ದೇವನಹಳ್ಳಿ: ಹೊಸಕೋಟೆ ನಗರದಲ್ಲಿರುವ ಓವಂ ಆಸ್ವತ್ರೆಯಲ್ಲಿ (Ovum Hospital) ವೈದ್ಯರ ನಿರ್ಲಕ್ಷ್ಯಕ್ಕೆ (Doctor Negligence) 6 ತಿಂಗಳ ಮಗುವೊಂದು ಮೃತಪಟ್ಟಿದೆ ಎಂಬ ಆರೋಪ ಕೇಳಿಬಂದಿದೆ. ತಾಲೂಕಿನ ಕಂಬಳಿಪುರ ನಿವಾಸಿ ವೇಣುಗೋಪಾಲ್ ಹಾಗೂ ಪ್ರಿಯಾಂಕಾ ದಂಪತಿಯ ಮಗುವಿಗೆ ವೈದ್ಯರು ಓವರ್ ಡೋಸ್ ನೀಡಿದ್ದು, ಇದರಿಂದ ಮಗುವೊಂದು ಮೃತಪಟ್ಟಿದೆ ಎಂದು ಆರೋಪಿಸಿದ್ದಾರೆ.
ಮಗುವಿಗೆ ಹೊಟ್ಟೆ ನೋವು ಇದ್ದ ಕಾರಣದಿಂದಾಗಿ ಕಳೆದ 15 ದಿನಗಳಿಂದ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ, ಕಳೆದ ಸೋಮವಾರ ಮಗುವಿಗೆ ಓವರ್ ಡೋಸ್ ಕೊಟ್ಟಿದ್ದಾರೆ. ಮೃತಪಟ್ಟಿರುವ ಮಗುವಿಗೆ ವೆಂಟಿಲೇಟರ್ ಹಾಕಿ ಬೇರೆ ಆಸ್ವತ್ರೆಗೆ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈವರೆಗೂ ನಾಲ್ಕೈದು ಮಕ್ಕಳು ಇದೇ ರೀತಿ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಕುಡುಕರಿಂದ ಜಪ್ತಿ ಮಾಡಿದ ಕಾರುಗಳನ್ನು ಉಕ್ರೇನ್‌ಗೆ ಕೊಟ್ಟ ಲ್ಯಾಟ್ವಿಯಾ, ಮಾನವೀಯತೆಗೆ ಮೆಚ್ಚುಗೆ
ಆಸ್ವತ್ರೆಯ ಮೆಡಿಕಲ್ ಶಾಪ್‌ಗಳನ್ನು ಬಂದ್ ಮಾಡಿಸಿ ಪೋಷಕರು ಗಲಾಟೆ ಮಾಡಿದ್ದಾರೆ. ಈ ವೇಳೆ ಆಸ್ವತ್ರೆಯ ಒಳ ಭಾಗದಲ್ಲಿ ನೂಕಾಟ ತಳ್ಳಾಟ ಉಂಟಾಯಿತು. ಇತ್ತ ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಹರಸಾಹಸಪಟ್ಟರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ