Site icon Vistara News

Doddaballapur Election Results : ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಯ ಧೀರಜ್​​ಗೆ ಗೆಲುವು

Pulakeshinagar Election Results Dheeraj Muniraju Winner

#image_title

ದೊಡ್ಡಬಳ್ಳಾಪುರ : ಬೆಂಗಳೂರು ನಗರಕ್ಕೆ ಅಂಟಿಕೊಂಡಿರುವ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಯ ಧೀರಜ್​ ಮುನಿರಾಜು (85144) ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿಕಾಂಗ್ರೆಸ್​ನ ವೆಂಕಟರಮಣಯ್ಯ (53391) ಅವರಿಗಿಂತ 31753 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಟಿ ವೆಂಕಟರಮಣಯ್ಯನವರು ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಆಗಲೂ ಅವರಿಗೆ ಜೆಡಿಎಸ್‌ನ ಮುನೇಗೌಡ ಅವರೇ ಸಮೀಪದ ಪ್ರತಿಸ್ಪರ್ಧಿಯಾಗಿದ್ದರು.

ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ನಾಲ್ಕು ಬಾರಿ ಶಾಸಕರಾಗಿದ್ದ ಈಡಿಗ ಸಮುದಾಯದ ಆರ್ ಎಲ್ ಜಾಲಪ್ಪ ಹಲವು ಸರ್ಕಾರಗಳಲ್ಲಿ ಪ್ರಭಾವಿ ಸಚಿವರಾಗಿದ್ದರು. ಹಿಂದುಳಿದ ವರ್ಗಗಳ ನಾಯಕನೆಂದು ಹೆಸರು ಪಡೆದಿದ್ದ ಜಾಲಪ್ಪ, ಒಂದು ಕಾಲದಲ್ಲಿ ರಾಜ್ಯದ ಮುಖ್ಯಮಂತ್ರಿಯೂ ಆಗುತ್ತಾರೆ ಎನ್ನುವ ಮಾತುಗಳಿದ್ದವು. ಆದರೆ, ರಶೀದ್ ಕೊಲೆ ಪ್ರಕರಣದಲ್ಲಿ ಸಿಲುಕಿ ಮಂತ್ರಿ ಪದವಿಯನ್ನೂ ಕಳೆದುಕೊಂಡ ಜಾಲಪ್ಪ, ನಂತರ ನಿಧಾನಕ್ಕೆ ತಮ್ಮ ಖದರ್​ ಕಳೆದುಕೊಂಡರು.

ಇದನ್ನೂ ಓದಿ : Nelamangala Election Results : ನೆಲಮಂಗಲವನ್ನು ತೆಕ್ಕೆಗೆ ತೆಗೆದುಕೊಂಡ ಕಾಂಗ್ರೆಸ್​

ಜಾತಿವಾರು ಅಂದಾಜಿನಂತೆ ದೊಡ್ಡಬಳ್ಳಾಪುರದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ 46500, ಒಕ್ಕಲಿಗರು ಸುಮಾರು 43,000, ಲಿಂಗಾಯತರು 26278, ಕುರುಬರು ಮತ್ತು ದೇವಾಂಗದವರು ತಲಾ 15000 ಇದ್ದಾರೆ.

Exit mobile version