ್ಮಾಣ ಮಾಡಬೇಕು. ಕಟ್ಟಡ ನಿರ್ಮಾಣ ಮಾಡಿ ಒಂದು ವರ್ಷ ಆಗುವುದರಲ್ಲಿ ನಿಮಗೆ ನಿಶ್ಚಿತ ಆಗಲಿದೆ ಎಂದು ಕೇದಾರನಾಥ ಶ್ರೀಗಳು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಸ್ಥಾನವು ನಿಮಗೆ ಲಭಿಸುತ್ತದೆ. ಇದನ್ನು ಯಾವ ದೇವರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: HD Kumaraswamy : ದೇಶದಲ್ಲಿ GST ಇದ್ದಂತೆ, ರಾಜ್ಯದಲ್ಲೀಗ YST ಟ್ಯಾಕ್ಸ್: ಎಚ್‌.ಡಿ. ಕುಮಾರಸ್ವಾಮಿ

ಕೇದಾರನಾಥ ಶ್ರೀಗಳ ಪರೋಕ್ಷ ಸಂದೇಶ

ಮುಂದಿನ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಿಎಂ ಆಗಿದ್ದರೆ ಯಾತ್ರಿ ನಿವಾಸ ಆಗಲಿದೆ ಎಂದು ಭಾವಿಸಿದರೇ ಶ್ರೀಗಳು ಎಂದು ಸಹ ಹೇಳಲಾಗುತ್ತಿದೆ. ಆದರೆ, ಹೃಷಿಕೇಶದಲ್ಲಿ ಕರ್ನಾಟಕ ಭವನ ಕಟ್ಟಿದರೆ ಸಿಎಂ ಆಗುವ ಯೋಗ ಬರಲಿದೆ ಎಂಬ ಪರೋಕ್ಷ ಸಂದೇಶವನ್ನು ಕೇದಾರನಾಥ ಶ್ರೀಗಳು ನೀಡಿದ್ದಾರೆನ್ನಲಾಗಿದೆ.

Exit mobile version