ಚಿಕ್ಕೋಡಿ: ಮದುವೆಯಾಗಿ ಕೈ ಕೊಟ್ಟ ಹೆಂಡತಿ ಹಾಗೂ ಆಕೆಯ ಪ್ರಿಯತಮನನ್ನು ಮಾಜಿ ಪತಿ ಕೊಚ್ಚಿ ಬರ್ಬರವಾಗಿ ಕೊಲೆ (Double Murder) ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಹೀನಾಕೌಸರ್ ಸುದಾರಾಣೆ (19), ಯಾಸಿನ್ ಬಾಗೊಡೆ (21) ಕೊಲೆಯಾದವರು. ತೌಫಿಕ್ ಕ್ಯಾಡಿ (24) ಕೊಲೆ ಮಾಡಿದ ಆರೋಪಿ. ಹಲ್ಲೆ ವೇಳೆ ಬಿಡಿಸಲು ಬಂದಿದ್ದ ಅಮಿನಾಬಾಯಿ ಬಾಗೂಡ, ಹಾಗೂ ಮಾವ ಮುಸ್ತಫಾ ಮುಲ್ಲಾ ಮೇಲೆ ಆರೋಪಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅವರನ್ನು ಮಿರಜ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
4 ತಿಂಗಳ ಹಿಂದೆ ಹೀನಾಕೌಸರ್ ಸುದಾರಾಣೆ ಹಾಗೂ ತೌಫಿಕ್ ಮದುವೆಯಾಗಿತ್ತು. ಆದರೆ, ಹೀನಾ ಮದುವೆಯಾದ ಒಂದೇ ತಿಂಗಳಿಗೆ ಯುವಕ ಯಾಸಿನ್‌ನ್ನು ಪ್ರೀತಿಸಿ ಆತನೊಂದಿಗೆ ಓಡಿ ಹೋಗಿದ್ದಳು. ಒಂದೂವರೆ ತಿಂಗಳ ಬಳಿಕ ಸಮಾಜದ ಹಿರಿಯ ಸಮ್ಮುಖದಲ್ಲಿ ಗ್ರಾಮಸ್ಥರು ರಾಜಿ ಪಂಚಾಯ್ತಿ ಮಾಡಿದ್ದರು. ಬಳಿಕ ತೌಫಿಕ್‌ನಿಂದ ಹೀನಾ ದೂರವಾಗಿದ್ದಳು.
ನಂತರ ಹಿರಿಯರು ಯಾಸಿನ್ ಜೊತೆ ಹೀನಾಕೌಸರ್ ಮದುವೆ ಮಾಡಿಸಿದ್ದರು. ಆದರೆ, ಮಂಗಳವಾರ ಸಂಜೆ ಕೋಪದಲ್ಲಿ ಮಾಜಿ ಪತಿ ತೌಫಿಕ್, ಹೀನಾಕೌಸರ್ ಹಾಗೂ ಪ್ರಿಯತಮ ಯಾಸಿನ್ ಇದ್ದ ಮನೆಗೆ ತೆರಳಿ ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಪೊಲೀಸ್ ಠಾಣೆಗೆ ಹೋಗುವುದಾಗಿ ಹೇಳಿ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ತೌಫಿಕ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಹಂತಕನ ಪತ್ತೆಗೆ ಎರಡು ತಂಡಗಳನ್ನು ರಚನೆ ಮಾಡಲಾಗಿದೆ.
ಇದನ್ನೂ ಓದಿ | POCSO Case : ಕುಂಟೆಬಿಲ್ಲೆ ಆಟವಾಡುತ್ತಿದ್ದ ಬಾಲಕಿಯನ್ನು ಎಳೆದೊಯ್ದು ರೇಪ್; ಕುಡುಕ ಯುವಕನ ಕೃತ್ಯ
ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಟ್ರಾವೆಲ್ಸ್ ಮಾಲೀಕ ಸಾವು
ಕಲಬುರಗಿ: ಚಲಿಸುತ್ತಿರುವ ರೈಲಿನಿಂದ ಬಿದ್ದು ವ್ಯಕ್ತಿ (Train Accident) ಮೃತಪಟ್ಟಿದ್ದಾರೆ. ಅಣವಿರಯ್ಯ ಪ್ಯಾಟಿ ಮನಿ ಮೃತ ದುರ್ದೈವಿ. ಕಲಬುರಗಿಯ ಶಹಾಬಾದ್ ಹಾಗೂ ರೆವೂರ್ ಮಾರ್ಗ ಮಧ್ಯೆ ಈ ದುರ್ಘಟನೆ (Kalaburagi News) ನಡೆದಿದೆ.
ಅಣವಿರಯ್ಯ ಅವರು ಜಿಲ್ಲಾ ಪಂಚಾಯತ್ ಚುನಾವಣೆಯ ಪರಾಜಿತ ಅಭ್ಯರ್ಥಿಯಾಗಿದ್ದರು. ಚಿಂಚೊಳ್ಳಿ ತಾಲೂಕಿನ ಕೊಡ್ಲಿ ಗ್ರಾಮದ ನಿವಾಸಿ ಆಗಿರುವ ಅಣವಿರಯ್ಯ ಪ್ಯಾಟಿಮನಿ, ಕಲಬುರಗಿಯಲ್ಲಿ ಟ್ರಾವೆಲ್ಸ್ ಏಜೆನ್ಸಿಯನ್ನು ನಡೆಸುತ್ತಿದ್ದರು.
ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಾಡಿ ರೈಲ್ವೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೇಗವಾಗಿ ಹೋಗುತ್ತಿದ್ದ ರೈಲಿನಿಂದ ಬಿದ್ದ ರಭಸಕ್ಕೆ ಅಣವಿರಯ್ಯ ಎಡಗೈ ಪೂರ್ತಿ ನಜ್ಜುಗಜ್ಜಾಗಿತ್ತು. ತಲೆಗೆ ಗಂಭೀರವಾಗಿ ಪೆಟ್ಟಾದ ಕಾರಣಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Self Harming : ವಿಷ ಕುಡಿದು ಫ್ಯಾನ್‌ಗೆ ನೇಣು ಹಾಕಿಕೊಂಡ ಬಸ್ ಕಂಡಕ್ಟರ್
ಉಳುಮೆ ಮಾಡುವಾಗ ಪಲ್ಟಿ ಹೊಡೆದ ಟ್ರ್ಯಾಕ್ಟರ್; ರೈತ ಸ್ಥಳದಲ್ಲೇ ಸಾವು
ಬೆಂಗಳೂರು: ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು (Road Accident) ಸಂಭವಿಸಿದ್ದು, ಮೂವರು ಅಸುನೀಗಿದ್ದರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಮಗುಚಿ ಬಿದ್ದು, ರೈತರೊಬ್ಬರು ಮೃತಪಟ್ಟಿದ್ದಾರೆ. ಮಾದಪ್ಪ (58) ಮೃತ ದುರ್ದೈವಿ. ಉಳುಮೆ ಮಾಡುವಾಗ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಮಗುಚಿ ಬಿದ್ದಿದೆ. ಟ್ರ್ಯಾಕ್ಟರ್ ಅಡಿ ಸಿಲುಕಿದ ಮಾದಪ್ಪ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.