Site icon Vistara News

ಬೆಂಗಳೂರು ವಿವಿಗೆ ಡಾ ಜಯಕರ ಶೆಟ್ಟಿ, ದಾವಣಗೆರೆ ವಿವಿಗೆ ಡಾ. ಕುಂಬಾರ್‌ ಕುಲಪತಿಗಳಾಗಿ ನೇಮಕ

ಕುಲಪತಿ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಡಾ ಜಯಕರ ಶೆಟ್ಟಿ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಡಾ.ಕುಂಬಾರ್ ಬಸವಂತಪ್ಪ ದೊಡ್ಡಮಲ್ಲಪ್ಪ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ರಾಜಭವನದಿಂದ ಅಧಿಸೂಚನೆ ಹೊರಬಿದ್ದಿದೆ.

ಡಾ ಜಯಕರ ಶೆಟ್ಟಿ ಅವರ ಸೋಮವಾರವೇ ಪ್ರಭಾರ ಕುಲಪತಿ ಪ್ರೊ. ಸಿಂಥಿಯಾ ಮೆನೇಜಸ್ ಅವರಿಂದ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕುಲಸಚಿವರಾದ ಪ್ರೊ. ಎಂ. ಕೊಟ್ರೇಶ್, ಪ್ರೊ. ಜೆ.ಟಿ. ದೇವರಾಜು ಮತ್ತು ಸಿಂಡಿಕೇಟು ಸದಸ್ಯರುಗಳು ಉಪಸ್ಥಿತರಿದ್ದರು.

ಈ ಎರಡು ವಿಶ್ವವಿದ್ಯಾಲಯಗಳಲ್ಲೂ ಕುಲಪತಿ ಸ್ಥಾನ ತೆರವಾಗಿ ನಾಲ್ಕು ತಿಂಗಳಿಗೂ ಹೆಚ್ಚು ಸಮಯವಾಗಿತ್ತು. ಹೀಗಾಗಿ ಕುಲಪತಿ ನೇಮಕ ವಿಳಂಬ ಖಂಡಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ರಾಜ್ಯ ಸರ್ಕಾರವು ರವಾನಿಸಿದ ಹೆಸರುಗಳನ್ನು ಪರಿಶೀಲಿಸಿ, ಈ ಎರಡು ವಿವಿಗಳ ಮಹಾಕುಲಾಧಿಪತಿಗಳಾದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ ಈ ನೇಮಕ ಮಾಡಿದ್ದಾರೆ.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕುಂಬಾರ್ ಬಸವಂತಪ್ಪ ದೊಡ್ಡಮಲ್ಲಪ್ಪ ಅವರನ್ನು ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಕ ಮಾಡಲಾಗಿದೆ. ಅಧಿಕಾರ ವಹಿಸಿಕೊಂಡ ದಿನಾಂಕದಿಂದ ನಾಲ್ಕು ವರ್ಷಗಳು ಅಥವಾ ಅವರು 67 ವರ್ಷ ವಯಸ್ಸನ್ನು ತಲುಪುವವರೆಗೆ ಅವರು ಕಾರ್ಯನಿರ್ವಹಿಸಲಿದ್ದಾರೆ.

ಇದನ್ನೂ ಓದಿ | ತರಗತಿ ಬಹಿಷ್ಕಾರ, ದೂರು: ಬೆಂಗಳೂರು ವಿಶ್ವವಿದ್ಯಾಲಯ ಸಂಪೂರ್ಣ ಸ್ತಬ್ಧ

Exit mobile version