Site icon Vistara News

Double murder: ಅವಳಿ ಮಕ್ಕಳನ್ನೇ ಉಸಿರುಗಟ್ಟಿಸಿ ಹತ್ಯೆ ಮಾಡಿದ ತಂದೆ; ಕಾರಲ್ಲೇ ಶವ ಇಟ್ಟಿದ್ದ ಪಾಪಿ

davanagere murder case

ದಾವಣಗೆರೆ: ದಾವಣಗೆರೆ ನಗರದ ಆಂಜನೇಯ ಮಿಲ್ ಬಡಾವಣೆಯ‌ಲ್ಲಿ ವಾಸವಾಗಿದ್ದ ಕೆಮಿಕಲ್‌ ಎಂಜಿನಿಯರ್‌ ಒಬ್ಬ ತನ್ನ ಇಬ್ಬರು ಅವಳಿ‌ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ (Double murder) ಮಾಡಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಅದ್ವೈತ್ (04) ಹಾಗೂ ಅನ್ವೀತ್ (04) ಕೊಲೆಯಾದ ಮಕ್ಕಳು. ಅಮರ್‌ ಕಿತ್ತೂರು (35) ಮಕ್ಕಳನ್ನು ಕೊಂದ ಪಾಪಿ ತಂದೆಯಾಗಿದ್ದಾನೆ. ಪತ್ನಿ ಜಯಲಕ್ಷ್ಮಿ ತವರಿಗೆ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಬುಧವಾರ ರಾತ್ರಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಚಳಗೆರೆ ಟೋಲ್ ಗೇಟ್‌ ಮೂಲಕ ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಅಮರ್‌, ಅವರ ಬಾಯಿಗೆ ಟಿಕ್ಸೋ ಟೇಪ್ ಹಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಅಮರ್‌ ಕಿತ್ತೂರ ಮೂಲತಃ ಗೋಕಾಕದ ನಿವಾಸಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಹರಿಹರದ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಕೆಮಿಕಲ್ ಎಂಜಿನಿಯರ್‌ ಆಗಿರುವ ಅಮರ್‌ ಏಕೆ ಈ ಕೃತ್ಯ ಎಸಗಿದ್ದಾನೆಂಬುದು ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ: Karnataka Politics: ಬಿ.ಎಸ್‌. ಯಡಿಯೂರಪ್ಪ ಮನೆಗೆ ಡಿ.ಕೆ. ಶಿವಕುಮಾರ್‌ ದಿಢೀರ್‌ ಭೇಟಿ: ಗೇಟಿಗೆ ಬಂದು ಸ್ವಾಗತಿಸಿದ ಮಾಜಿ ಸಿಎಂ

ಪತ್ನಿ ತವರಿಗೆ ಹೋಗಿದ್ದರು. ಆದರೆ, ಮನೆಯಲ್ಲಿ ತಾಯಿ ಇದ್ದರು. ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಕರೆದೊಯ್ದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಮಕ್ಕಳ ಶವವನ್ನು ಕಾರಿನಲ್ಲಿಯೇ ತಂದಿದ್ದ. ಮಕ್ಕಳ ಸಾವಿನ ಬಗ್ಗೆ ಸ್ಥಳೀಯರಿಗೆ ಸಂಶಯ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ತನಿಖೆ ವೇಳೆ ತಾನೇ ಮಕ್ಕಳನ್ನು ಕೊಲೆ ಮಾಡಿದ್ದಾಗಿ ಅಮರ್‌ ಒಪ್ಪಿಕೊಂಡಿದ್ದಾನೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಕುಟುಂಬ ಸದಸ್ಯರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

Road Accident: ಖಾನಾಪುರದಲ್ಲಿ ಬಸ್‌ಗೆ ಗುದ್ದಿದ ಬೈಕ್; ಮೂವರು ಗಂಭೀರ, ಒಬ್ಬ ಸಾವು!

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗೊಲ್ಲಿಹಳ್ಳಿ‌ ಗ್ರಾಮದ ಬಳಿ ಬೈಕ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ (Road Accident) ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರಿಗೆ ಭಾರಿ ಪೆಟ್ಟಾಗಿತ್ತು. ಈ ವೇಳೆ ಇಬ್ಬರ ಕಾಲುಗಳು ತುಂಡಾಗಿ ರಸ್ತೆ ಮೇಲೆ ಬಿದ್ದಿವೆ. ಘಟನೆ ನಡೆದು ಒಂದು ಗಂಟೆಯಾದರೂ ಆಂಬ್ಯುಲೆನ್ಸ್‌ ಬಾರದಿದ್ದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಒಬ್ಬರು ಮೃತಪಟ್ಟಿದ್ದಾರೆ.

ಯಲ್ಲಪ್ಪ ವಣ್ಣೂರ,‌ ಪಲ್ಲವಿ ವಣ್ಣೂರ, ಐಶ್ವರ್ಯ ವಣ್ಣೂರ ಭೀಮಪ್ಪ ವಣ್ಣೂರ ಗಂಭೀರವಾಗಿ ಗಾಯಗೊಂಡಿದ್ದರು. ಇವರಲ್ಲಿ ಒಬ್ಬ ಹೆಣ್ಣುಮಗಳ ಕಾಲು ಸಹ ತುಂಡಾಗಿದೆ. ಗಾಯಗೊಂಡು ಒಂದು ಗಂಟೆ ನರಳಾಡಿದರೂ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್‌ ಸ್ಥಳಕ್ಕೆ ಬಂದಿರಲಿಲ್ಲ. ಕೊನೆಗೆ ತೀವ್ರವಾಗಿ ಗಾಯಗೊಂಡಿದ್ದ ಒಬ್ಬರನ್ನು ಕಾರಲ್ಲಿ ಕರೆದೊಯ್ಯಲಾಯಿತು.

ಒಂದು ಗಂಟೆ ತಡವಾಗಿ ಸ್ಥಳಕ್ಕೆ ಬಂದ ಆಂಬ್ಯುಲೆನ್ಸ್‌

ಸ್ಥಳಕ್ಕೆ ಆಂಬ್ಯುಲೆನ್ಸ್‌ ಒಂದು ಗಂಟೆ ತಡವಾಗಿ ಬಂತು. ಕೂಡಲೇ ಉಳಿದ ಮೂವರು ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಸ್ಥಳೀಯರು ಸಾಗಿಸಿದರು. ಬೈಕ್‌ನಲ್ಲಿದ್ದ ನಾಲ್ವರೂ ಗಂಭೀರವಾಗಿದ್ದು, ನಾಲ್ವರನ್ನೂ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಪಘಾತದಲ್ಲಿ ಗಾಯಗೊಂಡವರಲ್ಲಿ ಕಡತನಬಾಗೇವಾಡಿ ನಿವಾಸಿ ಯಲ್ಲಪ್ಪ ವಣ್ಣೂರ (25) ಮೃತಪಟ್ಟಿದ್ದಾರೆ. ಮೂವರಿಗೆ ಐಸಿಯುದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ: Jet crashes: ಚಾಮರಾಜನಗರದಲ್ಲಿ ಜೆಟ್ ಪತನ; ಪ್ಯಾರಾಚೂಟ್‌ ಮೂಲಕ ಪ್ರಾಣ ಉಳಿಸಿಕೊಂಡ ಇಬ್ಬರು ಪೈಲೆಟ್‌

ಶಿರಸಿಯಿಂದ ಬೆಳಗಾವಿಯತ್ತ ಕೆಎಸ್‌ಆರ್‌ಟಿಸಿ ಬಸ್ ಬರುತ್ತಿತ್ತು. ಕರತನಬಾಗೇವಾಡಿ ಗ್ರಾಮದಿಂದ ಗಸ್ಟೊಳ್ಳಿ ಗ್ರಾಮಕ್ಕೆ ಬೈಕ್‌ನಲ್ಲಿ ಇವರೆಲ್ಲರೂ ಬರುತ್ತಿದ್ದರು. ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಬಸ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ನಂದಘಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂದಘಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

Exit mobile version