Site icon Vistara News

Karnataka Election 2023: ಕನಕಪುರ ಸ್ಪರ್ಧೆಯಿಂದ ಡಿಕೆಶಿ ಹಿಂದೆ ಸರಿಯುವ ಮಾತೇ ಇಲ್ಲ; ಡಿಕೆಸು ತಿರುಗೇಟು

Lok Sabha Election

Lok Sabha Election 2024: DK Suresh Is Richest Candidate In Karnataka, Here Is Top 10 List

ಕನಕಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಕನಕಪುರ ವಿಧಾನಸಭೆ (Karnataka Election 2023) ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ನೀಡಿದ ಹೇಳಿಕೆಗೆ ಸಂಸದ ಡಿ.ಕೆ.ಸುರೇಶ್‌ ತಿರುಗೇಟು ನೀಡಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಈ ಕುರಿತು ಮಾತನಾಡಿದ ಸುರೇಶ್‌, “ಆರ್‌.ಅಶೋಕ್‌ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಕನಕಪುರದಲ್ಲಿ ಕುತಂತ್ರ ನಡೆಯುತ್ತಿದೆ ಎಂದು ಮೊದಲೇ ಹೇಳಿದ್ದೆ. ಕಾಣದ ಕೈಗಳು ಕೆಲಸ ಮಾಡುತ್ತಿವೆ. ಹಾಗಾಗಿ, ಕೆಲವರು ಬೇರೆ ಬೇರೆ ರೀತಿ ವ್ಯಾಖ್ಯಾನ ಮಾಡುತ್ತಿರಬಹುದು. ಆದರೆ, ಡಿಕೆಶಿ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ” ಎಂದು ಸ್ಪಷ್ಟಪಡಿಸಿದರು.

“ಬಿಜೆಪಿಯವರಿಗೆ ನೈತಿಕವಾಗಿ ಜನರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತಿಲ್ಲ. ಭ್ರಷ್ಟಾಚಾರ, ಹಗರಣಗಳನ್ನು ಮುಚ್ಚಿಹಾಕಲು ಅವರು ಯತ್ನಿಸುತ್ತಿದ್ದಾರೆ. ಆದರೆ, ಕನಕಪುರದ ಸ್ವಾಭಿಮಾನಿ ಮತದಾರರು ಡಿಕೆಶಿ ಅವರ ಜತೆ ಇದ್ದಾರೆ. ರಾಜ್ಯದೆಲ್ಲೆಡೆಯೂ ಶಿವಕುಮಾರ್‌ ನಾಯಕತ್ವವನ್ನು ಜನ ಮೆಚ್ಚಿದ್ದಾರೆ. ಹಾಗಾಗಿ, ನಾವು ಹಿಂದಡಿ ಇಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ತಿರುಗೇಟ ನೀಡಿದರು.

ಡಿ.ಕೆ.ಶಿವಕುಮಾರ್‌ ಹಾಗೂ ಡಿ.ಕೆ.ಸುರೇಶ್‌ ಇಬ್ಬರೂ ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲೂ, ಡಿಕೆಶಿ ಅವರು ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಪ್ರಕರಣವನ್ನು ಕರ್ನಾಟಕ ಸರ್ಕಾರವು ಸಿಬಿಐ ತನಿಖೆಗೆ ವಹಿಸಿರುವುದನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಡಿಕೆಶಿ ವಿರುದ್ಧ ಹಲವು ಕೇಸ್‌ಗಳು ದಾಖಲಾಗಿವೆ. ಹಾಗಾಗಿ, ಮುಂಜಾಗ್ರತಾ ಕ್ರಮವಾಗಿ ಡಿ.ಕೆ.ಸುರೇಶ್‌ ಅವರು ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಡಿಕೆಶಿ ಅವರೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಆರ್‌.ಅಶೋಕ್‌ ಹೇಳಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ.

ಕುತಂತ್ರಕ್ಕೆ ಬಿಜೆಪಿ ಹೆಸರುವಾಸಿ ಎಂದ ಸುರೇಶ್‌

ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕಾರ ಮಾಡುವುದು ಬಿಜೆಪಿ ಸರ್ಕಾರ ಅಲ್ಲ, ಚುನಾವಣೆ ಆಯೋಗ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಸು, “ಸರ್ಕಾರ ಮಾಡುತ್ತದೆಯೋ, ಆಯೋಗ ಮಾಡುತ್ತದೆಯೋ ಗೊತ್ತಿಲ್ಲ. ಆದರೆ, ಬಿಜೆಪಿಯು ಕುತಂತ್ರಕ್ಕೆ ಹೆಸರಾಗಿದೆ. ರಾಹುಲ್‌ ಗಾಂಧಿ ಅವರನ್ನು ಹೇಗೆ ಲೇವಡಿ ಮಾಡಿದ್ದಾರೆ ಎಂಬುದು ಗೊತ್ತಿದೆ. ಈಗ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು, ರಾಜಕೀಯವಾಗಿ ಅವರನ್ನು ಮುಗಿಸಲು ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ” ಎಂದು ತಿಳಿಸಿದರು. ‌

ಅಶೋಕ್‌ ಹೇಳಿದ್ದೇನು?

ಡಿಕೆಶಿ ತೆರೆದ ಪುಸ್ತಕ: ಸಂಸದ

ಡಿಕೆಶಿ ಅವರು ನಾಮಪತ್ರ ಸಲ್ಲಿಸಿದ ಬಳಿಕ ಐಟಿ ಅಧಿಕಾರಿಗಳು ಕನಕಪುರಕ್ಕೆ ಬಂದು ಮಾಹಿತಿ ಪಡೆದಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆಸು ಪ್ರತಿಕ್ರಿಯಿಸಿದರು. “ಐಟಿ ಅಧಿಕಾರಿಗಳು ಯಾವ ಮಾಹಿತಿಯನ್ನಾದರೂ ಪಡೆಯಲಿ. ಡಿಕೆಶಿ ಅವರು ತೆರೆದ ಪುಸ್ತಕ ಇದ್ದಂತೆ. ನಾವು ಯಾವುದೇ ತನಿಖೆ ಬೇಕಾದರೂ ಎದುರಿಸಲು ಸಿದ್ಧರಿದ್ದೇವೆ. ಕನಕಪುರದ ನಾಗರಿಕರು ನಮ್ಮನ್ನು ಪೋಷಣೆ ಮಾಡಿದ್ದಾರೆ. ಅವರ ಆಶ್ರಯದಲ್ಲಿ ಬೆಳೆಯುತ್ತಿದ್ದೇವೆ. ಸೇವೆ ಮಾಡಲು ಮತ್ತೊಂದು ಅವಕಾಶ ಕೊಡಿ ಎಂಬುದಾಗಿ ಮನವಿ ಮಾಡುತ್ತೇವೆ. ಹಾಗಾಗಿ, ಜನರೇ ನಮ್ಮ ಬಲ” ಎಂದರು.

ಇದನ್ನೂ ಓದಿ: ಸ್ವರೂಪ್‌ ಬೆನ್ನಿಗೆ ನಿಂತ ಗೌಡರ ಕುಟುಂಬ; ಮುಸ್ಲಿಂ ಮೀಸಲಾತಿ ಮರುಸ್ಥಾಪನೆ ಎಂದ ಎಚ್‌ಡಿಕೆ

Exit mobile version