Site icon Vistara News

Criminal politics | ನಾನು ಜೈಲಿಗೆ ಹೋಗಿದ್ದು ರೌಡಿ ಶೀಟರ್‌ ಆಗಿ ಅಲ್ಲ, ಯಡಿಯೂರಪ್ಪನೂ ಹೋಗಿಲ್ವ?: ಡಿಕೆಶಿ

DK Shivakumar ED Case travel to abroad

ಚಿಕ್ಕಮಗಳೂರು: ರಾಜ್ಯದಲ್ಲಿ ರೌಡಿ ಪಾಲಿಟಿಕ್ಸ್‌ (Criminal politics) ಸದ್ದು ಜೋರಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಕ್ರಿಮಿನಲ್‌ಗಳ ಸೇರ್ಪಡೆ ವಿಚಾರದಲ್ಲಿ ಪರಸ್ಪರ ದೋಷಾರೋಪ ಮಾಡಿಕೊಳ್ಳುತ್ತಿವೆ. ಈ ನಡುವೆ ತಿಹಾರ್ ಜೈಲಿನಿಂದ ಬಂದವರು ರಾಜ್ಯಾಧ್ಯಕ್ಷ ಹುದ್ದೆಗೆ ಬಡ್ತಿ ಹೊಂದಿದ್ದಾರೆ ಎಂಬ ಬಿಜೆಪಿ ಟ್ವೀಟ್‌ಗೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ʻʻನನ್ನ ಮೇಲೆ ಯಾವುದೇ ರೌಡಿಶೀಟರ್ ಕೇಸ್ ಇಲ್ಲ. ನಾನು ರೌಡಿ ಶೀಟರ್‌ ಅಲ್ಲ. ಯಡಿಯೂರಪ್ಪ ಅವರೂ ಜೈಲಿಗೆ ಹೋಗಿ ಬಂದಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಕೂಡ ಜೈಲಿಗೆ ಹೋಗಿ ಬಂದಿದ್ದಾರೆ. ಅಂತೆಯೇ ನಾನೂ ಜೈಲಿಗೆ ಹೋಗಿ ಬಂದಿದ್ದೇನೆ. ರಾಜಕೀಯ ಪ್ರೇರಿತವಾಗಿ ನನ್ನನ್ನು ಜೈಲಿಗೆ ಹಾಕಿದ್ದು. ನಾನೇನೂ ಭ್ರಷ್ಟಾಚಾರ ಮಾಡಿಯೂ ಜೈಲಿಗೆ ಹೋಗಿದ್ದಲ್ಲ.ʼʼ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ʻʻಅವರ ತಟ್ಟೆಯಲ್ಲಿ ದೊಡ್ಡ ಹೆಗ್ಗಣ ಬಿದ್ದಿದೆ, ಅದನ್ನ ಮೊದಲು ನೋಡಿಕೊಳ್ಳಲಿ. ಮತದಾನದ ಹಕ್ಕನ್ನೇ ಮಾರಲು ಹೊರಟವರು ಬಿಜೆಪಿಯವರುʼʼ ಎಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ರೌಡಿ ಮೋರ್ಚಾ ಆರಂಭಿಸಬಹುದು: ಕಾಂಗ್ರೆಸ್‌ನಿಂದ ಟ್ವೀಟ್‌ ಕೀಟಲೆ
ಈ ನಡುವೆ, ಕಾಂಗ್ರೆಸ್‌ ಹಲವು ಟ್ವೀಟ್‌ಗಳ ಮೂಲಕ ಬಿಜೆಪಿಯನ್ನು ಕಿಚಾಯಿಸಿದೆ. ಬಿಜೆಪಿಯಲ್ಲಿ ಬೇರೆ ಬೇರೆ ಮೋರ್ಚಾಗಳಿರುವಂತೆ ಇನ್ನೊಂದು ರೌಡಿ ಮೋರ್ಚಾ ಮಾಡಬಹುದು ಎಂದು ಹೇಳಿದೆ.

– ʻʻ40% ಕಮಿಷನ್ ವಸೂಲಿ ಸಾಲದೆ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಹಫ್ತಾ ವಸೂಲಿಗೂ ಬಿಜೆಪಿ ತಯಾರಿ ನಡೆಸಿರುವಂತಿದೆ! ಬಿಜೆಪಿಯಲ್ಲಿ “ರೌಡಿ ಮೋರ್ಚಾ” ಎಂಬ ಹೊಸ ಘಟಕ ತೆರೆಯುವ ಲಕ್ಷಣವಿದೆ. ಸೋಲುವ ಭಯದಲ್ಲಿರುವ ಬಿಜೆಪಿ ರೌಡಿಗಳನ್ನು ಬಳಸಿ ಚುನಾವಣೆಗೆ ಸಿದ್ಧತೆ ನಡೆಸಿದೆಯೇ ಬೊಮ್ಮಾಯಿಯವರೇ? ಇದೇನಾ ಬಿಜೆಪಿಯ ಸಂಸ್ಕೃತಿ, ಸಂಸ್ಕಾರ?

– ಗಡಿಪಾರಾಗಿದ್ದ ಕ್ರಿಮಿನಲ್‌ನನ್ನು ಪಕ್ಷದ ಅಧ್ಯಕ್ಷನನ್ನಾಗಿ ಮಾಡಿದ್ದ ಬಿಜೆಪಿಗೆ ರೌಡಿಗಳು, ಕ್ರಿಮಿನಲ್‌ಗಳೇ ಆದರ್ಶ ವ್ಯಕ್ತಿಗಳು! ಪೊಲೀಸರಿಂದ ಇಂತಹ ಆತಿಥ್ಯ ಪಡೆದ ಈ ವ್ಯಕ್ತಿಗೆ ರಾಜಾತಿಥ್ಯ ನೀಡುತ್ತಿದೆ ಬಿಜೆಪಿ. ಪೊಲೀಸರೆದುರು ತಲೆ ತಗ್ಗಿಸಿ ನಿಲ್ಲುವವನಿಗೆ ಅದೇ ಪೊಲೀಸರಿಂದ ಸೆಲ್ಯೂಟ್ ಹೊಡೆಸಲು ಹವಣಿಸುತ್ತಿದೆ ಬಿಜೆಪಿ.

ಇದನ್ನೂ ಓದಿ | Rowdy politics | ಬೆತ್ತನಗೆರೆ ಶಂಕರ ರಾಜಕೀಯ ಪ್ರವೇಶಕ್ಕೆ ಪ್ರಯತ್ನ: ಬಿಜೆಪಿ ಬಾಗಿಲಲ್ಲಿ ಮತ್ತೊಬ್ಬ ರೌಡಿಶೀಟರ್‌

Exit mobile version