ಬೆಂಗಳೂರು: ಡಾ. ಸಿ.ಎನ್. ಮಂಜುನಾಥ್ (Dr C N Manjunath) ಅವರು ಜಯದೇವ ಹೃದ್ರೋಗ ಆಸ್ಪತ್ರೆಗೆ (Jayadeva Heart Hospital) ಅಮೂಲ್ಯ ಕೊಡುಗೆ ನೀಡಿದ್ದಾರೆ. ನಾಡಿನ ಪ್ರತಿಷ್ಠಿತ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ ಡಾಕ್ಟರ್ ಸಿ.ಎನ್. ಮಂಜುನಾಥ್ ಅವರ ಸೇವೆ ಅಮೂಲ್ಯ.
ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರನ್ನಾಗಿ ಅವರನ್ನು ಮುಂದುವರಿಸಬೇಕು ಎನ್ನುವುದು ಬಹುಜನರ ಬೇಡಿಕೆಯಾಗಿತ್ತು. ರಾಜ್ಯ ಸರ್ಕಾರ ಈಗ ಅವರ ಸೇವೆಯನ್ನು ಮುಂದುವರಿಸಿದ್ದು, ಇದು ಅಭಿನಂದನೀಯ. ರಾಜ್ಯ ಸರ್ಕಾರ ಡಾ. ಮಂಜುನಾಥ್ ಅವರಿಗೆ ಉನ್ನತ ಶ್ರೇಣಿಯ ಸ್ಥಾನಮಾನ ನೀಡಿ ಅವಕಾಶ ವಂಚಿತ ಅಶಕ್ತ ಹೃದ್ರೋಗಿಗಳಿಗೆ ಆಸರೆಯಾಗಿ ಹೃದಯ ಮಿಡಿತವನ್ನು ರಕ್ಷಣೆ ಮಾಡಲು ಮುಂದೆಯೂ ಅವಕಾಶ ಒದಗಿಸಬೇಕು.
ಪ್ರಪಂಚದ ಯಾವುದೇ ಖಾಸಗಿ ಆಸ್ಪತ್ರೆಯ ವ್ಯವಸ್ಥೆಯನ್ನು ಮೀರಿಸುವ, ʼಮೊದಲು ಆರೈಕೆ ನಂತರ ಪಾವತಿʼ ನೀತಿಯನ್ನು ಅವರು ಪಾಲಿಸುತ್ತಿದ್ದಾರೆ. ಇದರಿಂದ ಲಕ್ಷಾಂತರ ಹೃದಯ ರೋಗಿಗಳಿಗೆ ಭಾರಿ ಉಪಕಾರವಾಗಿದೆ. ಡಾ. ಮಂಜುನಾಥ್ ಅವರು ಇಎಸ್ಐ ಆಸ್ಪತ್ರೆ, ಕೆಸಿ ಜನರಲ್ ಆಸ್ಪತ್ರೆ, ಮೈಸೂರು, ಬೀದರ್‌ನಂಥ ಹಿಂದುಳಿದ ಜಿಲ್ಲೆಗಳ ಆಸ್ಪತ್ರೆಗಳಲ್ಲೂ ಶಾಖೆಗಳನ್ನು ವಿಸ್ತರಿಸಿ ನಾಡಿನ ಆರೋಗ್ಯ ಕ್ಷೇತ್ರಕ್ಕೆ ನೆರವಾಗುತ್ತಿದ್ದಾರೆ. ಅಂತಹ ಪರಿಣಿತರ ಶುದ್ಧ ಹಸ್ತ ಆಡಳಿತ ಧುರೀಣರನ್ನು ನಮ್ಮೊಂದಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಉಳಿಸಿಕೊಂಡು ಅವರ ಪರಿಣಿತಿಯನ್ನು ಸಾಮಾನ್ಯ ಜನರಿಗೆ ಒದಗಿಸುವ ಅವಶ್ಯಕತೆ ಮುಂದೆಯೂ ಇದೆ. ರಾಜ್ಯ ಸರ್ಕಾರ ಈ ಸಂಗತಿ ಅರಿತು, ಜನಸಾಮಾನ್ಯರ ಬೇಡಿಕೆಗಳಿಗೆ ಸ್ಪಂದಿಸಬೇಕು.
ಇದನ್ನೂ ಓದಿ: Gruha lakshmi scheme : ಗೃಹಲಕ್ಷ್ಮಿ ನೋಂದಣಿಗೆ Starting trouble; ಗೊಂದಲ ಬೇಡ, ಈ ನಿಯಮ ಪಾಲಿಸಿ
(ವರದಿ – ಎಂ. ನರಸಿಂಹ, ಸಂಸ್ಥಾಪಕ ಗೌರವ ಕಾರ್ಯದರ್ಶಿ, ಉದಯಭಾನು ಕಲಾಸಂಘ ಬೆಂಗಳೂರು)
ಪ್ರಿಯ ಓದುಗರೇ,
ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ-ಸೂಚನೆ, ನಾಗರಿಕ ಸಮಸ್ಯೆ ಇತ್ಯಾದಿ ಸಂಗತಿಗಳನ್ನು ಹೇಳಿಕೊಳ್ಳಲು ‘ವಿಸ್ತಾರʼದಲ್ಲಿ ನಿಮಗೆ ಮುಕ್ತ ಅವಕಾಶ ಇದೆ. ಸಾಂದರ್ಭಿಕ ಲೇಖನಗಳನ್ನೂ ನೀವು ಬರೆದು ಕಳುಹಿಸಬಹುದು. ಬರಹದ ಜತೆ ನಿಮ್ಮದೊಂದು ಫೋಟೊ ಕೂಡ ಇರಲಿ.
ನಮ್ಮ ಇಮೇಲ್ ವಿಳಾಸ: janasamparka@vistaranews.com