Site icon Vistara News

Modi in Bangalore: ಪ್ರಧಾನಿ ಮೋದಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಡಿಕೆಶಿ

PM Narendra Modi

ಬೆಂಗಳೂರು: ಕಾರ್ಯಕ್ರಮವೊಂದರ ನಿಮಿತ್ತ ನಗರಕ್ಕೆ ಶುಕ್ರವಾರ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ಬೆಂಗಳೂರು ಹೊರವಲಯದ ಬಿ. ಮಾರೇನಹಳ್ಳಿಯಲ್ಲಿಯಲ್ಲಿ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ & ಟೆಕ್ನಾಲಜಿ ಸೆಂಟ‌ರ್‌ನ ಉದ್ಘಾಟನೆ ಹಾಗೂ ಬೋಯಿಂಗ್ ಸುಕನ್ಯಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಗರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಸ್ವಾಗತಿಸಿದರು.

BIETC Campus Inauguration

ಇದನ್ನೂ ಓದಿ | ಮೋದಿಗೆ ಕೃಷ್ಣನ ವರ್ಣಚಿತ್ರ ಕೊಟ್ಟ ಜಸ್ನಾ ಸಲೀಂ; ಇವರ ಮಗನಿಗೆ ಮದ್ರಸಾದಲ್ಲಿ ನೋ ಎಂಟ್ರಿ!

ಈ ವೇಳೆ ಸಚಿವರಾದ ಕೆ.ಜೆ. ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ರಜನೀಶ್ ಗೋಯಲ್, ಡಿಜಿ-ಐಜಿಪಿ ಅಲೋಕ್ ಮೋಹನ್, ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ಸಂಸದ ಪಿ.ಸಿ. ಮೋಹನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮತ್ತಿತರರು ಇದ್ದರು.

BIETC Campus Inauguration

ಮೋದಿ ಉದ್ಘಾಟಿಸಿದ ಬೋಯಿಂಗ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕೇಂದ್ರದಲ್ಲಿ ಏನಿದೆ?

BIETC Campus Inauguration

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬೆಂಗಳೂರಿನ ದೇವನಹಳ್ಳಿ ಸಮೀಪ ಬೋಯಿಂಗ್‌ ಇಂಡಿಯಾ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ಸೆಂಟರ್‌ (BIETC) ಕ್ಯಾಂಪಸನ್ನು (BIETC Campus) ಶುಕ್ರವಾರ ಲೋಕಾರ್ಪಣೆ ಮಾಡಿದರು. ಇದು ಸುಮಾರು 1600 ಕೋಟಿ ರೂಪಾಯಿ ವೆಚ್ಚದಲ್ಲಿ 43 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕ್ಯಾಂಪಸ್‌ ಆಗಿದೆ. ಅಮೆರಿಕವನ್ನು ಹೊರತುಪಡಿಸಿ ಬೇರೆ ದೇಶದಲ್ಲಿ ನಿರ್ಮಾಣವಾದ ಅತಿ ದೊಡ್ಡ ಕ್ಯಾಂಪಸ್‌ ಇದು.

ಪ್ರಧಾನಿ ಮೋದಿ ಅವರು ಇದೇ ಕಾರ್ಯಕ್ರಮದಲ್ಲಿ ಬೋಯಿಂಗ್‌ ಸುಕನ್ಯಾ (Boeing sukanya programme) ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದು ಹೆಚ್ಚು ಹೆಚ್ಚು ಹೆಣ್ಮಕ್ಕಳು ರಾಷ್ಟ್ರದಲ್ಲಿ ಬೆಳೆಯುತ್ತಿರುವ ವಿಮಾನಯಾನ ಕ್ಷೇತ್ರಕ್ಕೆ ಪ್ರವೇಶಿಸಲು ಉತ್ತೇಜನ ನೀಡುವ ಕಾರ್ಯಕ್ರಮವಾಗಿದೆ.

ಇದನ್ನೂ ಓದಿ | Ayodhya Ram Mandir: ಕೇವಲ ಎಳನೀರು ಸೇವನೆ, ಬರೀ ನೆಲದಲ್ಲಿ ನಿದ್ದೆ; ಕಠಿಣ ವ್ರತ ಕೈಗೊಂಡ ಮೋದಿ ದಿನಚರಿ ಹೇಗಿದೆ?

ಹಾಗಿದ್ದರೆ ಈ ಬೋಯಿಂಗ್‌ ಕ್ಯಾಂಪಸ್‌ ಮತ್ತು ಸುಕನ್ಯಾ ಯೋಜನೆ ವಿಶೇಷತೆ ಏನು?

ಬೋಯಿಂಗ್‌ ಇಂಡಿಯಾ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ಸೆಂಟರ್‌ (BIETC)

1.ಅಮೆರಿಕಾದಿಂದ ಹೊರಗೆ, ಸ್ಥಾಪನೆಯಾಗಿರುವ ಬೋಯಿಂಗ್ ಸಂಸ್ಥೆಯ ಅತಿದೊಡ್ಡ ಘಟಕ ಇದು
2.1,600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕೇಂದ್ರ
3.43 ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿ ವ್ಯಾಪಿಸಿರುವ ಬಿಐಇಟಿಸಿ ಕ್ಯಾಂಪಸ್
4. ಈ ಸಂಸ್ಥೆ ಭಾರತೀಯ ಪ್ರತಿಭೆಗಳನ್ನು ಸ್ವಾಗತಿಸಲಿದ್ದು, ಅದರಲ್ಲೂ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳ ಪ್ರತಿಭೆಗಳಿಗೆ ಅವಕಾಶಗಳನ್ನು ಒದಗಿಸಲಿದೆ.
5.ಬಿಐಇಟಿಸಿ ಭಾರತದಲ್ಲಿ ಬೋಯಿಂಗ್‌‌ ಸಂಸ್ಥೆಯ ಅತಿದೊಡ್ಡ ವಿಭಾಗವಾಗಿದೆ.
6.ದೇಶದ ಸ್ಟಾರ್ಟಪ್‌ಗಳು, ಖಾಸಗಿ ವಲಯ ಮತ್ತು ಸರ್ಕಾರದೊಡನೆ ಈ ಬಿಐಇಟಿಸಿ ಕೇಂದ್ರ ಕಾರ್ಯಾಚರಿಸಲಿದೆ.
7.ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಕ್ಕೆ ನೂತನ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಕೇಂದ್ರ ಗಮನ ಹರಿಸಲಿದೆ.
8.ಬಿಐಇಟಿಸಿ ಕೇಂದ್ರದಿಂದ ಜಾಗತಿಕವಾಗಿ ಏರೋಸ್ಪೇಸ್ ಉದ್ಯಮದ ಪ್ರಗತಿಗಾಗಿ ಕಾರ್ಯಾಚರಿಸಲು ಇನ್ನಷ್ಟು ಸಹಕಾರಿ.
9.3,000ಕ್ಕೂ ಹೆಚ್ಚು ಇಂಜಿನಿಯರ್‌ಗಳನ್ನು ಹೊಂದುವ ಗುರಿ ಹಾಕಿಕೊಂಡಿದೆ ಬಿಐಇಟಿಸಿ.
10. ಈ ಇಂಜಿನಿಯರ್‌ಗಳು ಸಂಶೋಧನೆ ಮತ್ತು ಅಭಿವೃದ್ಧಿ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾಗಿಯಾಗಿ, ಆಧುನಿಕ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ (ಎಐ), ಮೆಷಿನ್ ಲರ್ನಿಂಗ್, ಇಂಡಸ್ಟ್ರಿಯಲ್ ಇಂಟರ್ನೆಟ್ ಆಫ್ ಥಿಂಗ್ಸ್, ಕ್ಲೌಡ್ ಕಂಪ್ಯೂಟಿಂಗ್, ಮಾಡೆಲ್ ಆಧಾರಿತ ಇಂಜಿನಿಯರಿಂಗ್, ಮತ್ತು ಅಡ್ಡಿಟಿವ್ ಉತ್ಪಾದನೆಗಳನ್ನು ಬಳಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : Modi in Karnataka : ರಾಜ್ಯಕ್ಕೆ ಮೋದಿ ಆಗಮನ; ಕಲಬುರಗಿಯಿಂದ ಸೋಲಾಪುರಕ್ಕೆ ಪಯಣ, ಸಂಜೆ ಬೆಂಗಳೂರಿಗೆ

ಬೋಯಿಂಗ್ ಸುಕನ್ಯಾ ಯೋಜನೆ ಎಂದರೇನು??

Exit mobile version