Doctor Negligence: ಓವರ್‌ ಡೋಸ್‌ನಿಂದ 6 ತಿಂಗಳ ಮಗು ಸಾವು; ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಕಿಡಿ - Vistara News

ಆರೋಗ್ಯ

Doctor Negligence: ಓವರ್‌ ಡೋಸ್‌ನಿಂದ 6 ತಿಂಗಳ ಮಗು ಸಾವು; ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಕಿಡಿ

Doctor Negligence: ಹೊಟ್ಟೆ ನೋವು ಎಂದು 6 ತಿಂಗಳ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಓವರ್‌ ಡೋಸ್‌ ಕೊಟ್ಟಿದ್ದಾರೆ. ಇದರಿಂದಲೇ ಮಗು ಮೃತಪಟ್ಟಿದೆ ಎಂದು ಪೋಷಕರು ಆಕ್ರೋಶ ಹೊರಹಾಕಿ, ಆಸ್ಪತ್ರೆಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

VISTARANEWS.COM


on

6-month-old baby dies due to overdose, parents blame doctors for negligence
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೇವನಹಳ್ಳಿ: ಹೊಸಕೋಟೆ ನಗರದಲ್ಲಿರುವ ಓವಂ ಆಸ್ವತ್ರೆಯಲ್ಲಿ (Ovum Hospital) ವೈದ್ಯರ ನಿರ್ಲಕ್ಷ್ಯಕ್ಕೆ (Doctor Negligence) 6 ತಿಂಗಳ ಮಗುವೊಂದು ಮೃತಪಟ್ಟಿದೆ ಎಂಬ ಆರೋಪ ಕೇಳಿಬಂದಿದೆ. ತಾಲೂಕಿನ ಕಂಬಳಿಪುರ ನಿವಾಸಿ ವೇಣುಗೋಪಾಲ್ ಹಾಗೂ ಪ್ರಿಯಾಂಕಾ ದಂಪತಿಯ ಮಗುವಿಗೆ ವೈದ್ಯರು ಓವರ್‌ ಡೋಸ್‌ ನೀಡಿದ್ದು, ಇದರಿಂದ ಮಗುವೊಂದು ಮೃತಪಟ್ಟಿದೆ ಎಂದು ಆರೋಪಿಸಿದ್ದಾರೆ.

6-month-old baby dies due to overdose, parents blame doctors for negligence

ಮಗುವಿಗೆ ಹೊಟ್ಟೆ ನೋವು ಇದ್ದ ಕಾರಣದಿಂದಾಗಿ ಕಳೆದ 15 ದಿನಗಳಿಂದ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ, ಕಳೆದ‌ ಸೋಮವಾರ ಮಗುವಿಗೆ ಓವರ್ ಡೋಸ್ ಕೊಟ್ಟಿದ್ದಾರೆ. ಮೃತಪಟ್ಟಿರುವ ಮಗುವಿಗೆ ವೆಂಟಿಲೇಟರ್ ಹಾಕಿ ಬೇರೆ ಆಸ್ವತ್ರೆಗೆ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈವರೆಗೂ ನಾಲ್ಕೈದು ಮಕ್ಕಳು ಇದೇ ರೀತಿ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕುಡುಕರಿಂದ ಜಪ್ತಿ ಮಾಡಿದ ಕಾರುಗಳನ್ನು ಉಕ್ರೇನ್‌ಗೆ ಕೊಟ್ಟ ಲ್ಯಾಟ್ವಿಯಾ, ಮಾನವೀಯತೆಗೆ ಮೆಚ್ಚುಗೆ

ಆಸ್ವತ್ರೆಯ ಮೆಡಿಕಲ್ ಶಾಪ್‌ಗಳನ್ನು ಬಂದ್ ಮಾಡಿಸಿ ಪೋಷಕರು ಗಲಾಟೆ ಮಾಡಿದ್ದಾರೆ. ಈ ವೇಳೆ ಆಸ್ವತ್ರೆಯ ಒಳ ಭಾಗದಲ್ಲಿ ನೂಕಾಟ ತಳ್ಳಾ‌ಟ‌ ಉಂಟಾಯಿತು. ಇತ್ತ ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಹರಸಾಹಸಪಟ್ಟರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Apricot Benefits: ನಿಮಗೆ ಇಂತಹ ಸಮಸ್ಯೆಗಳಿವೆಯೇ?: ಹಾಗಾದರೆ ನಿತ್ಯವೂ ಆಪ್ರಿಕಾಟ್‌ ತಿನ್ನಿ!

ಆಪ್ರಿಕಾಟ್‌ ಹಣ್ಣಿನ ನಿಜವಾದ ಮಹತ್ವ (Apricot benefits) ತಿಳಿದರೆ ಇದನ್ನು ನೀವು ನಿತ್ಯವೂ ತಿನ್ನಲು ಆರಂಭಿಸುವಿರಿ. ಯಾಕೆ ಗೊತ್ತಾ? ಆಪ್ರಿಕಾಟ್‌ ಹಣ್ಣಿನಲ್ಲಿ ಬಹುತೇಕ ಎಲ್ಲ ಪೋಷಕಾಂಶಗಳೂ ಸಮೃದ್ಧವಾಗಿವೆ. ವಿಟಮಿನ್‌ ಎ, ಸಿ, ಇ, ಪೊಟಾಶಿಯಂ, ಬೀಟಾ ಕ್ಯಾರೋಟಿನ್‌ ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ನಾರಿನಂಶವೂ ಬೇಕಾದಷ್ಟಿದೆ. ಉತ್ತಮ ಪ್ರಮಾಣದಲ್ಲಿ ಪ್ರೊಟೀನ್‌ ಕೂಡಾ ಇದೆ.

VISTARANEWS.COM


on

Apricot Benefits
Koo

ಆಪ್ರಿಕಾಟ್‌ ನಮ್ಮೂರಲ್ಲಿ ಬೆಳೆಯುವ ಹಣ್ಣಲ್ಲವಾದರೂ ಈ ಹಣ್ಣು ಮಾರುಕಟ್ಟೆಯಲ್ಲಿ ಒಣಹಣ್ಣಿನ ರೂಪದಲ್ಲಿ ಸದಾ ದೊರೆಯುವ ಹಣ್ಣೇ. ಆದರೆ, ಇದು ಸಾಮಾನ್ಯ ಹಣ್ಣಲ್ಲವಾದ್ದರಿಂದ, ಇದರ ಬಗ್ಗೆ ನಮಗೆ ತಿಳುವಳಿಕೆ ಅಷ್ಟಿಲ್ವಾದ್ದರಿಂದ ಇದರ ಬಳಕೆ ಬೇರೆ ಒಣ ಹಣ್ಣುಗಳಿಗೆ ಹೋಲಿಸಿದರೆ ಕಡಿಮೆಯೇ. ಆದರೆ, ಆಪ್ರಿಕಾಟ್‌ ಹಣ್ಣಿನ ನಿಜವಾದ ಮಹತ್ವ ತಿಳಿದರೆ ಇದನ್ನು ನೀವು ನಿತ್ಯವೂ ತಿನ್ನಲು ಆರಂಭಿಸುವಿರಿ. ಯಾಕೆ ಗೊತ್ತಾ? ಆಪ್ರಿಕಾಟ್‌ ಹಣ್ಣಿನಲ್ಲಿ ಬಹುತೇಕ ಎಲ್ಲ ಪೋಷಕಾಂಶಗಳೂ ಸಮೃದ್ಧವಾಗಿವೆ. ವಿಟಮಿನ್‌ ಎ, ಸಿ, ಇ, ಪೊಟಾಶಿಯಂ, ಬೀಟಾ ಕ್ಯಾರೋಟಿನ್‌ ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ನಾರಿನಂಶವೂ ಬೇಕಾದಷ್ಟಿದೆ. ಉತ್ತಮ ಪ್ರಮಾಣದಲ್ಲಿ ಪ್ರೊಟೀನ್‌ ಕೂಡಾ ಇದೆ. ಹಾಗೆ ನೋಡಿದರೆ ತಾಜಾ ಆಫ್ರಿಕಾಟ್‌ಗಿಂತ ಒಣ ಆಪ್ರಿಕಾಟ್‌ನಲ್ಲಿ ಖನಿಜಾಂಶಗಳು ಹಾಗೂ ಎಲ್ಲ ಬಗೆಯ ಪೋಷಕಾಂಶಗಳು ತುಸು ಹೆಚ್ಚೇ ಇವೆ. ಹಾಗಾಗಿ, ಇವು ಸಾಮಾನ್ಯವಾಗಿ ಸಿಗುವ ಹಣ್ಣಲ್ಲದಿದ್ದರೂ, ಇವನ್ನು ನಿತ್ಯವೂ ಹಾಗೆಯೇ ತಿನ್ನುವ ಮೂಲಕ, ನೆನೆಸಿ ತಿನ್ನುವ ಮೂಲಕ ಅಥವಾ ಮೊಸರಿನ ಜೊತೆಗೆ, ಸಲಾಡ್‌ಗಳಲ್ಲಿ ಹಾಕಿ ತಿನ್ನುವ ಮೂಲಕವೂ ಹೊಟ್ಟೆ ಸೇರುವಂತೆ ಮಾಡಬಹುದು. ಬನ್ನಿ, ಆಪ್ರಿಕಾಟ್‌ ನಿತ್ಯವೂ ತಿನ್ನುವ ಮೂಲಕ ನಮ್ಮ ಆರೋಗ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು (Apricot benefits) ನೋಡೋಣ.

Closeup of woman eye with visual effects
  • ನಿಮ್ಮ ಕಣ್ಣು ದುರ್ಬಲವೋ? ಹಾಗಿದ್ದರೆ ಆಪ್ರಿಕಾಟ್‌ ನಿಮಗೆ ಒಳ್ಳೆಯದು. ಆಪ್ರಿಕಾಟ್‌ನಲ್ಲಿ ವಿಟಮಿನ್‌ ಎ ಹಾಗೂ ಇ ಇರುವುದರಿಂದ ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ವಿಟಮಿನ್‌ ಎ ಕಣ್ಣಿನ ತೊಂದರೆಗಳಿದ್ದಾಗ ಸೇವಿಸಲೇಬೇಕಾದ ಪೋಷಕಾಂಶ. ಜೊತೆಗೆ ವಿಟಮಿನ್‌ ಇ ಪ್ರೀ ರ್ಯಾಡಿಕಲ್‌ಗಳಿಂದ ಕಣ್ಣಿಗೆ ತೊಂದರೆಗಳಾಗುವುದನ್ನು ತಪ್ಪಿಸುತ್ತದೆ.
  • ಅಧಿಕ ರಕ್ತದೊತ್ತಡದ ಸಮಸ್ಯೆ ಇದೆಯಾ? ಹಾಗಿದ್ದರೆ ಆಪ್ರಿಕಾಟ್‌ ತಿನ್ನಿ. ಆಪ್ರಿಕಾಟ್‌ನಲ್ಲಿ ಪೊಟಾಶಿಯಂ ಹೇರಳವಾಗಿ ಇರುವುದರಿಂದ ಇದು ರಕ್ತದೊತ್ತಡದ ಸಮಸ್ಯೆಗೆ ಅತ್ಯಂತ ಒಳ್ಳೆಯದು. ಇದು ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಆರೋಗ್ಯ ಸುಧಾರಿಸುವಲ್ಲಿ ನೆರವಾಗುತ್ತದೆ.
  • ಆಗಾಗ ಏನಾದರೊಂದು ತಿನ್ನುವ ಬಯಕೆಯಾಗುತ್ತದೋ? ಆಹಾರದ ಕಂಟ್ರೋಲ್‌ ಮಾಡಲು ಸಾಧ್ಯವಾಗುತ್ತಿಲ್ಲವೋ? ಹಾಗಿದ್ದರೆ ಅಂಥ ಸಂದರ್ಭ ಆಪ್ರಿಕಾಟ್‌ ತಿನ್ನಿ. ಇದು ನಿಮಗೆ ಎಷ್ಟು ಪೋಷಕಾಂಶ ನೀಡುತ್ತದೆ ಎಂದರೆ, ಮತ್ತೆ ಮಧ್ಯದಲ್ಲಿ ಏನೂ ತಿನ್ನಬೇಕೆನಿಸುವುದಿಲ್ಲ. ಪ್ರಯಾಣ ಮಾಡುವಾಗ, ಕಚೇರಿಯಲ್ಲಿ, ಓಡಾಟ ಇದ್ದಾಗ ಸೇರದಂತೆ ನಿತ್ಯವೂ ಬ್ಯಾಗ್‌ನಲ್ಲಿ ಇಡಬಹುದಾದ ಆಹಾರ ಎಂದರೆ ಇದು. ಅತಿಯಾಗಿ ಹಸಿವಾದಾಗ ಒಮ್ಮೆ ಅದನ್ನು ತಗ್ಗಿಸಿ, ಹೊಟ್ಟೆಯನ್ನು ಹಸಿವಾಗದಂತೆ ಕೆಲಕಾಲ ಇಡುತ್ತದೆ. ಇದರಿಂದ ಸಿಕ್ಕಸಿಕ್ಕಲ್ಲಿ ಸಿಕ್ಕಿದ್ದನ್ನು ತಿನ್ನುವ ಚಟ ಕಡಿಮೆಯಾಗುತ್ತದೆ.
Constipation
  • ಮಲಬದ್ಧತೆಯೋ? ಹಾಗಿದ್ದರೆ ನಿಮಗೆ ಆಪ್ರಿಕಾಟ್‌ ಒಳ್ಳೆಯದು. ಆಪ್ರಿಕಾಟ್‌ ಪಚನಕ್ರಿಯೆಯನ್ನು ಉತ್ತೇಜಿಸುತ್ತದೆ. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆಯ ಸಮಸ್ಯೆ ಇರುವ ಮಂದಿಗೆ ಭಾರೀ ಒಳ್ಳೆಯದು. ಪಚನಕ್ರಿಯೆಯನ್ನು ಚುರುಕುಗೊಳಿಸುವ ಜೊತೆಗೆ ಸುಲಭವಾಗಿ ಮಲವಿಸರ್ಜನೆಯಾಗುವಂತೆ ಮಾಡುತ್ತದೆ. ನಿತ್ಯವೂ ತಿನ್ನುವುದರಿಂದ ಈ ಸಮಸ್ಯೆ ಬಹುತೇಕ ಮಾಯವಾಗುತ್ತದೆ. ಪಿತ್ತಕೋಶಕ್ಕೂ ಇದು ಅತ್ಯಂತ ಒಳ್ಳೆಯದು. ಅತಿಯಾಗಿ ಆಲ್ಕೋಹಾಲ್‌ ಸೇವನೆಯಿಂದ ಪಿತ್ತಕೋಶವನ್ನು ಹಾನಿ ಮಾಡಿಕೊಂಡ ಮಂದಿಗೂ ಇದು ಒಳ್ಳೆಯದು. ಪಿತ್ತಕೋಶದ ಸಮಸ್ಯೆಯಿರುವ ಮಂದಿ ಇದನ್ನು ನಿತ್ಯವೂ ತಿನ್ನಬಹುದು.
  • ಕೂದಲು ಹಾಗೂ ಚರ್ಮದ ಸಮಸ್ಯೆಯೇ? ಆಪ್ರಿಕಾಟ್‌ ಇವಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಎಲ್ಲ ಪೋಷಕಾಂಶಗಳೂ ಸಮೃದ್ಧವಾಗಿರುವುದರಿಂದ ಇದು ಕೂದಲ ಹಾಗೂ ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಚರ್ಮಕ್ಕೆ ಹಚ್ಚುವ ಆಂಟಿ ಏಜಿಂಗ್‌ ಕ್ರೀಮುಗಳ ಬದಲು, ಇದನ್ನು ನಿತ್ಯವೂ ತಿಂದರೆ ಸಾಕು, ಫಲ ಕಾಣಬಹುದು. ಜೊತೆಗೆ ಕೂದಲು ಉದುರುವ ಸಮಸ್ಯೆ ಇರುವ ಮಂದಿಗೂ ಇದು ಒಳ್ಳೆಯದು. ಕೂದಲು ಉದುರದಂತೆ ತಡೆಯುವ ಜೊತೆಗೆ ಕೂದಲು ಆರೋಗ್ಯಪೂರ್ಣವಾಗಿ ಫಳಫಳ ಹೊಳೆಯುವಂತೆ ಮಾಡುತ್ತದೆ. ಆದರೆ, ಇವನ್ನು ನಿತ್ಯವೂ ಸೇವಿಸುವುದು ಅಗತ್ಯ.

ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು

Continue Reading

ಲೈಫ್‌ಸ್ಟೈಲ್

Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ

Gut Health ಬೇಸಿಗೆಯ ತಾಪದ ಕಿರಿಕಿರಿ ಒಂದು ಕಡೆಯಾದರೆ ಹೊಟ್ಟೆಯ ಆರೋಗ್ಯದ ಸಮಸ್ಯೆ ಇನ್ನೊಂದು ಕಡೆ ಎಂದು ಪರಿತಪಿಸುತ್ತಿದ್ದೀರಾ…?ಬೇಸಿಗೆಯಲ್ಲಿ ಹೊಟ್ಟೆಯ ಸಮಸ್ಯೆ ಕಾಡುವುದು ಸಹಜ. ನಿಮ್ಮ ಕರುಳಿನ ಆರೋಗ್ಯ ಚೆನ್ನಾಗಿದ್ದರೆ ಹೊಟ್ಟೆಯ ಸಮಸ್ಯೆಯಿಂದ ಪಾರಾಗಬಹುದು. ಅದಕ್ಕೆ ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Gut Health
Koo

ಬೆಂಗಳೂರು: ಬೇಸಿಗೆಯಲ್ಲಿ ಹಲವು ಹೊಟ್ಟೆಯ ಸಮಸ್ಯೆಗಳು ಕಾಡುತ್ತದೆ. ಹೊಟ್ಟೆಯ ಉರಿ, ಹೊಟ್ಟೆ ತುಂಬಿರುವಂತಹ ಅನುಭವವಾಗುತ್ತದೆ. ಇದರಿಂದ ಊಟವನ್ನು ಸರಿಯಾಗಿ ಮಾಡಲು ಆಗುವುದಿಲ್ಲ. ನಿಮಗೆ ಇಷ್ಟವಾದ ಆಹಾರವನ್ನು (Food) ತಿನ್ನಲು ಹೊಟ್ಟೆ ಬಯಸುವುದಿಲ್ಲ. ಹಾಗಾಗಿ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ನೀವು ನಿಮ್ಮ ಕರುಳಿನ ಆರೋಗ್ಯದ (Gut Health) ಬಗ್ಗೆ ಕಾಳಜಿವಹಿಸಬೇಕು.

ನಮ್ಮ ದೇಹದಲ್ಲಿ ಕರುಳು ಬಹಳ ಮುಖ್ಯ ಅಂಗಗಳಲ್ಲಿ ಒಂದು. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ದೇಹಕ್ಕೆ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಮತ್ತು ದೇಹದಿಂದ ತ್ಯಾಜ್ಯ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ಕರುಳನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ಬೇಸಿಗೆಯಲ್ಲಿ ಕರುಳಿನ ಆರೋಗ್ಯವನ್ನು ಉತ್ತಮವಾಗಿಡಲು ಈ ಪಾನೀಯಗಳನ್ನು ಸೇವಿಸಿ.

Gut Health

ಕೊಂಬುಚಾ

ಇದು ಪ್ರೋಬಯಾಟಿಕ್ ಗಳನ್ನು ಹೊಂದಿರುವಂತಹ ಹುದುಗಿಸಿದ ಚಹಾವಾಗಿದೆ. ಚೀನಾದ ಒಂದು ವಿಶೇಷವಾದ ಪಾನೀಯವಿದು. ಇದರಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ಹೆಚ್ಚಿನ ಪ್ರಮಾಣದಲ್ಲಿದೆ. ಇದು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು  ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ.

Gut Health

ಕೆಫಿರ್

ಮೊಸರಿನಂತೆಯೆ ಇದು ಕೂಡ ಪ್ರೋಬಯಾಟಿಕ್ ಗಳನ್ನು ಹೊಂದಿರುವಂತಹ ಡೈರಿ ಉತ್ಪನ್ನವಾಗಿದೆ. ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಮತ್ತು ಕರುಳು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ಯು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಣ್ಣುಗಳ ರಸ

ಇದನ್ನು ಕುಡಿಯುವುದರಿಂದ ದೇಹದಲ್ಲಿ ನೀರಿನ ಸಂಚಯನ ಹೆಚ್ಚಾಗುತ್ತದೆ. ಇದು ದೇಹಕ್ಕೆ ವಿಟಮಿನ್ ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಇದು ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ.

Gut Health

ಹಸಿರು ಸ್ಮೂಥಿಗಳು

ಇದನ್ನು ಹಸಿರು ಸೊಪ್ಪುಗಳಿಂದ ತಯಾರಿಸಲಾಗುತ್ತದೆ. ಪಾಲಕ್, ಕೇಲ್ ನಂತಹ ಸೊಪ್ಪುಗಳನ್ನು ಬಳಸಿ ಇದನ್ನು ತಯಾರಿಸಿ ಕುಡಿಯಿರಿ. ಇದರಲ್ಲಿ ಫೈಬರ್, ವಿಟಮಿನ್ ಗಳು ಮತ್ತು ಖನಿಜಗಳು ಸಮೃದ್ಧವಾಗಿದೆ. ಇದು ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು. ಇದು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ಎಳನೀರು

ಇದು ದೇಹವನ್ನು ನೈಸರ್ಗಿಕವಾಗಿ ಹೈಡ್ರೀಕರಿಸುತ್ತದೆ. ಇದರಲ್ಲಿ ಪೊಟ್ಯಾಸಿಯಂನಂತಹ ಎಲೆಕ್ಟ್ರೋಲೈಟ್ ಗಳನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಜಲಸಂಚಯನ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯವನ್ನು ಉತ್ತಮವಾಗಿಡುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.

ಗಿಡಮೂಲಿಕೆ ಚಹಾಗಳು

ಪುದೀನಾ, ಶುಂಠಿ ಅಥವಾ ಕ್ಯಾಮೊಮೈಲ್ ನಂತಹ ಗಿಡಮೂಲಿಕೆ ಚಹಾಗಳು ಜೀರ್ಣಾಂಗ ವ್ಯವಸ್ಥೆಯನ್ನು ಶಾಂತವಾಗಿಡುತ್ತದೆ. ಇದರಿಂದ ಹೊಟ್ಟೆಯುಬ್ಬರ, ಸುಡುವ ವೇಧನೆ ಸಮಸ್ಯೆ ಕಾಡುವುದಿಲ್ಲ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸುತ್ತದೆ.

Gut Health

ಅಲೋವೆರಾ ರಸ

ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಕರುಳಿನ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಹಾಗಾಗಿ ಶುದ್ಧ ಅಲೋವೆರಾ ರಸಗಳನ್ನು ಸೇವಿಸಿ. ಇದು ಹೊಟ್ಟೆಯ ಉರಿ ಮತ್ತು ಕಿರಿಕಿರಿಯನ್ನು ನಿವಾರಿಸುತ್ತದೆ.

ಆ್ಯಪಲ್ ಸೈಡರ್ ವಿನೆಗರ್

ಇದು ಅಸಿಟಿಕ್ ಆಮ್ಲವನ್ನು ಹೊಂದಿದ್ದು, ಜೀರ್ಣಕ್ರಿಯೆಗೆ ಒಳ್ಳೆಯದು. ಇದು ಕರುಳಿನಲ್ಲಿ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಮತ್ತು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದರಿಂದ ಕರುಳಿನ ಆರೋಗ್ಯ ಉತ್ತಮವಾಗಿರುತ್ತದೆ.

ಇದನ್ನೂ ಓದಿ: Drunken Groom: ಕುಡಿದ ಮತ್ತಿನಲ್ಲಿಯೇ ಮಂಟಪಕ್ಕೆಬಂದ ವರ; ಒದ್ದೋಡಿಸಿದ ವಧು!

ಹುದುಗಿಸಿದ ತರಕಾರಿಗಳು

ಸೌರ್ ಕ್ರಾಟ್, ಕಿಮ್ಚಿ ಅಥವಾ ಉಪ್ಪಿನಕಾಯಿಯಂತಹ ಹುದುಗಿಸಿದ ತರಕಾರಿಗಳು ಪ್ರೋಬಯಾಟಿಕ್ ಗಳು ಮತ್ತು ಫೈಬರ್ ಅನ್ನು ಹೊಂದಿದ್ದು, ಇದು ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು. ಇದು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

Continue Reading

ಲೈಫ್‌ಸ್ಟೈಲ್

Kids Sleep: ಪೋಷಕರೇ ಎಚ್ಚರ; ನಿಮ್ಮ ಮಕ್ಕಳ ನಿದ್ರೆ ಕಸಿದುಕೊಳ್ಳುವ ಈ ವಸ್ತುಗಳನ್ನು ಕೊಡಲೇಬೇಡಿ

Kids Sleep ಹಾಸಿಗೆಯ ಮೇಲೆ ಬಿದ್ದುಕೊಂಡಾಗ ಸುಖವಾದ ನಿದ್ರೆ ಆವರಿಸಿದರೆ ಅವರಷ್ಟೂ ಪುಣ್ಯವಂತರು ಇಲ್ಲ ಎನ್ನಬಹುದೇನೋ. ದೊಡ್ಡವರು ಯಾವುದೋ ಒತ್ತಡದ ಕಾರಣದಿಂದ ನಿದ್ರೆ ಮಾಡದೇ ಇರಬಹುದು ಆದರೆ ಈಗಿನ ಮಕ್ಕಳಿಗೆ ಏನಾಗಿದೆ….? ಅವರು ಕೂಡ ಈಗ ನಿದ್ರೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

VISTARANEWS.COM


on

Kids Sleep
Koo

ಬೆಂಗಳೂರು: ನಿದ್ರೆ ಯಾರಿಗೆ ಬೇಡ ಹೇಳಿ? ಈಗ ಚಿಕ್ಕಮಕ್ಕಳು ಕೂಡ ರಾತ್ರಿ ಸರಿಯಾಗಿ ನಿದ್ದೆ ಇಲ್ಲದೇ ಯಾವುದೋ ಒತ್ತಡದಲ್ಲಿ ಬಳಲುತ್ತಿರುವವರ ಹಾಗೇ ಇರುತ್ತಾರೆ. ಮಕ್ಕಳ ಬೆಳವಣಿಗೆಗೆ ಆಹಾರದ ಜೊತೆಗೆ ನಿದ್ರೆಯೂ ಬಹಳ ಮುಖ್ಯವಾದದ್ದು. ನಿದ್ರೆಯಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ ಮತ್ತು ಮನಸ್ಸನ್ನು ಶಾಂತವಾಗಿರುತ್ತದೆ. ಹಾಗಾಗಿ ನಿದ್ರೆ ಎನ್ನವುದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಉತ್ತಮ ನಿದ್ರೆ ಮಕ್ಕಳ ದೇಹದ ಅಂಗಾಂಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದರಿಂದ ಆರೋಗ್ಯಕರವಾದ ಹಾರ್ಮೋನ್ ಬಿಡುಗಡೆಯಾಗುತ್ತದೆ. ಹಾಗಾಗಿ ಇದು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಈ ಕೆಲವು ಅಂಶಗಳು ನಿಮ್ಮ ಮಕ್ಕಳ ನಿದ್ರೆಯನ್ನು (Kids Sleep) ಕೆಡಿಸುತ್ತದೆಯಂತೆ. ಅವು ಯಾವುವು ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

  • ಮಕ್ಕಳು ಹೆಚ್ಚು ಹೊತ್ತು ಟಿವಿ ನೋಡುವುದು, ಮೊಬೈಲ್ ಬಳಸುವುದು. ಇವು ನಿದ್ರೆಯ ಮಟ್ಟವನ್ನು ಕಡಿಮೆ ಮಾಡುತ್ತದೆಯಂತೆ. ಯಾಕೆಂದರೆ ಟಿವಿ, ಮೊಬೈಲ್ ನಿಂದ ಹೊರಬರುವ ನೀಲಿ ಬೆಳಕು ದೇಹದಲ್ಲಿ ಮೆಲಟೋನಿನ್ ಹಾರ್ಮೋನ್ ನ ಉತ್ಪಾದನೆಯನ್ನು ಕಡಿಮೆಮಾಡುತ್ತದೆ. ಇದರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ.
  • ಹಾಗೇ ಪ್ರತಿದಿನ ಮಕ್ಕಳನ್ನು ಒಂದೇ ಸಮಯದಲ್ಲಿ ಮಲಗುವಂತೆ ರೂಢಿ ಮಾಡಬೇಕು. ಇದರಿಂದ ಅವರ ದೇಹ ಆ ಸಮಯಕ್ಕೆ ಸರಿಯಾಗಿ ನಿದ್ರೆಗೆ ಜಾರುವಂತೆ ಮಾಡುತ್ತದೆ. ಹಾಗಾಗಿ ಪೋಷಕರು ಮಕ್ಕಳ ನಿದ್ರೆಯ ದಿನಚರಿಯನ್ನು ಸರಿಯಾಗಿ ರೂಢಿ ಮಾಡಿಸಿ.
  • ಕೆಲವು ಒತ್ತಡದ ಘಟನೆಗಳು ಮಕ್ಕಳ ನಿದ್ರೆಗೆ ಭಂಗವನ್ನುಂಟುಮಾಡುತ್ತದೆ. ಶಾಲೆ, ಸ್ನೇಹಿತರು ಮತ್ತು ಕುಟುಂಬದವರ ಸಮಸ್ಯೆಗಳು ಮಕ್ಕಳಲ್ಲಿ ಆತಂಕವನ್ನುಂಟುಮಾಡುತ್ತದೆ. ಇದರಿಂದ ನಿದ್ರೆಯಲ್ಲಿ ಮಕ್ಕಳು ಬೆಚ್ಚಿ ಬೀಳುತ್ತಾರೆ. ಇದು ಅವರ ನಿದ್ರೆಯನ್ನು ಕೆಡಿಸುತ್ತದೆ.
  • ಮಕ್ಕಳು ಸುಖವಾಗಿ ನಿದ್ರೆ ಮಾಡಲು ಅವರು ಮಲಗುವ ವಾತಾವರಣ ಅನುಕೂಲಕರವಾಗಿರಬೇಕು. ಅವರು ಮಲಗುವಂತಹ ಹಾಸಿಗೆ , ಅತಿಯಾದ ಶಬ್ದ, ರೂಂನ ತಾಪಮಾನ ಮಕ್ಕಳ ನಿದ್ರೆಗೆ ಭಂಗ ತರುತ್ತದೆಯಂತೆ. ಹಾಗಾಗಿ ಮಕ್ಕಳು ಮಲಗುವ ಕೋಣೆ ಆರಾಮದಾಯವಾಗಿರುವಂತೆ ನೋಡಿಕೊಳ್ಳಿ.
  • ಹಾಗೇ ಮಕ್ಕಳು ಮಲಗುವಾಗ ಅತಿಯಾಗಿ ಸಕ್ಕರೆಯುಕ್ತ ತಿಂಡಿಗಳನ್ನು ಅಥವಾ ಪಾನೀಯಗಳನ್ನು ಸೇವಿಸುವುದು ನಿದ್ರೆಗೆ ಅಡ್ಡಿಯನ್ನುಂಟುಮಾಡುತ್ತದೆಯಂತೆ. ಹಾಗಾಗಿ ಇವುಗಳನ್ನು ಕಡಿಮೆ ಮಾಡಿ. ಮಕ್ಕಳು ಮಲಗುವ ಮುನ್ನ ಇವುಗಳನ್ನು ನೀಡುವುದು ತಪ್ಪಿಸಿ.
  • ಮಕ್ಕಳಲ್ಲಿ ಕಂಡುಬರುವಂತಹ ಅಲರ್ಜಿ, ಉಸಿರಾಟದ ಸಮಸ್ಯೆಗಳು, ಮೈಕೈ ನೋವು ಮುಂತಾದ ದೈಹಿಕ ಅಸ್ವಸ್ಥಗಳಿಂದ ಅವರಿಗೆ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಕ್ಕಳ ದೈಹಿಕ ಸಮಸ್ಯೆಗೆ ಸೂಕ್ತವಾದ ಚಿಕಿತ್ಸೆ ನೀಡಿ.
  • ಮಕ್ಕಳಿಗೆ ಅತಿಯಾಗಿ ಓದಲು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಒತ್ತಾಯಿಸುವುದು ಮಕ್ಕಳಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದ ಅವರಿಗೆ ನಿದ್ರೆ ಬರುವುದಿಲ್ಲ. ಹಾಗಾಗಿ ಅವರಿಗೆ ಇಷ್ಟವಾದಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಹಾಯ ಮಾಡಿ.
  • ನಿದ್ರೆ ಮಕ್ಕಳ ಆರೋಗ್ಯಕ್ಕೆ ಉತ್ತಮ ನಿಜ. ಅಂದಮಾತ್ರಕ್ಕೆ ಅವರಿಗೆ ಹಗಲಿನಲ್ಲಿ ನಿದ್ರೆ ಮಾಡಿಸಬೇಡಿ. ಇದರಿಂದ ಅವರಿಗೆ ರಾತ್ರಿ ನಿದ್ರೆ ಬರುವುದಿಲ್ಲ.
  • ಸ್ಲೀಪ್ ಅಪ್ನಿಯ, ರೆಸ್ಟ್ ಲೆಸ್ ಲೆಗ್ಸ್ ಸಿಂಡ್ರೋಮ್, ನೈಟ್ ಟೆರರ್ಸ್  ಅಥವಾ ಸ್ಲೀಪ್ ವಾಕಿಂಗ್ ನಂತಹ ನಿದ್ರೆಗೆ ಸಂಬಂಧಪಟ್ಟ ಕಾಯಿಲೆಗಳು ನಿದ್ರೆಗೆ ಭಂಗವನ್ನುಂಟುಮಾಡುತ್ತವೆ. ಹಾಗಾಗಿ ಇವುಗಳಿಗೆ ಚಿಕಿತ್ಸೆ ನೀಡಲು ಮಕ್ಕಳ ತಜ್ಞರನ್ನು ಭೇಟಿ ಮಾಡಿ.
  • ಮಕ್ಕಳು ಹೆಚ್ಚಾಗಿ ತಮ್ಮ ಹೆತ್ತವರ ನಿದ್ರಾಶೈಲಿಯನ್ನು ಅನುಸರಿಸುತ್ತಾರೆ. ಪೋಷಕರು ಆರೋಗ್ಯಕರ ನಿದ್ರೆಯ ಅಭ್ಯಾಸವನ್ನು ರೂಢಿಸಿಕೊಂಡರೆ ಮಕ್ಕಳು ಅದನ್ನೇ ಅನುಸರಿಸುತ್ತಾರೆ.

ಇದನ್ನೂ ಓದಿ: Viral Video: ಶಾಲೆಯಲ್ಲಿ ಪಾಠ ಮಾಡುವ ಬದಲು ಫೇಶಿಯಲ್ ಮಾಡಿಕೊಂಡು ಸಿಕ್ಕಿಬಿದ್ದ ಪ್ರಿನ್ಸಿಪಾಲ್!

ಮಕ್ಕಳು ಸರಿಯಾಗಲಿಲ್ಲ ನಿದ್ರೆ ಮಾಡಲಿಲ್ಲ ಎಂದರೆ ಯಾವ ರೀತಿ ಆರೈಕೆ ಮಾಡಬೇಕು ಎಂಬುದರ ಬಗ್ಗೆ ಪೋಷಕರು ಸರಿಯಾಗಿ ತಿಳಿದುಕೊಂಡಿರಬೇಕು. ಇದರಿಂದ ಮಕ್ಕಳ ದೈಹಿಕ, ಮಾನಸಿಕ ಆರೊಗ್ಯವನ್ನು ಸುಧಾರಿಸಬಹುದು.

Continue Reading

ಲೈಫ್‌ಸ್ಟೈಲ್

Diabetic Control: ಕಾಡುವ ಮಧುಮೇಹ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ತಂತ್ರ

Diabetic Controle ಯಾವುದೇ ಸಭೆ ಸಮಾರಂಭಗಳಿಗೆ ಹೋದಾಗ ಪಾಯಸ, ಹೋಳಿಗೆ, ಲಾಡು ನೀಡುವಾಗ ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿಂದರೆ ಮಧುಮೇಹಿಗಳು ಮಾತ್ರ ಬಾಯಿ ಬಿಟ್ಟುಕೊಂಡು ನೋಡುತ್ತಾರೆ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸರಿಯಾದ ವಿಧಾನದಲ್ಲಿ ನಿಯಂತ್ರಿಸಿಕೊಳ್ಳಿ.

VISTARANEWS.COM


on

Diabetic Controle
Koo

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಧುಮೇಹ ಎಂದರೆ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದು. ಹಾಗಾಗಿ ಮಧುಮೇಹ ಸಮಸ್ಯೆ ಇದೆ ಎಂದಾಗ ಹಲವರಿಗೆ ಬೇಸರವಾಗುತ್ತದೆ. ಯಾಕೆಂದರೆ ಇದರಿಂದ ಸಿಹಿ ಪದಾರ್ಥಗಳನ್ನು ತಿನ್ನಲು ಆಗುವುದಿಲ್ಲ. ಯಾವುದೇ ಸಭೆ ಸಮಾರಂಭಗಳಿಗೆ ಹೋದಾಗ ಬಡಿಸುವ ಪಾಯಸ, ಹೋಳಿಗೆ ತಿಂದು ಎಲ್ಲರೂ ಬಾಯಿ ಚಪ್ಪರಿಸಿಕೊಂಡರೆ ಮಧುಮೇಹಿಗಳು ಮಾತ್ರ ಬಾಯಿ ಬಿಟ್ಟುಕೊಂಡು ನೋಡುತ್ತಾರೆ. ಈ ಸಮಸ್ಯೆಗಳಿಂದ ಪಾರಾಗಲು ಸುಲಭ ತಂತ್ರವಿದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Diabetic Controle) ನಿಯಂತ್ರಿಸಿಕೊಳ್ಳಬೇಕು. ಅದಕ್ಕಾಗಿ ಈ ಸಲಹೆಗಳನ್ನು ಪಾಲಿಸಿ.

  • ಆರೋಗ್ಯಕರ ಕೊಬ್ಬಿನ ಆಹಾರ ಸೇವನೆ: ನೀವು ಬೆಳಗ್ಗಿನ ಉಪಹಾರದಲ್ಲಿ ಬಾದಾಮಿ ಮತ್ತು ವಾಲ್ ನಟ್ಸ್ ನಂತಹ ನೆನೆಸಿದ ಬೀಜಗಳನ್ನು ಸೇವಿಸಿ. ಇವುಗಳಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಇನ್ಸುಲಿನ್ ಮಟ್ಟ ಸುಧಾರಿಸುತ್ತದೆ.
  1. ಬೆಳಗಿನ ಉಪಹಾರದಲ್ಲಿ ಪ್ರೋಟೀನ್ ಸೇವನೆ: ನಿಮ್ಮ ಬೆಳಗಿನ ಉಪಹಾರದಲ್ಲಿ ಪ್ರೋಟೀನ್ ಸಮೃದ್ಧವಾಗಿರುವ ಆಹಾರ ಸೇವಿಸಿ. ಪ್ರೋಟೀನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮತ್ತು ನೀವು ದಿನವಿಡೀ ಉತ್ಸಾಹದಿಂದ ಇರಬಹುದು.
  2. ಆ್ಯಪಲ್ ಸೈಡರ್ ವಿನೆಗರ್ ಸೇವನೆ : ಇದರಲ್ಲಿ ಅಸಿಟಿನ್ ಆಮ್ಲವಿದ್ದು, ಇದು ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹಾಗಾಗಿ ಊಟಕ್ಕೆ ಅರ್ಧ ಗಂಟೆಯ ಮೊದಲು ಆ್ಯಪಲ್ ಸೈಡರ್ ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ.
  3. ಮೆಗ್ನೀಸಿಯಂ ಭರಿತ ಆಹಾರ ಸೇವನೆ: ಆಹಾರದಲ್ಲಿ ಬಾಳೆಹಣ್ಣು, ಬಾದಾಮಿ, ಕೋಕೋ ಮತ್ತು ಹಸಿರು ಸೊಪ್ಪುಗಳನ್ನು ಸೇರಿಸಬೇಕು. ಇವುಗಳಲ್ಲಿ ಮೆಗ್ನೀಸಿಯಂ ಸಮೃದ್ಧವಾಗಿರುತ್ತದೆ. ಇದು ಜೀವಕೋಶಗಳಿಗೆ ಗ್ಲೂಕೋಸ್ ಅನ್ನು ಹೀರಿಕೊಳ್ಳುವಂತೆ ಉತ್ತೇಜಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ.
  4. ಊಟದ ಬಳಿಕ ವಾಕಿಂಗ್ : ಊಟವಾದ ತಕ್ಷಣ ನಿದ್ರೆ ಮಾಡಬಾರು. ಬದಲಾಗಿ ಊಟವಾದ ನಂತರ 10-15 ನಿಮಿಷ ಕಾಲ ಲಘು ವಾಕಿಂಗ್ ಮಾಡಬೇಕು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.
  5. ಸರಿಯಾದ ಪ್ರಮಾಣದಲ್ಲಿ ಊಟದ ಸೇವನೆ : ನೀವು ಮಧ್ಯಾಹ್ನದ ವೇಳೆ 12ರಿಂದ 2 ಗಂಟೆಯೊಳಗೆ ನಿಮ್ಮ ಹೊಟ್ಟೆ ತುಂಬುವಷ್ಟು ಊಟ ಮಾಡಿ. ಯಾಕೆಂದರೆ ಈ ಸಮಯದಲ್ಲಿ ಜೀರ್ಣಕ್ರಿಯೆ ವೇಗವಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತೇಜಿಸುತ್ತದೆ.
  6. ದಾಲ್ಚಿನ್ನಿ- ಗ್ರೀನ್ ಟೀ ಸೇವನೆ : ಸಂಜೆಯ ವೇಳೆ ಗ್ರೀನ್ ಟೀಗೆ ದಾಲ್ಚಿನ್ನಿಯನ್ನು ಬೆರೆಸಿ ಕುದಿಸಿ ಕುಡಿಯಿರಿ. ಈ ಮಿಶ್ರಣವು ಜೀರ್ಣಕ್ರೀಯೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.
  7. ರಾಗಿ ಸೇವನೆ : ನಿಮ್ಮ ಆಹಾರದಲ್ಲಿ ರಾಗಿ ಸೇರಿಸಿ. ಇದರಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ.
  8. ಸರಿಯಾಗಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ : ನೀವು ಅತಿಯಾಗಿ ಆಹಾರ ಸೇವಿಸುವುದನ್ನು ತಪ್ಪಿಸಿ. ಅದಕ್ಕಾಗಿ ನೀವು ಹೊಟ್ಟೆ 80% ತುಂಬುವವರೆಗೆ ತಿನ್ನಿ. ಇದು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಬೆಂಬಲಿಸುತ್ತದೆ.

ಇದನ್ನೂ ಓದಿ:Nestle Company: ಮಕ್ಕಳ ಜೀವದ ಜತೆ ನೆಸ್ಲೆ ಕಂಪನಿ ಚೆಲ್ಲಾಟ? ಸೆರೆಲಾಕ್‌ ಕುಡಿಸೋ ಮುನ್ನ ಎಚ್ಚರ!

Continue Reading
Advertisement
Farmers Protest
ದೇಶ4 mins ago

Farmers Protest: ರೈತರ ಪ್ರತಿಭಟನೆ; ಅಂಬಾಲಾ-ಅಮೃತಸರ ಮಾರ್ಗದ 54 ರೈಲು ಸಂಚಾರ ರದ್ದು

Vinesh Phogat
ಕ್ರೀಡೆ15 mins ago

Vinesh Phogat: ಖೇಲ್ ರತ್ನ ಪ್ರಶಸ್ತಿಯನ್ನು ಪಾದಚಾರಿ ಮಾರ್ಗದಲ್ಲಿ ತೊರೆದಿದ್ದ ವಿನೇಶ್ ಫೋಗಟ್​ಗೆ ಒಲಿದ ಒಲಿಂಪಿಕ್ಸ್​ ಟಿಕೆಟ್​

Dalit Student
ದೇಶ16 mins ago

Dalit Student: ದೇಶ, ರಾಮನ ವಿರೋಧ; ದಲಿತ ಪಿಎಚ್‌.ಡಿ ವಿದ್ಯಾರ್ಥಿಯ ಅಮಾನತು!

Apricot Benefits
ಆರೋಗ್ಯ30 mins ago

Apricot Benefits: ನಿಮಗೆ ಇಂತಹ ಸಮಸ್ಯೆಗಳಿವೆಯೇ?: ಹಾಗಾದರೆ ನಿತ್ಯವೂ ಆಪ್ರಿಕಾಟ್‌ ತಿನ್ನಿ!

Family health insurance
ಮನಿ ಗೈಡ್30 mins ago

Money Guide: ಕುಟುಂಬಕ್ಕಾಗಿ ಆರೋಗ್ಯ ವಿಮೆ; ಖರೀದಿ ಮುನ್ನ ತಿಳಿದಿರಲಿ ಕೆಲವು ವಿಚಾರ

Modi in Karnataka
ಪ್ರಮುಖ ಸುದ್ದಿ35 mins ago

Modi in Karnataka: ಪ್ರಧಾನಿ ಮೋದಿ ತೆರಳುವಾಗ ಚೆಂಬು ಪ್ರದರ್ಶನ; ನಲಪಾಡ್‌ ಸೇರಿ ಹಲವರು ವಶಕ್ಕೆ

Modi in Karnataka Govt turns tax city Bengaluru into tanker city and attacks girls too PM Narendra Modi
ಕರ್ನಾಟಕ1 hour ago

Modi in Karnataka: ಟ್ಯಾಕ್ಸ್ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿ ಮಾಡಿದ ಸರ್ಕಾರ, ಹೆಣ್ಣು ಮಕ್ಕಳ ಮೇಲೂ ಹಲ್ಲೆ: ಮೋದಿ ವಾಗ್ದಾಳಿ

Kalki 2898 AD
ಸಿನಿಮಾ1 hour ago

Kalki 2898 AD: ನಾಳೆ ಮಹತ್ವದ  ಅಪ್‌ಡೇಟ್‌ ನೀಡಲಿದೆ ಪ್ರಭಾಸ್‌ ಅಭಿನಯದ ʼಕಲ್ಕಿ 2898 ಎಡಿʼ ಚಿತ್ರತಂಡ; ಹೊಸ ರಿಲೀಸ್‌ ದಿನಾಂಕ ಘೋಷಣೆ?

Lok Sabha Election
ದೇಶ1 hour ago

Lok Sabha Election: ನಿನ್ನೆ ಈ ಗ್ರಾಮದ ಒಬ್ಬರೂ ಮತ ಹಾಕಲಿಲ್ಲ; ಇದ್ದಿದ್ದು ಯಾರ ಭಯ?

Ashutosh Sharma
ಕ್ರೀಡೆ1 hour ago

Ashutosh Sharma: ಖಿನ್ನತೆಗೆ ಒಳಗಾಗಿದ್ದ ಬಿಗ್​ ಹಿಟ್ಟರ್​ ಅಶುತೋಷ್‌ ಶರ್ಮ; ಕ್ರಿಕೆಟ್​ ಜರ್ನಿಯೇ ರೋಚಕ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 hours ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 hours ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20245 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ7 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ8 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ14 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ2 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ4 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ5 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

ಟ್ರೆಂಡಿಂಗ್‌