Site icon Vistara News

Dowry harassment | ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ; ಆತ್ಮಹತ್ಯೆ ಅಲ್ಲ, ಕೊಲೆಯೆಂದು ಪೋಷಕರ ಆರೋಪ

ಮಂಡ್ಯ: ಇಲ್ಲಿನ ಮಳವಳ್ಳಿ ತಾಲೂಕಿನ ಮೇಗಳಾಪುರ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ ಆಗಿದೆ. ಹನಕೆರೆ ಗ್ರಾಮದ ರಮ್ಯ (24) ಮೃತ ದುರ್ದೈವಿ. ರಮ್ಯಾ ಐದು ವರ್ಷಗಳ ಹಿಂದೆ ಮೇಗಳಾಪುರದ ಕುಮಾರ್ ಎಂಬಾತನೊಂದಿಗೆ ವಿವಾಹ ಆಗಿತ್ತು. ಮದುವೆ ಸಮಯದಲ್ಲಿ ಒಂದು ಲಕ್ಷ ನಗದು ಹಾಗೂ 150 ಗ್ರಾಂ ಚಿನ್ನಾಭರಣವನ್ನು ವರದಕ್ಷಿಣೆ (Dowry harassment) ಆಗಿ ಕುಮಾರ್‌ ಪಡೆದಿದ್ದಂತೆ. ಹೆಚ್ಚಿನ ವರದಕ್ಷಿಣೆ ತರುವಂತೆ ರಮ್ಯಾಗೆ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆಕೆಯನ್ನು ಪತಿ ಹಾಗೂ ಅತ್ತೆ ಪುಟ್ಟಗೌರಮ್ಮ, ಸಹೋದರಿಯರು ಸೇರಿ ಕೊಲೆ ಮಾಡಿ ಬಳಿಕ ನೇಣಿಗೆ ಹಾಕಿದ್ದಾರೆ ಎಂದು ರಮ್ಯಾಳ ಪೋಷಕರು ಆರೋಪಿಸಿದ್ದಾರೆ. ರಮ್ಯಾಳ ಪತಿ, ಅತ್ತೆ ಸೇರಿ 6 ಜನರ ವಿರುದ್ಧ ಹಲಗೂರು ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಐಪಿಸಿ ಸೆಕ್ಷನ್ 302, 304 ಹಾಗೂ ವರದಕ್ಷಿಣೆ ಕಿರುಕುಳ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ | Road Accident | ಹೆಬ್ರಿ ಕರಿಯಾಲು ಕ್ರಾಸ್‌ ಬಳಿ ಕಾರು ಪಲ್ಟಿ; ಇಬ್ಬರು ಗಂಭೀರ

Exit mobile version