Site icon Vistara News

Amit Shah: ಭಾವುಕರಾಗಿ ಇಂದ್ರಮ್ಮ ಎಂದು ವೋಟು ಹಾಕಬೇಡಿ, ಆ ಕಾಲ ಮುಗಿಯಿತು; ಸಚಿವ ಆನಂದ್‌ ಸಿಂಗ್

Anand Singh accuses Congress of not having courage Karnataka Election 2023 updates

ಬಳ್ಳಾರಿ: ಭಾವುಕರಾಗಿ ಇಂದ್ರಮ್ಮ ಎಂದು ವೋಟು ಹಾಕಬೇಡಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಎನ್ನುವ ಕಾಲ ಈಗ ಮುಗಿದು ಹೋಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನದಿಂದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಚಳಿಜ್ವರ ಆರಂಭವಾಗಿದೆ. ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡಲು ಅಮಿತ್ ಶಾ (Amit Shah) ಅವರಿಂದ ಸಾಧ್ಯವಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಳ್ಳಾರಿ-ವಿಜಯನಗರ ಅಖಂಡ ಜಿಲ್ಲೆಯಲ್ಲಿ 10 ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಈ ಸಮಾವೇಶದ ಮೂಲಕ ಶಾ ಸಂದೇಶ ಕೊಡುತ್ತಾರೆ ಎಂದು ಸಚಿವ ಆನಂದ್ ಸಿಂಗ್ ಹೇಳಿದರು. ‌

ಸಂಡೂರಿನಲ್ಲಿ ಬಿಜೆಪಿ ಆಯೋಜಿಸಿರುವ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತವನ್ನು ನಮ್ಮ ತಾತ, ತಂದೆ ನಾವು ನೋಡಿದ್ದೇವೆ. ದೇಶಕ್ಕೆ ಮುತ್ತಿನಂತಹ ವ್ಯಕ್ತಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ದೇಶಕ್ಕೆ ಸಿಕ್ಕಿದ್ದಾರೆ. 2014ರ ಪೂರ್ವದಲ್ಲಿ ಕಾಂಗ್ರೆಸ್‌ನವರು ತಮಗಿಷ್ಟ ಬಂದಂತೆ ಆಡಳಿತ ನಡೆಸಿದ್ದಲ್ಲದೆ, ಯೋಜನೆಗಳಿಗೆ ಅವರ ಮನೆತನದ ಹೆಸರುಗಳನ್ನು ಇಟ್ಟಿದ್ದಾರೆ ಎಂದು ಕಿಡಿಕಾರಿದರು.

ಪ್ರಜಾಧ್ವನಿಯನ್ನು ಉಡುಗಿಸಿ ದಬ್ಬಾಳಿಕೆಯಿಂದ ಸರ್ಕಾರವನ್ನು ನಡೆಸಿದ್ದಾರೆ. ಈಗ ಪ್ರಜಾಧ್ವನಿ ಎಂದು ಹೆಸರು ಇಟ್ಟುಕೊಂಡು ಯಾತ್ರೆಯನ್ನು ಆರಂಭಿಸಿದ್ದಾರೆ. ದೇಶದ ಆರ್ಥಿಕ, ಶಿಕ್ಷಣದಲ್ಲಿ ಸುಧಾರಣೆಯನ್ನು ಪ್ರಧಾನಿ ಮೋದಿ ಅವರು ಮಾಡುತ್ತಿದ್ದಾರೆ. ನಮ್ಮ ಧ್ವನಿಯನ್ನು ನಿಲ್ಲಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಪಾರ್ಲಿಮೆಂಟ್‌ನಲ್ಲಿ ಮೋದಿ ಹೇಳಿದ್ದಾರೆ ಎಂದು ತಿಳಿಸಿದರು.

ಸಂಡೂರಿನಲ್ಲಿ ವಿರೋಧ ಪಕ್ಷದವರಿಗೆ ಚಳಿಜ್ವರ ಬರಬೇಕು. ಈ ನಿಟ್ಟಿನಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಮಲದ ಹೂ ಅರಳಿಸಲು ಪ್ರತಿಯೊಬ್ಬರು ಪಣ ತೊಡಬೇಕು. ಗಣಿನಾಡಿನ ರಾಜಧಾನಿ ಸಂಡೂರಾಗಿದೆ. ಈ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ನಾವು ಕಂಡಿಲ್ಲ. ಇಲ್ಲಿ ಬಿಡುಗಡೆಯಾದ ಹಣ ಎಲ್ಲಿ ಹೋಗುತ್ತದೆ ಎಂಬುದೇ ಗೊತ್ತಿಲ್ಲ. ಪ್ರಜಾಧ್ವನಿ ಮೂಲಕ ಕಾಂಗ್ರೆಸ್‌ನವರು ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ತಮ್ಮದು ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: Karnataka Election 2023: ಬಗೆಹರಿಯದ ಹಾಸನ ಜೆಡಿಎಸ್‌ ಟಿಕೆಟ್‌ ಗೊಂದಲ; ಸರಣಿ ಸಭೆಗೆ ಮುಂದಾದ ರೇವಣ್ಣ ಹೇಳಿದ್ದೇನು?

ಸೇನಾ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಅಮಿತ್ ಶಾ

ಬಿಜೆಪಿ ಸಮಾವೇಶದ ಹಿನ್ನೆಲೆಯಲ್ಲಿ ಸಂಡೂರಿಗೆ ಸೇನಾ ಹೆಲಿಕಾಪ್ಟರ್‌ ಮೂಲಕ ಚುನಾವಣಾ ಚಾಣಕ್ಯ ಅಮಿತ್ ಶಾ ಆಗಮಿಸಿದರು. ಈ ವೇಳೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಳ್ಳಾರಿ ಸಂಸದ ದೇವೇಂದ್ರಪ್ಪ, ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಮತ್ತಿತರ ಮುಖಂಡರು ಸ್ವಾಗತಿಸಿದರು.

Exit mobile version